ಬೆಂಗಳೂರು, ಮೇ 23- ನಗರದಲ್ಲಿ ನಾಲ್ಕು ಕಡೆ ಸರಗಳ್ಳರು ನಾಲ್ವರು ಮಹಿಳೆಯರ ಸರಗಳನ್ನು ಎಗರಿಸಿದ್ದಾರೆ.
ಡಿಜೆ ಹಳ್ಳಿ: ಕನಕನಗರದ 17 ಕ್ರಾಸ್ನಲ್ಲಿ ನಂಜಮ್ಮ ಎಂಬುವವರು ನಿನ್ನೆ ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ನಡೆದು ಹೋಗುತ್ತಿದ್ದಾಗ ಇಬ್ಬರು ಸರಗಳ್ಳರು ಬೈಕ್ನಲ್ಲಿ ಸುತ್ತಾಡುತ್ತ ಇವರ ಕೊರಳಲ್ಲಿದ್ದ 34 ಗ್ರಾಂ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಕಾಮಾಕ್ಷಿಪಾಳ್ಯ: ವೃಷಭಾವತಿನಗರದ 3ನೆ ಮುಖ್ಯರಸ್ತೆಯಲ್ಲಿರುವ ಎಂವಿ ಕನ್ವೆನ್ಷನ್ ಹಾಲ್ಗೆ ಭಾಗ್ಯಲಕ್ಷ್ಮಿ ಎಂಬುವವರು ಮದುವೆಯ ಆರತಕ್ಷತೆಗೆ ಬಂದಿದ್ದು, ಹಾಲ್ ಹೊರಗೆ ಯಾರಿಗೋ ಕಾಯುತ್ತ ನಿಂತಿದ್ದಾಗ ಇದೇ ಮಾರ್ಗವಾಗಿ ಬಂದ ಸರಗಳ್ಳರು ಇವರು ಧರಿಸಿದ್ದ 30 ಗ್ರಾಂ ಎಳೆದುಕೊಂಡು ಪರಾರಿಯಾಗಿದ್ದಾರೆ.
ಸಿದ್ದಾಪುರ: ಜಯನಗರದ ಮೊದಲನೆ ಕ್ರಾಸ್, 10ನೆ ಬಿ ಮುಖ್ಯರಸ್ತೆಯಲ್ಲಿ ವೃದ್ಧೆ ಶಾಂತಮ್ಮ ಎಂಬುವವರು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರು 25 ಗ್ರಾಂ ಸರ ಅಪಹರಿಸಿದ್ದಾರೆ.
ತಿಲಕ್ನಗರ: ಜಯನಗರದ 3ನೆ ಬ್ಲಾಕ್, 12ನೆ ಮುಖ್ಯರಸ್ತೆ, ಎಲ್ಐಸಿ ಕಾಲೋನಿ ಮೂಲಕ ನಿನ್ನೆ ಸಂಜೆ 6 ಗಂಟೆಯಲ್ಲಿ ಪ್ರೇಮಕುಮಾರಿ ಎಂಬುವವರು ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಚೋರರು 30 ಗ್ರಾಂ ಸರ ಎಳೆದುಕೊಂಡು ಪರಾರಿಯಾಗಿದ್ದಾರೆ.
ಈ ನಾಲ್ಕೂ ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ಕಳ್ಳರಿಗಾಗಿ ಶೋಧ ಕೈಗೊಂಡಿದ್ದಾರೆ.