ಎಕ್ಸಿಟ್ ಪೋಲ್ ಗಳ ವರದಿ ತಪ್ಪು: ಕಾಂಗ್ರೆಸ್ ಮುಖಂಡ ಶಶಿ ತರೂರ್

ನವದೆಹಲಿ: ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಚುನಾವಣೋತ್ತರ ಸಮಿಕ್ಷೆಗಳು ಪ್ರಕಟವಾಗಿದ್ದು,ಎನ್ ಡಿಎ ಗೆ ಬಹುಮತ ಸಿಗಲಿದ್ದು, ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ ಹಿರಿಯ ಮುಖಂಡ ಶಶಿ ತರೂರ್​, ಎಲ್ಲ ಎಕ್ಸಿಟ್​ ಪೋಲ್​ಗಳ ವರದಿಯೂ ತಪ್ಪು ಎಂದಿದ್ದಾರೆ.

ಕಳೆದ ವಾರ ಆಸ್ಟ್ರೇಲಿಯಾದಲ್ಲಿ 56 ವಿಭಿನ್ನ ಮತದಾನೋತ್ತರ ಸಮೀಕ್ಷೆ ನಡೆಸಲಾಗಿತ್ತು. ಆದರೆ ಅವೆಲ್ಲವೂ ತಪ್ಪಾಗಿವೆ. ಭಾರತದಲ್ಲಿ ಬಹುತೇಕ ಜನರು ಸಮೀಕ್ಷಾದಾರರಿಗೆ ಸತ್ಯ ಹೇಳುವುದಿಲ್ಲ. ಕಾರಣ ಅವರು ಸಮೀಕ್ಷಾದಾರರು ಸರ್ಕಾರಕ್ಕೆ ಸೇರಿದವರಾಗಿರುತ್ತಾರೆ ಎಂದು ಭಾವಿಸಿ ಭಯಪಡುತ್ತಾರೆ. 23ರಂದು ಫಲಿತಾಂಶ ಬರುವವರೆಗೆ ಕಾಯಲೇಬೇಕು ಎಂದು ಶಶಿ ತರೂರ್​ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ತರೂರ್, ಕಳೆದವಾರ ಆಸ್ಟ್ರೇಲಿಯಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯನ್ನು ಉಲ್ಲೇಖಿಸಿದ್ದಾರೆ. ಅಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಬುಡಮೇಲಾಗಿ ಲಿಬರಲ್​ ಪಕ್ಷದ ಸ್ಕಾಟ್​ ಮರಿಸನ್​ ಅವರೇ ಮತ್ತೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಲ್ಲಿನ ಬಹುತೇಕ ಸಮೀಕ್ಷೆಗಳು ಈ ಬಾರಿ ಸ್ಕಾಟ್​ ಮರಿಸನ್​ ಯಾವ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದವು.

“Exit Polls Are All Wrong,” Says Shashi Tharoor, Cites Australia Surprise

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ