ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯವಾಗಿದೆ. ಕೋಮುವಾದಿ ಪಕ್ಷ ದೂರವಿಡಲು ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಿ ಎಂದು ನಾವೇ ಹೇಳಿದ್ದೆವು ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಈ ಮುಲಕ ರೋಷನ್ ಬೇಗ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಕೈ ಬಿಟ್ಟಿದೆ. ಮತಕ್ಕಾಗಿ ಮುಸ್ಲಿಂ ಸಮುದಾಯ ಬಳಸಿಕೊಳ್ಳುತ್ತಿದ್ದಾರೆ. ಕ್ರಿಶ್ಚಿಯನ್ನರಿಗೆ ಒಂದು ಸೀಟನ್ನು ನೀಡಿಲ್ಲ ಮತ್ತು ಮುಸ್ಲಿಮರಿಗೆ ಕೇವಲ ಒಂದೇ ಸೀಟನ್ನು ನೀಡಲಾಗಿದೆ ಎಂಬ ರೋಷನ್ ಬೇಗ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಇಬ್ರಾಹಿಂ, ರೋಷನ್ ಬೇಗ್ ಹೇಳಿರುವುದು ಸರಿಯಾಗಿಯೇ ಇದೆ ಎಂದರು.
ರಾಹುಲ್ ಗಾಂಧಿ ಭೇಟಿಗೆ ತೆರಳುವ ವೇಳೆಯೂ ಮುಸ್ಲಿಂ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದ ಅವರು ಹಿರಿಯರನ್ನು ಭೇಟಿ ಮಾಡಲು ತೆರಳುವ ವೇಳೆ ಎಲ್ಲರನ್ನೂ ಕರೆದುಕೊಂಡು ಹೋಗಬೇಕು ಎಂದಿದ್ದಾರೆ.