ನವದೆಹಲಿ: 17ನೇ ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆ ಪ್ರಕಟವಾಗುತ್ತಿದ್ದಂತೆ, ಬಿಜೆಪಿಗೆ ಗೆಲುವಿನ ನಿರೀಕ್ಷೆ ಹೆಚ್ಚಿದೆ. ಈ ಹಿನ್ನಲೆಯಲ್ಲಿ ಫಲಿತಾಂಶ ಪ್ರಕಟಕ್ಕೂ ಮುನ್ನವೇ ಬಿಜೆಪಿ ರಾಷ್ತ್ರಾಧ್ಯಕ್ಷ ಅಮಿತ್ ಶಾ, ಎನ್ ಡಿಎ ನಾಯಕರಿಗೆ ಭೀಜನ ಕೂಟ್ ಏರ್ಪಡಿಸಿದ್ದಾರೆ.
ಮೇ 21 ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಎನ್ಡಿಎ ಮೈತ್ರಿಕೂಟದ ನಾಯಕರಿಗೆ ಭೋಜನ ಕೂಟ ಆಯೋಜನೆ ಮಾಡಿದ್ದಾರೆ. ಮೇ 23ರ ಚುನಾವಣಾ ಫಲಿತಾಂಶದ ಬಳಿಕದ ಬೆಳವಣಿಗೆ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
543 ರಲ್ಲಿ ವೆಲ್ಲೂರು ಕ್ಷೇತ್ರ ಹೊರತುಪಡಿಸಿ, 542 ಲೋಕಸಭಾ ಸ್ಥಾನಗಳಿಗೆ ನಡೆದ ಮತದಾನದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ.
ಮತದಾನ ನಡೆದ ಬಳಿಕ ಮತಗಟ್ಟೆಯಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಮಾಡಲಾದ ಈ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಗೆಲುವು ಸಾಧಿಸಲಿದ್ದರೆ, ಮಹಾಘಟಬಂಧನಕ್ಕೆ ಹಿನ್ನಡೆಯಾಗಲಿದೆ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಕೂಡ ಸರಕಾರ ರಚನೆಯ ಹತ್ತಿರ ಸುಳಿಯುತ್ತಿಲ್ಲ.
Amit Shah to meet NDA leaders, host dinner on May 21