ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಿ 44 ವರ್ಷಗಳು ಕಳೆದಿವೆ. ಆದ್ರೆ, ವಿಶ್ವಕಪ್ ಬೆಳೆದು ಬಂದಿದ್ದ ರೀತಿ ಹಾಗೂ ಜನಪ್ರಿಯತೆ ಮಾತ್ರ ಎಲ್ಲರಿಗೂ ಅಚ್ಚರಿ ಹುಟ್ಟಿಸುತ್ತದೆ. 1975ರ ವಿಶ್ವಕಪ್ ಟುರ್ನಿಯಿಂದ ಇಲ್ಲಿಯ ತನಕ ಐಸಿಸಿ ಎಲ್ಲೂ ಎಡವಿಬಿದ್ದಿಲ್ಲ. ಪ್ರತಿಯೊಂದು ಪ್ಲಾನ್ ಇಂಪ್ಲಿಮೆಂಟ್ ಮಾಡುತ್ತಾ ವಿಶ್ವಕಪ್ಗೆ ಯಾವುದೇ ಧಕ್ಕೆಯಾಗದಂತೆ ನಡೆಸಿಕೊಂಡು ಬಂದಿದೆ. ಈಗ 12ನೇ ವಿಶ್ವಕಪ್ ಟೂರ್ನಿಗೆ ಐಸಿಸಿ ಸಕಲ ತಯಾರಿ ನಡೆಸಿಕೊಂಡಿದೆ. ಆದ್ರೂ ವಿಶ್ವಕಪ್ನ ಇತಿಹಾಸವನ್ನು ಇಣುಕಿ ನೋಡಿದಾಗ ಕ್ರಿಕೆಟ್ ಎಂಬ ಜಂಟಲ್ಮ್ಯಾನ್ ಗೇಮ್ ಎಷ್ಟು ದೂರ ಸಾಗಿದೆ ಎಂದು ಗೊತ್ತಾಗುತ್ತೆ.
ಇಂಗ್ಲೆಂಡ್ ನೆಲದಲ್ಲಿ ಸತತ 2 ವಿಶ್ವಕಪ್ ಗೆದ್ದ ಕೆರಿಬಿಯನ್ಸ್
ಚೊಚ್ಚಲ ವಿಶ್ವಕಪ್ ಟೂರ್ನಿಯ ಚೊಚ್ಚಲ ವಿಶ್ವಕಪ್ ಪಂದ್ಯಕ್ಕೆ ಮುನ್ನುಡಿ ಬರೆದ ದಿನ ಇಂದು ಇತಿಹಾಸದ ಪುಟಗಳಲ್ಲಿ ಇದೆ. ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಭಾರತ, ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತಿತ್ತು. ಮೊದಲ ಹೆಜ್ಜೆಯಲ್ಲಿ ಭಾರತ ಜಾರಿಬಿದ್ರೂ ಬಳಿಕ ವಿಶ್ವ ಬಲಿಷ್ಠ ತಂಡಗಳ ಎದುರು ಭಾರತ ತನ್ನದೇ ಛಾಪು ಮೂಡಿಸಿದೆ. ಮೊದಲ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ವಿಂಡೀಸ್, ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ತಾನ ಜೊತೆಗೆ ಶ್ರೀಲಂಕಾ, ಆಫ್ರಿಕಾ ತಂಡಗಳು ಭಾಗಿಯಾಗಿದ್ದವು. ಆದ್ರೆ, ಬಲಿಷ್ಠ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ವಿಂಡೀಸ್ ಅಬ್ಬರದ ಮುಂದೆ ಇತರೆ ಐದು ತಂಡಗಳು ಆಟ ನಡೆಯಲಿಲ್ಲ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ವಿಂಡೀಸ್ ತಂಡ 17 ರನ್ಗಳಿಂದ ಗೆದ್ದು ಮೊದಲವಿಶ್ವಕಪ್ ಮುಡಿಗೇರಿಸಿಕೊಂಡಿತು. ಈ ಮೂಲಕ ಚೊಚ್ಚಲ ವಿಶ್ವಕಪ್ ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ವೆಸ್ಟ್ ವಿಂಡೀಸ್ ಪಾತ್ರವಾಯ್ತು..
ಇನ್ನೂ 2ನೇ ವಿಶ್ವಕಪ್ಗೂ ಇಂಗ್ಲೆಂಡ್ ವೇಲ್ಸ್ ಮಂಡಳಿಯೇ ಆತಿಥ್ಯವಹಿಸಿತ್ತು. ಈ ಬಾರಿಯೂ 8 ತಂಡಗಳು ವಿಶ್ವಕಪ್ನಲ್ಲಿ ಭಾಗವಹಿಸಿದ್ದವು. ಬಲಿಷ್ಠ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ವಿಂಡೀಸ್ ಅಬ್ಬರದ ಮುಂದೆ ಇತರೆ ಐದು ತಂಡಗಳು ಆಟ ಮತ್ತೆ ನಡೆಯಲಿಲ್ಲ. ಆದ್ರೆ, ಫೈನಲ್ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಮತ್ತೆ ಕ್ಲೇವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ 92 ರನ್ಗಳಿಂದ ಮಣಿಸಿ ಮತ್ತೆ ತನ್ನ ಪಾರಮ್ಯ ಮೆರೆಯಿತು..
1983ರಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ಬರೆದ ಭಾರತ
3ನೇ ವಿಶ್ವಕಪ್ ಟೂರ್ನಿ, ವಿಶ್ವ ಕ್ರಿಕೆಟ್ ಗತಿಯನ್ನೆ ಬದಲಿಸಿದ ಟೂರ್ನಿ. ಕ್ರಿಕೆಟ್ನಲ್ಲಿ ಏನಾದರೂ ಆಗಬಹುದು ಎಂಬುವುದನ್ನು ಪ್ರೂವ್ ಮಾಡಿದ ಟೂರ್ನಿ. ಜಂಟಲ್ಮೆನ್ ಗೇಮ್ಅನ್ನ ಉತ್ತುಂಗಕ್ಕೇರಿಸಿದ ಟೂರ್ನಿ 1983ರ ವಿಶ್ವಕಪ್. ಆದ್ರೆ, 1975, 1979ರಲ್ಲಿ ಗ್ರೂಪ್ ಸ್ಟೇಜ್ನಲ್ಲಿ ಹೊರಬಂದಿದ್ದ ಭಾರತ ಕ್ರಿಕೆಟ್ ಪಂಡಿತರ ಲೆಕ್ಕಾಚಾರಗಳನ್ನೆಲಾ ತಲೆಕೆಲೆಗೆ ಮಾಡಿದ್ರು. ಜಿಂಬಾಬ್ವೆ ವಿರುದ್ಧ ಸೋಲಿನ ಸುಳಿಗೆ ಸಿಲುಕಿದ್ದಾಗ ಕಪಿಲ್ ದೇವ್ ಆಟ ಭಾರತೀಯ ಆಟಗಾರರ ಮನೋಭಾವನೆಯನ್ನ ಬದಲಿಸಿತ್ತು. ಹೊಸ ಚೆತನ್ಯದೊಂದಿಗೆ ಆಡಿದ ಭಾರತ ಫೈನಲ್ನಲ್ಲಿ ವೆಸ್ಟ್ ವಿಂಡೀಸ್ ತಂಡವನ್ನ 43 ರನ್ಗಳಿಂದ ಮಣಿಸಿ ಚೊಚ್ಚಲ ವಿಶ್ವಕಪ್ಗೆ ಮುತ್ತಿಟ್ಟಿತ್ತು.
4ನೇ ವಿಶ್ವಕಪ್ನಲ್ಲಿ ಪಾರಮ್ಯ ಮೆರೆದ ಆಸ್ಟ್ರೇಲಿಯಾ..
4ನೇ ವಿಶ್ವಕಪ್ ಟೂರ್ನಿಗೆ ಭಾರತ ಹಾಗು ಪಾಕಿಸ್ತಾನ ಜಂಟಿ ಆತಿಥ್ಯ ವಹಿಸಿದ್ದವು. 1983ರಲ್ಲಿ ಭಾಗವಹಿಸಿದ್ದ ಎಲ್ಲಾ ತಂಡಗಳು ಈ ಭಾರಿ ವಿಶ್ವಕಪ್ನಲ್ಲಿ ಭಾಗಿಯಾಗಿದ್ದವು. ಆದ್ರೆ, ಈ ಬಾರಿ 60 ಓವರ್ಗಳ ಪಂದ್ಯವನ್ನು 50 ಓವರ್ಗಳಿಗೆ ಇಳಿಸಲಾಗಿತ್ತು. ಈ ಟೂರ್ನಿಯಲ್ಲಿ ಸೆಮಿಫೈನಲ್ಸ್ನಲ್ಲಿ ಭಾರತ, ಇಂಗ್ಲೆಂಡ್ ವಿರುದ್ಧ ಸೋತರೆ. ಆಸ್ಟ್ರೇಲಿಯಾ ಪಾಕ್ ಮಣಿಸಿ ಫೈನಲ್ಸ್ ಗೇರಿತ್ತು. ಫೈನಲ್ ಬ್ಯಾಟಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಅಲನ್ ಬಾರ್ಡರ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ಗೆದ್ದು ಚೊಚ್ಚಲ ವಿಶ್ವಕಪ್ಗೆ ಮುಡಿಗೇರಿಸಿಕೊಂಡಿತು.
1992ರಲ್ಲಿ ಪಾಕಿಸ್ಥಾನ, 1996ರಲ್ಲಿ ಶ್ರೀಲಂಕಾ ಚಾಂಪಿಯನ್
5ನೇ ವಿಶ್ವಕಪ್ ಏಕದಿನ ಕ್ರಿಕೆಟ್ಗೆ ಕಲರ್ಫುಲ್ ಟಚ್ ಕೊಟ್ಟ ಟೂರ್ನಿ. ಕ್ರಾಂತಿಕಾರಿ ಬದಲಾವಣೆಗೆ ಕಾರಣವಾದ ಟೂರ್ನಿ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿಶ್ವಕಪ್ಗೆ ಆತಿಥ್ಯ ನೀಡಿತ್ತು. ಟೆಸ್ಟ್ ಮಾನ್ಯತೆ ಪಡೆದ 8 ತಂಡಗಳ ಜೊತೆಗೆ 9ನೇ ತಂಡವಾಗಿ ಸೌತ್ ಆಫ್ರಿಕಾ ಎಂಟ್ರಿ ಕೊಟ್ಟಿತ್ತು. ಇನ್ನೂ ಆರಂಭದಲ್ಲಿ ಸೋತು, ಗೆದ್ದ ಇಮ್ರಾನ್ ಖಾನ್ ನಾಯಕತ್ವದ ಪಾಕಿಸ್ತಾನ ಫೈನಲ್ಗೆ ಎಂಟ್ರಿಕೊಟ್ಟಿತ್ತು. ಇಂಗ್ಲೆಂಡ್ ವಿರುದ್ಧ 22 ರನ್ಗಳ ಜಯ ಸಾಧಿಸುವ ಮೂಲಕ ಮೊದಲ ವಿಶ್ವಕಪ್ ಗೆದ್ದುಕೊಂಡಿತು.
ಇನ್ನೂ 6ನೇ ವಿಶ್ವಕಪ್ ಟೂರ್ನಿಗೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಜಂಟಿ ಆತಿಥ್ಯ ನೀಡಿದ್ದವು. ಎಲ್ಟಿಟಿಇ ಬೆದರಿಕೆಯಿಂದ ಶ್ರೀಲಂಕಾದಲ್ಲಿ ಆಸ್ಟ್ರೇಲಿಯಾ, ವೆಸ್ಟ್ ವಿಂಡೀಸ್ ತಂಡಗಳು ಆಡಲು ಒಪ್ಪಲಿಲ್ಲ. ಹೀಗಾಗಿ ಭಾರತದಲ್ಲಿ ಆಡಿದವು. ಈ ಟೂರ್ನಿಯಲ್ಲಿ ನೆದರ್ಲೆಂಡ್, ಕೀನ್ಯಾ, ಯುಎಇ ತಂಡಗಳು ಅರ್ಹತೆ ಪಡೆದವು. ಸೆಮಿಫೈನಲ್ಸ್ನಲ್ಲಿ ಭಾರತ ಸೋಲಿನ ದವಡೆಗೆ ಸಿಲುಕಿದ್ದಾಗ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಿತ್ತ ನೆತ್ತಿಗೇರಿತ್ತು. ಈ ವೇಳೆ ಪಂದ್ಯ ಸ್ಥಗಿತಗೊಂಡು ಶ್ರೀಲಂಕಾ ಫೈನಲ್ಗೆ ಏರಿತ್ತು. ಆಸ್ಟ್ರೇಲಿಯಾ ವಿರುದ್ಧ ಸಿಂಹಳೀಯರು 7 ವಿಕೆಟ್ಗಳ ಜಯ ಸಾಧಿಸುವ ಮೂಲಕ ವಿಶ್ವಕಪ್ ಸಿಂಹಾಸನ ಗೆಲ್ಲೋ ಕನಸು ನನಸು ಮಾಡಿಕೊಂಡಿರು.
1999, 2003, 2007ರವರೆಗೆ ಆಸಿಸ್ ದರ್ಬಾರ್
1999ರ ವಿಶ್ವಕಪ್ಗೆ ಮತ್ತೆ ಇಂಗ್ಲೆಂಡ್ ಆತಿಥ್ಯ ವಹಿಸಿತ್ತು. ಈ ಟೂರ್ನಿಯಲ್ಲಿ ಟೆಸ್ಟ್ ಮಾನ್ಯತೆ ಪಡೆದ 9 ತಂಡಗಳೊಂದಿಗೆ ಕೀನ್ಯಾ, ಬಾಂಗ್ಲಾದೇಶ, ಸ್ಕಾಟ್ಲೆಂಡ್ ಎಂಟ್ರಿಕೊಟ್ಟಿದ್ವು. ಈ ಟೂರ್ನಿಯಲ್ಲಿ ಸ್ಟೀವ್ ವಾ ನಾಯಕತ್ವದ ಆಸ್ಟ್ರೇಲಿಯಾ 8 ವಿಕೆಟ್ ಗಳಿಂದ ಪಾಕ್ ತಂಡವನ್ನ ಮಣಿಸಿತು.
2003ರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ದರ್ಬಾರು ಜೋರಾಗಿತ್ತು. ಈ ಟೂರ್ನಿಯಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲವೂ ಹೆಚ್ಚಾಗಿತ್ತು. ಈ ವಿಶ್ವಕಪ್ನಲ್ಲಿ ಒಟ್ಟು 14 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ಸೋಲಿಲ್ಲದ ಸರದಾರನಂತೆ ಪೈನಲ್ಗೆ ಎಂಟ್ರಿಕೊಟ್ಟಿತ್ತು. ಸೌರವ್ ಗಂಗೂಲಿ ನಾಯಕತ್ವದ ಟೀಮ್ ಇಂಡಿಯಾ ಸಹ ಭರ್ಜರಿ ಪ್ರದರ್ಶನದ ಮೂಲಕ ಫೈನಲ್ಗೇರಿತ್ತು. ಆದ್ರೆ, ಫೈನಲ್ನಲ್ಲಿ ಎಡವಿ ಬಿದ್ದ ಭಾರತ, ಆಸ್ಟ್ರೇಲಿಯಾ ವಿರುದ್ಧ 91 ರನ್ಗಳ ಅಂತರದಿಂದ ಸೋಲಬೇಕಾಯಿತು.
2007ರ ವಿಶ್ವಕಪ್ ಹಲವು ಅನುಮಾನಗಳಿಗೆ ಅಚ್ಚರಿಗಳಿಗೆ ಕಾರಣವಾಗಿತ್ತು. ಯಾಕೆಂದರೆ ಈ ಟೂರ್ನಿಯಲ್ಲಿ ಬಾಂಗ್ಲಾ ವಿರುದ್ಧ ಸೋಲುವ ಮೂಲಕ ಟೀಮ್ ಇಂಡಿಯಾ ಲೀಗ್ನಲ್ಲೇ ಹೊರ ಬಿದ್ದಿತ್ತು. ಮತ್ತೊಂದೆಡೆ ಪಾಕಿಸ್ತಾನದ ಕೋಚ್ ಬಾಬಾ ವೂಲ್ಮರ್ ಅನುಮಾನಸ್ಪಾದ ಸಾವು ಟೂರ್ನಿಗೆ ಕಪ್ಪು ಚುಕ್ಕೆಯಾಗಿತ್ತು. ಆದ್ರೆ, ಟೂರ್ನಿಯಲ್ಲಿ ಆಸ್ಟ್ರೇಲಿಯನ್ನರ ಗೆಲುವಿಗೆ ಮಾತ್ರ ಬ್ರೇಕ್ ಬೀಳಲಿಲ್ಲ, ಫೈನಲ್ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ರಿಕ್ಕಿ ಪಾಂಟಿಂಗ್ ನೇತೃತ್ವದಲ್ಲಿ ಹ್ಯಾಟ್ರಿಕ್ ವಿಶ್ವಕಪ್ ಗೆದ್ದ ಏಕೈಕ ತಂಡವಾಗಿ ತನ್ನ ಅಧಿಪತ್ಯ ಸ್ಥಾಪಿಸಿತ್ತು..
2011ರಲ್ಲಿ ಟೀಮ್ ಇಂಡಿಯಾಕ್ಕಿಲ್ಲ ಯಾರು ಸಾಟಿ..
2011ರ ವಿಶ್ವಕಪ್ ಟೂರ್ನಿ ಭಾರತೀಯರ ಪಾಲಿಗೆ ಅವಿಸ್ಮರಣೀಯ ಟೂರ್ನಿ.. ಈ ಟೂರ್ನಿಯಲ್ಲಿ ವಿಶ್ವಕಪ್ ಗೆಲ್ಲಲು 14 ತಂಡಗಳು ಕಣಕ್ಕಿಳಿದಿದ್ದವು. ತೀರಾ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಟೂರ್ನಿಭಾರತಕ್ಕೆ ಪ್ರತಿಷ್ಠೆಯ ಟೂರ್ನಿ ಆಗಿತ್ತು. ಅಂತಿಮವಾಗಿ ಮುಂಬೈನ ವಾಂಖೇಡೆಯಲ್ಲಿ ನಡೆದ ಫೈನಲ್ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನ ಮಣಿಸುವ ಮೂಲಕ 28 ವರ್ಷಗಳ ಬಳಿಕ ವಿಶ್ವಕಪ್ ಗೆದ್ದು ಕೊಂಡಿತು. ಸಚಿನ್ಗೆ ಮರಿಚೀಕೆಯಾಗಿದ್ದ ವಿಶ್ವಕಪ್ ಗೆದ್ದ ಸಚಿನ್ ಪಾಲಿಗೆ ಅವಿಸ್ಮರಣೀಯವಾಗಿಸಿದ್ರು.
ಇನ್ನೂ 2015ರಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಅತಿಥ್ಯ ವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಅತಿಥೇಯ ತಂಡಗಳೇ ವಿಶ್ವಕಪ್ಗಾಗಿ ಹೋರಾಟ ವಿಶೇಷವಾಗಿತ್ತು. ಆದ್ರೆ, ಅಜೇಯವಾಗಿ ಫೈನಲ್ಗೆ ಎಂಟ್ರಿಕೊಟ್ಟಿದ್ದ ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ ಸೋತು ಚೊಚ್ಚಲ ವಿಶ್ವಕಪ್ ಗೆಲುವಿನ ಕನವರಿಕೆಯಲ್ಲಿದ್ದ ನ್ಯೂಜಿಲ್ಯಾಂಡ್ ಅಘಾತ ಅನುಭವಿಸಿತು.. ಈ ಮೂಲಕ 5ನೇ ಬಾರಿಗೆ ವಿಶ್ವಕಪ್ ಆಸ್ಟ್ರೇಲಿಯಾ ಕೈವಶ ಮಾಡಿಕೊಂಡಿತು.
12ನೇ ವಿಶ್ವಕಪ್ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸುತ್ತಿದ್ದು, ವಿಶ್ವಕಪ್ ಗೆಲ್ಲುವ ದೃಷ್ಟಿಯಿಂದ ಎಲ್ಲಾ ತಂಡಗಳು ಈಗಾಗಲೇ ಭರ್ಜರಿ ತಯಾರಿ ನಡೆಸುತ್ತಿವೆ. ನ್ಯೂಜಿಲೆಂಡ್, ಇಂಗ್ಲೆಂಡ್, ಸೌತ್ ಆಫ್ರೀಕಾ ತಂಡಗಳು ಚೊಚ್ಚಲ ವಿಶ್ವಕಪ್ ಗೆಲ್ಲುವ ಕನಸಿನಲ್ಲಿದ್ರೆ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳು ಬಲಿಷ್ಠ ತಂಗಳಿಗೆ ಶಾಕ್ ನೀಡೋಕೆ ರೆಡಿಯಾಗಿವೆ. ಇನ್ನೂ ಟೀಮ್ ಇಂಡಿಯಾ, ಆಸ್ಟ್ರೇಲಿಯಾ, ಪಾಕಿಸ್ತಾನ ವಿಶ್ವಕಪ್ ಗೆಲ್ಲೋ ನೆಚ್ಚನ ತಂಗಳಾಗಿದ್ದು, ಯಾರ ಮುಡಿಗೇರುತ್ತೆ ವಿಶ್ವಕಪ್ ಅನ್ನೋದನ್ನ ಕಾದು ನೋಡಬೇಕಿದೆ.