ವಿಶ್ವಕಪ್ನಲ್ಲಿ ಮಿಂಚಿಲಿದ್ದಾರೆ ಈ ಐದು ಸ್ಟಾರ್ ಬೌಲರ್ಸ್: ಬ್ಯಾಟ್ಸ್ಮನ್ಗಳ ನೆರವಾಗೋ ಪಿಚ್ನಲ್ಲಿ ಬಿಗ್ ಚಾಲೆಂಜ್

ಜಂಟಲ್ಮನ್ಸ್‌ ಗೇಮ್‌ ಎಂದೇ ಕರೆಸಿಕೊಳ್ಳುವ ಕ್ರಿಕೆಟ್ನ ಮಹತ್ವದ ಟೂರ್ನಿ ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲ ತಂಡಗಳು ಮಹಾ ಸಮರದಲ್ಲಿ ಬಿಗ್ ಚಾಲೆಂಜ್ನ್ನ ಗೆದ್ದು ವಿಶ್ವ ಕಿರೀಟ ಧರಿಸಲು ಟೊಂಕ ಕಟ್ಟಿ ನಿಂತಿವೆ. ಈ ಬಾರಿಯ ವಿಶ್ವಕಪ್ನಲ್ಲಿ ಸ್ಟಾರ್ ಬೌಲರ್ಸ್ಗಳಿಗೆ ಕಠಿಣ ಸವಾಲಾಗಿದೆ. ಯಾಕಂದ್ರೆ ಬಹುತೇಕ ವಿಶ್ವಕಪ್ ಪಂದ್ಯಗಳು ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ನಡೆಯೋದ್ರಿಂದ ಇಲ್ಲಿನ ಎಲ್ಲಿ ಪಿಚ್ಗಳು ಬ್ಯಾಟಿಂಗ್ ಪಿಚ್ ಆಗಿರುತ್ತೆ . ಹೀಗಾಗಿ ಬೌಲರ್ಸ್ಗಳು ವಿಕೆಟ್ ಪಡೆಯಲು ಹರಸಹಾಸವೇ ಪಡಬೇಕಾಗುತ್ತೆ. ಆದರೆ ಬ್ಯಾಟಿಂಗ್ ಟ್ರ್ಯಾಕ್ನಲ್ಲೂ ವಿಕೆಟ್ ಕೀಳುವ ಚಾಣಾಕ್ಷ ಟಾಪ್ ಕ್ಲಾಸ್ ಬೌಲರ್ಸ್ಗಳು ನಮ್ಮಲ್ಲಿದ್ದಾರೆ.

ಬನ್ನಿ ಹಾಗಾದ್ರೆ ವಿಶ್ವಕಪ್ನಲ್ಲಿ ಮಿಂಚುವ ಟಾಪ್ 5 ಬೌಲರ್ಸ್ಗಳ್ಯಾರು ಅನ್ನೋದನ್ನ ನೋಡೋಣ.

ಜಸ್ಪ್ರೀತ್ ಬೂಮ್ರಾ
ವಿಶ್ವಕಪ್ ಟೀಮ್ ಇಂಡಿಯಾದ ವೇಗದ ಬಲ ಎಂದೇ ಬಿಂಬಿತವಾಗಿರುವ ಯಾರ್ಕರ್ ಕಿಂಗ್ ಬೂಮ್ರಾ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಡೆಡ್ಲಿ ಯಾರ್ಕರ್ ಹಾಕಿ ಘಟಾಘಟಿ ಬ್ಯಾಟ್ಸ್ಮನ್ಗಳನ್ನ ನೆಲಕುರುಳಿಸಿರುವ ಈ ಡೆತ್ ಓವರ್ ಸ್ಪೆಶಲಿಸ್ಟ್ ಮೇಲೆ ಎಲ್ಲತ ಚಿತ್ತ ನೆಟ್ಟಿದೆ. ಇತ್ತಿಚೆಗೆ ಐಪಿಎಲ್ನಲ್ಲಿ ಮುಂಬೈ ಪರ ಸೂಪರ್ ಸ್ಪೆಲ್ ಮಾಡಿದ್ದ ಈ ಡೆತ್ ಓವರ್ ಸ್ಪೆಶಲಿಸ್ಟ್ 16 ಪಂದ್ಯಗಳಿಂದ 19 ವಿಕೆಟ್ ಪಡೆದು ಶೈನ್ ಆಗಿದ್ದಾರೆ. ಯಾರ್ಕರ್, ಡೆತ್ ಓವರ್ ಬೌಲಿಂಗ್ ಹಾಗೂ ಸ್ವಿಂಗ್ ಬೌಲಿಂಗ್ ಬೂಮ್ರಾ ಅಸ್ತ್ರವಾಗಿದೆ. ಐಪಿಎಲ್ ಫಾರ್ಮ್ನ್ನ ಬೂಮ್ರಾ ಆಂಗ್ಲರ ನಾಡಲ್ಲೂ ಮುಂದುವರೆಸಬೇಕಿದೆ.

ಶಾಹಿನ್‌ ಅಫ್ರಿದಿ
ಪಾಕಿಸ್ತಾನವಾಸಿಂ ಅಕ್ರಂ, ವಕಾರ್ ಯೂನಿಸ್ ಹಾಗೂ ಶೋಯಬ್ ಅಖ್ತರ್ಗಳಂತ ದಿಗ್ಗಜ ಬೌಲರ್ಗಳಿದ್ದ ಪಾಕ್ ತಂಡದಲ್ಲಿ ಶಾಹಿನ್ ಅಫ್ರಿದಿ ಎನ್ನುವ ಯುವ ಬೌಲರ್ ಇಂಪ್ರೆಸ್ ಮಾಡಿದ್ದಾರೆ.ಕಳೆದ ವರ್ಷ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಶಾಹಿನ್ ಅಫ್ರಿದಿ 10 ಏಕದಿನ ಪಂದ್ಯದಲ್ಲಿ 19 ವಿಕೆಟ್ ಕಿತ್ತಿದ್ದಾರೆ. 38 ರನ್ನಿಗೆ 4 ವಿಕೆಟ್ ಪಡೆದಿದ್ದು ಬೆಸ್ಟ್ ಪರ್ಫಾಮನ್ಸ್ ಆಗಿದೆ. ಇತ್ತಿಚೆಗೆ ಆತಿಥೇಯ ಆಂಗ್ಲರ ವಿರುದ್ಧದ ಏಕದಿನ ಸಣಿಯಲ್ಲಿ ಶಾಹಿನ್ ಜರ್ಬದಸ್ತ್ ಬೌಲಿಂಗ್ ಮಾಡಿ ಭರವಸೆ ಮೂಡಿಸಿದ್ದಾರೆ.

ಓಶಾನೆ ಥಾಮಸ್
ಹೊಡಿ ಬಡಿ ಆಟಗಾರರ ದಂಡೇ ಇರುವ ವಿಂಡೀಸ್ ತಂಡದಲ್ಲಿ ಓಶಾನೆ ಥೋಮಸ್ ಎನ್ನುವ ದೈತ್ಯ ಬೌಲರ್ ಈ ಬಾರಿಯ ವಿಶ್ವಕಪ್ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.22 ವರ್ಷದ ಥೋಮಸ್ 150ಕಿ.ಮೀ ವೇಗದಲ್ಲಿ ಚೆಂಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ವಿಶೇಷವೆಂದರೆ ಓಶಾನೆ ಥೋಮಸ್ ಭಾರತದ ವಿರುದ್ಧವೇ ಏಕದಿನ ಹಾಗೂ ಟಿ20 ಸರಣಿ ವೇಳೆ ಡೆಬ್ಯು ಮಾಡಿದ್ದರು. .ಸ್ವಿಂಗ್ ಯಾರ್ಕರ್ ಅನ್ನು ಅಸ್ತ್ರವಾಗಿಸಿಕೊಂಡಿರುವ ಥೋಮಸ್ ಕೆರಬಿಯನ್ ಪ್ರೀಮಿಯರ್ ಲೀಗ್ನಲ್ಲಿ 4 ಪಂದ್ಯಗಳಿಂದ 5 ವಿಕೆಟ್ ಪಡೆದು ಮಿಂಚಿದ್ರು. ಈ ಬಾರಿ ಥಾಮಸ್ ಎದುರಾಳಿ ಬ್ಯಾಟ್ಸ್ಮನ್ಗಳನ್ನ ಕಾಡೋದ್ರಲ್ಲಿ ಅನುಮಾನವೇ ಇಲ್ಲ.

ಕಗಿಸೋ ರಬಾಡ
ಕಗಿಸೋ ರಬಾಡ ಸೌತ್ ಆಫ್ರಿಕಾ ತಂಡದ ಸ್ಪೀಡ್ ಸ್ಟಾರ್. ಮೂರು ವರ್ಷಗಳ ಹಿಂದೆ ಡೆಬ್ಯು ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಇಡೀ ವಿಶ್ವಕ್ರಿಕೆಟ್ ತನ್ನತ್ತ ನೋಡುವಂತೆ ಮಾಡಿದ್ರು. ಮೊದಲ ಪಂದ್ಯದಲ್ಲೇ 16 ರನ್ಗೆ 6 ವಿಕೆಟ್ ಪಡೆದು ವಾರ್ನಿಂಗ್ ಕೊಟ್ಟಿದ್ರು. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಮೂಲಕ ಚೊಚ್ಚಲ ಐಪಿಎಲ್ ಆಡಿದ ರಬಾಡ 12 ಪಂದ್ಯಗಳಿಂದ 25 ವಿಕೆಟ್ ಪಡೆದಿದ್ದರು. ಈ ಆವೃತ್ತಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಯಾದಿಯಲ್ಲಿ ರಬಾಡ ದ್ವಿತೀಯ ಸ್ಥಾನದಲ್ಲಿದ್ದಾರೆ.ಡೆತ್ ಓವರ್, ಮಧ್ಯಮ ಕ್ರಮಾಂಕ ಹಾಗೂ ಉತ್ತಮ ಜೊತೆಯಾಟವನ್ನು ಮುರಿಯುವಲ್ಲಿ ರಬಾಡ ನಿಸ್ಸೀಮ. ಯಾವುದೇ ಪಿಚ್ನಲ್ಲೂ ವಿಕೆಟ್ಗಳ ಗೊಂಚಲನ್ನ ಪಡೆಯೋದು ರಬಾಡ ಸ್ಟೈಲ್ ಆಗಿದೆ.

ಮಿಚೆಲ್ ಸ್ಟಾರ್ಕ್
ವಿಶ್ವಯುದ್ದಕ್ಕೂ ಮುನ್ನ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಸ್ಟೀವ್ ಸ್ಮಿತ್ ಮತ್ತು ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ ಅವರ ಕಮ್ಬ್ಯಾಕ್ನಿಂದ ಬಲಿಷ್ಠವಾಗಿದೆ. ಇದೀಗ ಕಳೆದ ಒಂದು ವರ್ಷದಿಂದ ಇಂಜುರಿ ಸಮಸ್ಯೆಯಿಂದಾಗಿ ಹೊರಗಿದ್ದ ತಂಡದ ಸ್ಟಾರ್ ಬೌಲರ್ ಮಿಶೆಲ್ ಸ್ಟಾರ್ಕ್ ಕೂಡ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು ತಂಡಕ್ಕೆ ಆನೆ ಬಲ ಬಂದಂತಾಗಿದೆ. ಮೂರು ವರ್ಷದ ಹಿಂದೆ ತವರಿನಲ್ಲಿ ನಡೆದ ವಿಶ್ವಕಪ್ನಲ್ಲಿ ಮಿಶೆಲ್ ಸ್ಟಾರ್ಕ್ ಬರೋಬ್ಬರಿ 22 ವಿಕೆಟ್ ಪಡೆದು ತಂಡಕ್ಕೆ ವಿಶ್ವಕಪ್ ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ರು. ವೇಗದ ಎಸೆತ, ಬೌನ್ಸರ್ಗಳೇ ಸ್ಟಾರ್ಕ್ಗೆ ವೆಪನ್ ಆಗಿದೆ. ಸ್ಟಾರ್ಕ್ ಕಮ್ಬ್ಯಾಕ್ ಎದುರಾಳಿ ಬ್ಯಾಟ್ಸ್ಮನ್ಗಳನ್ನ ನಿದ್ದೆಗೆಡಿಸಿದೆ.

ಒಟ್ಟಾರೆ ಬ್ಯಾಟ್ಸ್ಮನ್ಗಳಿಗೆ ನೆರವಾಗುವ ಆಂಗ್ಲರ ನಾಡಲ್ಲಿ ಈ ಐದು ಸ್ಟಾರ್ ಬೌಲರ್ಸ್ಗಳು ಇನ್ನಿಲ್ಲದ ಚಾಲೆಂಜ್ ಎದುರಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ