ಸಮೀಕ್ಷೆ ನಿಜವಾದರೆ ಇವಿಎಂ ನಲ್ಲಿ ಗಡಿಬಿಡಿಯಾಗಿದೆ ಎಂದರ್ಥ: ಖರ್ಗೆ

ಕಲಬುರಗಿ: ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಅವರವರ ಮಾಹಿತಿ ಪ್ರಕಾರ ಅವರು ಎಕ್ಸಿಟ್ ಪೋಲ್ ಕೊಟ್ಟಿದ್ದಾರೆ. ನಮಗೆ ಇರುವ ಮಾಹಿತಿ ಮತ್ತು ನಮ್ಮ ಎಕ್ಸಿಟ್ ಪೋಲ್‌ಗು ಇದಕ್ಕೂ ವ್ಯತ್ಯಾಸ ಇದೆ. ಗ್ರೌಂಡ್ ರಿಪೋರ್ಟ್‌ನಲ್ಲಿ ಕೆಲಸ ಮಾಡಿರುವ ನಮ್ಮ ಕಾರ್ಯಕರ್ತರು ಬೇರೆಯದನ್ನೇ ಕೊಟ್ಟಿದ್ದಾರೆ. ಎಕ್ಸಿಟ್‌ ಪೋಲ್‌ನಲ್ಲಿ ಏಳು ಮತ್ತು ಎರಡು ಮೂರು ತೋರಿಸಿದ್ದಾರೆ.

ಕರ್ನಾಟಕದದಲ್ಲಿ ಕನಿಷ್ಟ ಅಂದ್ರು ಏಳೆಂಟು ಸೀಟು ಬಂದಿವೆ ಈ ಹಿಂದೆ. ಒಂದು ವೇಳೆ ಹಾಗೇನಾದ್ರು ಎರಡು ಮೂರು ಬಂದರೆ ಇವಿಎಂ ಗಡಿಬಿಡಿಯಾಗಿದೆ ಎಂದರ್ಥ ಎಂದು ಹೇಳಿದರು.

ಇನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿದೆ, ಇದು ಎಂದಿಗೂ ನಿಜವಾಗುವುದಿಲ್ಲ ಎಂದ ಖರ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಹೇಳಿಕೆಗಳನ್ನು ತಳ್ಳಿ ಹಾಕಿದರು.

ಲೋಕಸಭಾ ಚುನಾವಣೆ ಫಲಿತಾಂಶದ ನಂತರ 20 ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ನಿಂದ ಹೊರನಡೆಯಲಿದ್ದಾರೆ ಎಂಬುದು ಶುದ್ದ ಸುಳ್ಳು ಎಂದಿದ್ದಾರೆ. ಅವರು ಕನಸು ಕಾಣುತ್ತಿದ್ದಾರೆ. ಬಿಜೆಪಿ ಕರ್ನಾಟಕದಲ್ಲಿ ಸರ್ಕಾರ ರಚಿಸುತ್ತದೆ ಎಂಬುದು ಕೇವಲ ಕನಸು. ಅವರಿಗೆ ಸರ್ಕಾರ ರಚಿಸಲು, ಬಹುಮತ ಸಾಬಿತಿಗೆ ಅವಕಾಶ ಒದಗಿದೆ ಎನ್ನುವುದು ಸಹ ಕನಸು ಎಂದು ಖರ್ಗೆ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ