ವಿಶ್ವ ಯುದ್ದದಲ್ಲಿ ಅಬ್ಬರಿಸುವ ಬ್ಯಾಟ್ಸ್ಮನ್ಗಳು ಯಾರು ?: ಮಹಾ ಸಂಗ್ರಮದಲ್ಲಿ ಇವರೇ ತಂಡದ ಟ್ರಂಪ್ಕಾರ್ಡ್ಸ್

ವಿಶ್ವಕಪ್ ಮಹಾ ಸಮರಕ್ಕೆ ಇನ್ನು ಸರಿಯಾಗಿ ಹತ್ತು ದಿನಗಳು ಬಾಕಿ ಇವೆ. ಈ ಬಾರಿಯ ವಿಶ್ವಕಪ್ ಬ್ಯಾಟ್ಸಮನ್ಗಳ ಸ್ವರ್ಗ ಆಂಗ್ಲರ ನಾಡಲ್ಲಿ ಮಹಾ ಸಮರ ನಡೆಯುತ್ತಿದೆ. ಈ ಬಾರಿಯ ವಿಶ್ವ ಯುದ್ದದಲ್ಲಿ ಬ್ಯಾಟ್ಸ್ಮನ್ಗಳು ಅಬ್ಬರಿಸಲಿದ್ದಾರೆ.

ಹಾಗಾದ್ರೆ ಬನ್ನಿ ಮಹಾ ಸಂಗ್ರಮದಲ್ಲಿ ಯಾವೆಲ್ಲ ಬ್ಯಾಟ್ಸ್ಮನ್ಗಳು ಅಬ್ಬರಿಸುತ್ತಾರೆ ಅನ್ನೋದನ್ನ ನೋಡೋಣ.

ಎಂಎಸ್ ಧೋನಿ
ಟೀಂ ಇಂಡಿಯಾದ ಮಿಸ್ಟರ್ ಕೂಲ್ , ಇನ್ನಿಂಗ್ಸ್ನ ಕೊನೆಯ ಓವರ್ವರೆಗೆ ಹೋರಾಡುವ ಮಾಹಿ ಯಾವುದೇ ಸಮಯದಲ್ಲೂ ಪಂದ್ಯದ ಗತಿ ಬದಲಿಸಬಲ್ಲ ಚಾಣಾಕ್ಷ .ಈ ಹಿಂದೆ ಕೂಡ ಇಂಗ್ಲೆಂಡ್ ಪಿಚ್ಗಳಲ್ಲಿ ಅದ್ಭುತವಾಗಿ ಆಡಿರುವ ಧೋನಿ ಈ ಬಾರಿ ವಿಶ್ವಕಪ್ನಲ್ಲಿ ಸಿಕ್ಸರ್ಗಳ ಸುರಿಮಳೆಗೈಯುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಧೋನಿ ಒಟ್ಟು 224 ಸಿಕ್ಸರ್ ಸಿಡಿಸಿದ್ದು, 183 ಅವರ ಗರಿಷ್ಠ ರನ್ ಆಗಿದೆ.

ಹಾರ್ದಿಕ್ ಪಾಂಡ್ಯ
ಕಪಿಲ್ ದೇವ್ ಬಳಿಕ ಟೀಂ ಇಂಡಿಯಾ ತಂಡಕ್ಕೆ ಆಲ್ರೌಂಡ್ ವಿಭಾಗಕ್ಕೆ ಜೀವ ತುಂಬಿದ್ದು ಬರೋಡಾ ಸ್ಟಾರ್ ಹಾರ್ದಿಕ್ ಪಾಂಡ್ಯ . ಈಗಾಗಲೇ ಟೀಂ ಇಂಡಿಯಾ ಪರ ಅನೇಕ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಧೋನಿಯ ಹಾಗೇ ಹೆಲಿಕಾಪ್ಟರ್ ಶಾಟ್ ಸಿಡಿಸುವ ಕಲೆ ಕರಗತ ಮಾಡಿಕೊಂಡಿರುವ ಹಾರ್ದಿಕ್ ಏಕದಿನ ಪಂದ್ಯಗಳಲ್ಲಿ 116ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಏಕದಿನದಲ್ಲಿ ಗರಿಷ್ಠ 83ರನ್ ಸಿಡಿಸಿರುವ ಪಾಂಡ್ಯ 36 ಸಿಕ್ಸರ್ ಸಿಡಿಸಿದ್ದಾರೆ. ಇತ್ತಿಚೆಗೆ ಐಪಿಎಲ್ನಲ್ಲಿ ವೇಗದ ಅರ್ಧ ಶತಕ ಬಾರಿಸಿದ್ದು ಹಾರ್ದಿಕ್ ಫಾರ್ಮ್ ಇದಕ್ಕೆ ಉತ್ತರವಾಗಿದೆ.

ರೋಹಿತ್ ಶರ್ಮಾ
ಟೀಂ ಇಂಡಿಯಾದ ಹಿಟ್ಮ್ಯಾನ್ ರೋಹಿತ್ ಶರ್ಮಾ ಕ್ರಿಸ್ಗೆ ಒಮ್ಮೆ ನೆಲಕಚ್ಚಿ ನಿಂತ್ರ ಮುಗೀತು ದಾಖಲೆ ಧೂಳೀಪಟವಾಗಿಬಿಡುತ್ತವೆ. ಕಳೆದ ನಾಲ್ಕು ವರ್ಷಗಳಿಂದ ರನ್ ಹೊಳೆಯನ್ನ ಹರಿಸಿರುವ ರೋಹಿತ್ ರೋಹಿತ್ ಈ ಸಲದ ವಿಶ್ವಕಪ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಈಗಾಗಲೇ ಏಕದಿನದಲ್ಲಿ ರೋಹಿತ್ ಶರ್ಮಾ 218ಸಿಕ್ಸರ್ ಬಾರಿಸಿದ್ದಾರೆ.

ಜೋಸ್ ಬಟ್ಲರ್
ಬೌಲರ್ಗಳ ಪಾಲಿಗೆ ದುಃಸ್ವಪ್ನವಾಗಿ ಕಾಡುವ ಕಾಡುವ ಈ ಆಂಗ್ಲ ಆಟಗಾರ. ಸದ್ಯ ಪಾಕ್ ವಿರುದ್ಧ ನಡೆಯುತ್ತಿರುವ ಏಕದಿನದಲ್ಲಿ ಮಿಂಚು ಹರಿಸಿರುವ ಈ ಪ್ಲೇಯರ್ ಗರಿಷ್ಠ ರನ್ 150 ಹಾಗೂ 116 ಸಿಕ್ಸರ್ ಸಿಡಿಸಿದ್ದಾರೆ. ಎಬಿಡಿಯಂತೆ 360ಡಿಗ್ರಿ ಬ್ಯಾಟ್ಸ್ಮನ್ ಎಂಬ ಖ್ಯಾತಿ ಕೂಡ ಇವರ ಹೆಸರಿನಲ್ಲಿದೆ.

ಜಾನಿಬೈರ್ಸ್ಟೋ
ಕಳೆದೆರಡು ವರ್ಷಗಳಿಂದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಜಾನಿ ದೊಡ್ಡ ಹೊಡೆತಗಳಿಗೆ ಹೇಳಿ ಮಾಡಿಸಿರುವ ಬ್ಯಾಟ್ಸ್ಮನ್. ಇಂಗ್ಲೆಂಡ್ ಪರ 62 ಏಕದಿನ ಪಂದ್ಯಗಳಿಂದ 2297ರನ್ಗಳಿಸಿರುವ ಈ ಪ್ಲೇಯರ್ ಗರಿಷ್ಠ ರನ್ 141. ಹಾಗೂ 51 ಸಿಕ್ಸರ್ ಸಿಡಿಸಿದ್ದಾರೆ.

ಡೇವಿಡ್ ವಾರ್ನರ್
ಆಸಿಸ್ ತಂಡದ ಡ್ಯಾಶಿಂಗ್ ಓಪನರ್ . ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಆಟಗಾರ. ಈಗಾಗಲೇ ಒಂದು ವರ್ಷಗಳ ಕಾಲ ನಿಷೇಧಕ್ಕೊಳಗಾಗಿ ಐಪಿಎಲ್ನಲ್ಲಿ ಮಿಂಚಿರುವ ಡೇವಿಡ್ ವಿಶ್ವಕಪ್ನಲ್ಲಿ ಅಬ್ಬರಿಸಲು ಶುರು ಮಾಡಿದ್ರೆ ತಂಡ ದೊಡ್ಡ ಮೊತ್ತ ಕಲೆ ಹಾಕುವುದು ಕನ್ಫರ್ಮ್. ಏಕದಿನದಲ್ಲಿ ಗರಿಷ್ಠ 197ರನ್ ಸಿಡಿಸಿರುವ ಡೇವಿಡ್ 70 ಸಿಕ್ಸರ್ ಬಾರಿಸಿದ್ದಾರೆ. ಐಪಿಎಲ್ನಲ್ಲಿ ಅಬ್ಬರಿಸಿ ವಾರ್ನರ್ ಎಲ್ಲ ತಂಡಗಳಿಗೂ ವಾರ್ನಿಂಗ್ ಕೊಟ್ಟಿದ್ದಾರೆ.

ಕ್ರಿಸ್ ಗೇಲ್
ಕೆರಿಬಿಯನ್ ದೈತ್ಯ ಆಟಗಾರ. ಕ್ರಿಕೆಟ್ ಜಗತ್ತು ಕಂಡಿರುವ ವಿಶ್ವಶ್ರೇಷ್ಠ ಆರಂಭಿಕ ಆಟಗಾರನಾಗಿರುವ ಗೇಲ್ ಸಿಕ್ಸರ್ಗಳ ಸರದಾರ.ಈಗಾಗಲೇ ನಾಲ್ಕು ಸಲ ವಿಶ್ವಕಪ್ ಆಡಿರುವ ಗೇಲ್ ಈ ಸಲವೂ ಮಿಂಚುವ ವಿಶ್ವಾಸದಲ್ಲಿದ್ದಾರೆ. ತಂಡದ ಪರ 215 ಗರಿಷ್ಠ ರನ್ ಸಿಡಿಸಿರುವ ಈ ಗೇಲ್ 314 ಸಿಕ್ಸರ್ ಬಾರಿಸಿದ್ದಾರೆ.

ಆ್ಯಂಡ್ರೆ ರಸೆಲ್
ತಮ್ಮ ಮಸಲ್ ಪವರ್ ಮೂಲಕ ಚೆಂಡನ್ನ ಸಿಕ್ಸರ್ ಗಡಿ ದಾಟಿಸುವ ಈ ಜಮೈಕಾ ಆಲ್ರೌಂಡರ್ ಮೊನ್ನೆ ಐಪಿಎಲ್ನಲ್ಲಿ ಕೆಕೆಆರ್ ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಈ ಸಲ ವೆಸ್ಟ್ ಇಂಡೀಸ್ ಯಾವುದೇ ಕ್ರಿಕೆಟ್ ತಂಡಕ್ಕೂ ಕಡಿಮೆ ಇಲ್ಲದ ರೀತಿಯಲ್ಲಿ ರನ್ಗಳಿಸಬಲ್ಲದು. ಈಗಾಗಲೇ ಐಪಿಎಲ್ನಲ್ಲಿ ತಮ್ಮ ಸಾಮರ್ಥ್ಯ ತೋರಿಸಿರುವ ರಸೆಲ್ ವಿಶ್ವಕಪ್ನಲ್ಲಿ ಆರ್ಭಟಿಸಲು ಸಜ್ಜಾಗಿದ್ದಾರೆ. ಏಕದಿನದಲ್ಲಿ ಗರಿಷ್ಠ 92ರನ್ ಸಿಡಿಸಿರುವ ರಸೆಲ್ 54 ಸಿಕ್ಸರ್ ಸಿಡಿಸಿದ್ದಾರೆ.

ಫಖಾರ್ ಜಮಾನ್
ಈ ಹಿಂದೆ 2017ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಚಾಂಪಿಯನ್ ಟ್ರೋಪಿಯಲ್ಲಿ ಭಾರತದ ಬೌಲರ್ಗಳಿಗೆ ಮಾರಕವಾಗಿ ಕಾಡಿದ್ದ ಫಾಕರ್ ಜಮಾನ್ ಶತಕ ಸಿಡಿಸಿ ಮಿಂಚಿದ್ದರು. ಏಕದಿನದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್ಮನ್ ಎಂಬ ದಾಖಲೆ ನಿರ್ಮಿಸಿರುವ ಈ ಪ್ಲೇಯರ್ 34 ಪಂದ್ಯಗಳಿಂದ 1585ರನ್ಗಳಿಸಿದ್ದಾರೆ. ಗರಿಷ್ಠ 210ರನ್ಗಳಿಸಿರುವ ಈ ಪ್ಲೇಯರ್ 25 ಸಿಕ್ಸರ್ ಬಾರಿಸಿದ್ದಾರೆ.

ಒಟ್ಟಾರೆ ಈ ಬಾರಿ ವಿಶ್ವಕಪ್ನಲ್ಲಿ ಈ ಸ್ಟಾರ್ ಬ್ಯಾಟ್ಸ್ಮನ್ಗಳೆ ಎಲ್ಲರ ಕೇಂದ್ರ ಬಿಂದುವಾಗಿದ್ದು ರನ್ ಮಳೆ ಸುರಿಸುವ ಆಂಗ್ಲರ ನಾಡಲ್ಲಿ ಇವರು ಹೇಗೆ ಅಬ್ಬರಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ