ನವದೆಹಲಿ: ಇವಿಎಂ( ಮತಯಂತ್ರ)ಗಳನ್ನು ವಶಕ್ಕೆ ಪಡೆದು ಫಲಿತಾಂಶಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪ ವಿವೇಚನಾ ರಹಿತವಾದದ್ದು, ಮೇ 23 ರಂದು ಮತಎಣಿಕೆ ನಡೆಯಲಿದ್ದು ಈ ಸಂಬಂಧ ಸ್ಟ್ರಾಂಗ್ ರೂಂಗಳ ಭದ್ರತೆ ವಿಚಾರದಲ್ಲಿ ಎಲ್ಲ ರೀತಿಯ ಶಿಷ್ಟಾಚಾರವನ್ನೂ ಪಾಲಿಸಲಾಗುತ್ತಿದೆ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಇವಿಎಂ, ವಿವಿಪ್ಯಾಟ್ಗಳನ್ನು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಎದುರಿಗೇ ಸೀಲ್ ಮಾಡಲಾಗಿದೆ. ಅದನ್ನು ವಿಡಿಯೋ ಕೂಡ ಮಾಡಲಾಗಿದೆ. ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಲಾಗಿತ್ತು. ಸುಮ್ಮನೆ ಪ್ರತಿಭಟನೆ ನಡೆಸಲಾಗಿದೆ ಎಂದು ಆಯೋಗ ಹೇಳಿದೆ.
ಹಲವು ಇವಿಎಂಗಳನ್ನು ಅನಧಿಕೃತ ಮನೆಯೊಂದರಿಂದ ಇನ್ನೊಂದು ಕಡೆಗೆ ಸಾಗಿಸುತ್ತಿರುವುದಕ್ಕೆ ಸಂಬಂಧಪಟ್ಟಂತೆ ಹಲವು ವಿಡಿಯೋಗಳು ಟ್ವಿಟರ್ನಲ್ಲಿ ಶೇರ್ ಆಗಿ ಅನುಮಾನ ಮೂಡಿಸಿದ್ದವು ಈ ಹಿನ್ನಲೆಯಲ್ಲಿ ಆಯೋಗ ಸ್ಪಷ್ಟನೆ ನೀಡಿದೆ.
ಉತ್ತರ ಪ್ರದೇಶದ ಚಂದೌಲಿಯಲ್ಲಿ ಈ ಘಟ್ನಎ ನಡೆದಿದೆ. ಒಂದು ವಿಡಿಯೋದಲ್ಲಿ ಕೆಲವರು ವಾಹನದಿಂದ ಹಲವು ಇವಿಎಂ, ವಿವಿಪ್ಯಾಟ್ಗಳನ್ನು ಇಳಿಸಿ, ಅದನ್ನೊಂದು ಸ್ಥಳೀಯ ಅಂಗಡಿಯಲ್ಲಿ ಇಡುತ್ತಿರುವುದು ಕಂಡು ಬಂದಿದೆ. ಹಾಗೇ ಇನ್ನೊಂದು ವಿಡಿಯೋವನ್ನು ಆಪ್ ಕಾರ್ಯಕರ್ತನೋರ್ವ ಶೇರ್ ಮಾಡಿದ್ದು, ಪಂಜಾಬ್ನ ಕಾರೊಂದರಲ್ಲಿ ಇವಿಎಂ, ವಿವಿಪ್ಯಾಟ್ಗಳು ಇರುವುದನ್ನು ನೋಡಬಹುದಾಗಿದೆ. ಹೀಗೆ ಹಲವು ವಿಡಿಯೋಗಳೊಂದಿಗೆ ಇವಿಎಂಗಳು ಬದಲಾಗುತ್ತಿವೆ.
ಅವುಗಳನ್ನು ಬೇರೆಡೆಗೆ ಸಾಗಿಸಲಾಗುತ್ತಿದೆ, ಸೂಕ್ತ ಭದ್ರತೆ ನೀಡಿಲ್ಲ ಎಂಬಂಥ ಆರೋಪಗಳು ಕೇಳಿಬಂದಿದ್ದವು. ಹಾಗೇ ಇದನ್ನೇ ಮುಂದಾಗಿಟ್ಟುಕೊಂಡು ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ಕಾರ್ಯಕರ್ತರು ಚಂದೌಲಿಯಲ್ಲಿ ದಿಢೀರ್ ಪ್ರತಿಭಟನೆಯನ್ನೂ ನಡೆಸಿದ್ದರು.
election commission clarification about the alligation of evm manupilation