ವಿಶ್ವಕಪ್‍ಗೂ ಮುನ್ನ ಸೀಕ್ರೆಟ್ ರಿವೀಲ್ ಮಾಡಿದ ಧೋನಿ ಮಾಹಿ ಸೀಕ್ರೇಟ್ ಕೇಳಿ ದಂಗಾದ ತಲೈವಾ ಫ್ಯಾನ್ಸ್

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಧೋನಿ ವಿಶ್ವ ಕಂಡ ಸರ್ವ ಶ್ರೇಷ್ಠ ನಾಯಕ. ಭಾರತ ಕ್ರಿಕೆಟ್ಗೆ ಹೊಸ ದಿಕ್ಕನ್ನ ತೋರಿಸಿದ ನಾವಿಕ. ತಮ್ಮ ಚಾಣಾಕ್ಷ ನಾಯತಕತ್ವದಿಂದಲೇ ವಿಶ್ವದ್ಯಾಂತ ಮಹೇಂದ್ರ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ.

ಟೀಂ ಇಂಡಿಯಾ ಹೊಸ ನಾಯಕನಿಲ್ಲದೇ ಕೊರಗುತ್ತಿದ್ದಾಗ ಬಿಸಿಸಿಐ ಬಿಗ್ ಬಾಸ್ಗಳಿಗೆ ಸಿಕ್ಕಿದ್ದೆ ಮಹೇಂದ್ರ ಸಿಂಗ್ ಧೋನಿ.

ನಾಯಕನಾಗಿ ಸಿಕ್ಕ ಅವಕಾಶಗಳನ್ನ ಚೆನ್ನಾಗಿ ಬಾಚಿಕೊಂಡ ಧೋನಿ 2007ರ ಚೊಚ್ಚಲ ವಿಶ್ವಕಪ್ ಗೆದ್ದು ಕೊಟ್ಟು ತಾನೊಬ್ಬ ಲೆಜೆಂಡ್ ಅನ್ನೋದನ್ನ ಮೊದಲ ಪ್ರಯತ್ನದಲ್ಲೆ ಪ್ರೂವ್ ಮಾಡಿದ್ರು.

ಇದಾದ ನಂತರ ಭಾರತದಲ್ಲಿ ನಡೆದ 2011ರ ವಿಶ್ವಕಪ್ನಲ್ಲಿ ಭಾರತಕ್ಕೆ 28 ವರ್ಷಗಳ ನಂತರ ಐಸಿಸಿ ಏಕದಿನ ವಿಶ್ವಕಪ್ ತಂದುಕೊಟ್ರು. ಇದಕ್ಕೆ ಧೋನಿಯ ಚಾಣಾಕ್ಷ ನಾಯಕತ್ವವೇ ಕಾರಣವಾಯಿತು.

ಎರಡು ವರ್ಷಗಳ ಬಳಿಕ ಇಂಗ್ಲೆಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ರೋಚಕವಾಗಿ ಗೆಲ್ಲುವ ಮೂಲಕ ಧೋನಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಕೊಟ್ರು. ಹೀಗೆ ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದುಕೊಟ್ಟ ವಿಶ್ವದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.

ಇದರ ಜೊತೆಗೆ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮುನ್ನಡೆಸುತ್ತಿರುವ ಧೋನಿ ಮೂರು ಬಾರಿ ತಂಡವನ್ನ ಚಾಂಪಿಯನ್ನಾಗಿ ಮಾಡಿದ್ದಾರೆ.

ಮಾಹಿಯ ಸಾಧನೆ ಒಂದಾ ಎರಡಾ ಇದಕ್ಕೆಲ ಧೋನಿಯ ಚಾಣಕ್ಷತನ. ವಿಕೆಟ್ ಕೀಪಿಂಗ್, ಬ್ಯಾಟಿಂಗ್, ಪೀಲ್ಡ್ ಸೆಟ್ಟಿಂಗ್ ಮತ್ತು ಗೇಮ್ ಪ್ಲಾನ್ನಿಂದಲೇ ಧೋನಿ ವಿಶ್ವದ ಶ್ರೇಷ್ಠ ನಾಯಕರ ಸಾಲಿಗೆ ಬೆಳದು ನಿಂತಿದ್ದಾರೆ.

ನಿವೃತ್ತಿಗೂ ಮುನ್ನ ಬಿಗ್ ಸೀಕ್ರೆಟ್ ರಿವೀಲ್ ಮಾಡಿದ ಧೋನಿ
ಮೊನ್ನೆಯಷ್ಟೆ ಐಪಿಎಲ್ ಫೈನಲ್ನಲ್ಲಿ ವಿರೋಚಿತ ಸೋಲು ಅನುಭವಿಸಿ ಬೇಸರದಿಂದ ಹೊರ ಬಂದು ವಿಶ್ವಕಪ್ ಸಜ್ಜಾಗುತ್ತಿರುವ ಧೋನಿ ಮಹಾ ಸಂಗ್ರಮಕ್ಕೂ ಮುನ್ನ ಬಿಗ್ ಸೀಕ್ರೇಟ್ವೊಂದನ್ನ ರಿವೀಲ್ ಮಾಡಿದ್ದಾರೆ. ಆ ಬಿಗ್ ಸಿಕ್ರೇಟ್ ಏನು ಅನ್ನೋದನ್ನ ನೀವೆ ನೋಡಿ.

ವಿಡಿಯೋ ಒಂದರಲ್ಲಿ ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿರುವ ಧೋನಿ ನಿವೃತ್ತಿಗೂ ಮುನ್ನ ತಮ್ಮ ಪ್ಲಾನ್ಗಳನ್ನ ಹೇಳಿಕೊಂಡಿದ್ದಾರೆ. ನಾನು ನಿಮ್ಮ ಬಳಿ ಸೀಕ್ರೇಟ್ ಒಂದನ್ನ ಹಂಚಿಕೊಳ್ಳಲು ಬಂದಿದ್ದೇನೆ. ನಾನು ಬಾಲ್ಯದಿಂದಲೂ ಪೇಂಟರ್ ಆಗಬೇಕೆಂದು ಬಯಸಿದ್ದೆ. ನಾನು ಇಲ್ಲಿಯವರೆಗೂ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ನಾನೀಗ ಪೇಟಿಂಗ್ ಮಾಡಲು ನಿರ್ಧರಿಸಿ ಕೆಲವು ಪೇಟಿಂಗ್ಗಳನ್ನ ಮಾಡಿದ್ದೇನೆ ಎಂದಿದ್ದಾರೆ.

ಧೋನಿ ಮಾಡಿರುವ ಪೇಟಿಂಗ್ ತುಂಬ ಸಿಂಪಲ್ ಅನಿಸಿದ್ರು ಮಾಹಿಯ ಹೊಸ ಹವ್ಯಾಸಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ವಿಕೆಟ್ ಹಿಂದೆ ಗೇಮ್ ಪ್ಲಾನ್ ಮಾಡಿ ತಂಡವನ್ನ ಗೆಲ್ಲಿಸುವ ಧೋನಿ ಇನ್ನು ಪೇಟಿಂಗ್ನಲ್ಲಿ ಯಾವ ಸಾಧನೆ ಮಾಡಿಲಿದ್ದಾರೆ ಅಂತ ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ದಾರೆ.

ಒಟ್ಟಿನಲ್ಲಿ ಧೋನಿ ಬಾಲ್ಯದ ಕನಸನ ಈಗ ನನಸು ಮಾಡಿಕೊಳ್ಳುವ ಮೂಲಕ ಕನಸಿಗೆ ವಯಸ್ಸಿನ ಹಂಗಿಲ್ಲ ಅನ್ನೋದನ್ನ ಪ್ರೂವ್ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ