ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಕಾಯುತ್ತಿರುವ ವಿಶ್ವಕಪ್ಗೆ ಇನ್ನು ಸರಿಯಾಗಿ ಹತ್ತು ದಿನಗಳು ಬಾಕಿ ಇದೆ. ಈ ಬಾರಿಯ ವಿಶ್ವ ಯುದ್ದದ್ದಲ್ಲಿ ಕೊಹ್ಲಿ ಸೈನ್ಯ ಕೂಡ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಸದ್ಯ ಈಗಷ್ಟೆ ಐಪಿಎಲ್ ಮುಗಿದಿರೊದ್ರಿಂದ ಟೀಂ ಇಂಡಿಯಾ ಆಟಗಾರರೆಲ್ಲ ರಿಲ್ಯಾಕ್ಸ್ ಆಗುತ್ತಿದ್ದಾರೆ. ಬನ್ನಿ ಹಾಗಾದ್ರೆ ಯಾವೆಲ್ಲ ಟೀಂ ಇಂಡಿಯಾ ಕೆಲ ಆಟಗಾರರು ಹೇಗೆಲ್ಲ ರಿಲ್ಯಾಕ್ಸ್ ಆಗುತ್ತಿದ್ದಾರೆ ಮತ್ತು ವಿಶ್ವಕಪ್ ಮಹಾ ಸರಕ್ಕೆ ಹೇಗೆಲ್ಲ ತಯಾರಾಗುತ್ತದ್ದಾರೆ ಅನ್ನೊದನ್ನ ನೋಡೋಣ….
ಗೋವಾದಲ್ಲಿ ವಿರೂಷ್ಕಾ ಜೋಡಿ ಸುತ್ತಾಟ
ಒಂದೂವರೆ ತಿಂಗಳು ಐಪಿಎಲ್ನ ಬ್ಯುಸಿ ಶೆಡ್ಯೂಲ್ನಿಂದ ಬಳಲಿದ್ದ ಟೀಮ್ ಇಂಡಿಯಾ ಆಟಗಾರರು, ಇದೀಗ ಖುಷ್ ಆಗಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವಕಪ್ಗೆ ಸಜ್ಜಾಗಬೇಕಿದ್ದ ಆಟಗಾರರು ಸಿಕ್ಕಿರೋ ಅಲ್ಪ ಸಮಯದಲ್ಲೇ ಮಸ್ತಿ ಮೂಡ್‌ಗೆ ಜಾರಿದ್ದಾರೆ. ಐಪಿಎಲ್ 12ನೇ ಸೀಸನ್ನಲ್ಲಿ ತಂಡವನ್ನ ಮುನ್ನಡೆಸುವಲ್ಲಿ ವಿಫಲರಾದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಗೋವಾದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ . ಐಪಿಎಲ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದ ವಿರಾಟ್, ಇದೀಗ ಸಿಕ್ಕಿರೋ ಸಮಯದಲ್ಲಿ ಪತ್ನಿಗಾಗಿ ಸಮಯ ಮೀಸಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಫೋಟೋ ವೈರಲ್ ಆಗಿವೆ..
ಮಾಲ್ಡೀವ್ಸ್ನಲ್ಲಿ ರೋಹಿತ್-ರಿತಿಕಾ ಫುಲ್ ರಿಲ್ಯಾಕ್ಸ್
ಐಪಿಎಲ್ ಗೆದ್ದ ಬಳಿಕ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಪತ್ನಿ ರಿತಿಕಾ, ಮಗಳು ಸಮೈರಾ ಹಾಗು ಕುಟುಂಬ ಸದಸ್ಯರ ಜೊತೆಗೆ ಮಾಲ್ಡೀವ್ಸ್ನ ವಿವಿಧ ಬೀಚ್ಗಳಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಪ್ರವಾಸಿಗರನ್ನು ಕೈಬೀಸಿ ಕರೆಯುವ ಸುಂದರ ತಾಣದಲ್ಲಿನ ಫೋಟೋಗಳು ತಮ್ಮ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿವೈರಲ್ ಆಗಿವೆ. ಇನ್ನೂ ರೋಹಿತ್ ಶರ್ಮಾ ಜೊತೆ ಪತ್ನಿ ಇರೋ ಫೋಟೋ ಅಂತೂ ನೋಡುಗರ ಕಣ್ಮನ ಸೆಳೆಯುತ್ತಿದೆ.
ಇನ್ನೂ ನಾಯಕ ಹಾಗೂ ಉಪನಾಯಕನ ಹಾದಿಯನ್ನೇ ಹಿಡಿದಿರೋ ಟೀಮ್ ಇಂಡಿಯಾ ರಿಸ್ಟ್ ಸ್ಪಿನ್ನರ್ ಯಜುವಿಂದ್ರ ಚಹಲ್, ಇಂಗ್ಲೆಂಡ್ನಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಪ್ರದರ್ಶನದ ಬಗ್ಗೆ ತಲೆಕೆಡಿಸಿಕೊಳ್ಳದೆ. ಗೋವಾದಲ್ಲಿ ಕೂಲ್ ಆಗಿದ್ದಾರೆ.
ಇಂಜುರಿ ಸಮಸ್ಯೆಯಿಂದ ಹೊರ ಬಂದ ಕೇದಾರ್ ಜಾಧವ್
ವಿಶ್ವಕಪ್ಗೂ ಮುನ್ನ ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಐಪಿಎಲ್ ವೇಳೆ ಗಾಯಗೊಂಡು ಟೂರ್ನಿಯಿಂದಲೇ ಹೊರ ನಡೆದಿದ್ದ ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ ಕೇದಾರ್ ಜಾಧವ್ ಇದೀಗ ಫಿಟ್ ಆಗಿದ್ದಾರೆ. ಸಧ್ಯ ಮೆನೆಯಲ್ಲೆ ರಿಲ್ಯಾಕ್ಸ್ ಆಗುತ್ತಿರುವ ಜಾಧವ್ ವಿಶ್ವಕಪ್ಗೆ ತಯಾರಿ ನಡೆಸುತ್ತಿದ್ದಾರೆ.
ವಿಶ್ವಕಪ್ಗೆ ಕೇವಲ ಕೆಲವೇ ದಿನಗಳು ಬಾಕಿ ಇರೋದ್ರಿಂದ, ಆಟಗಾರರಿಗೆ ರೆಸ್ಟ್ ನೀಡೋಕೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ತೀರ್ಮಾನಿಸಿದೆ. ಇನ್ನೆರಡು ದಿನಗಳಲ್ಲಿ ಟೀಮ್ ಇಂಡಿಯಾ ಆಟಗಾರರು ಮುಂಬೈನಲ್ಲಿ ಸೇರಲಿದ್ದಾರೆ. 22ರಂದು ಏಕದಿನ ವಿಶ್ವಕಪ್ಗೆಂದು15 ಸದಸ್ಯರ ಆಟಗಾರರ ತಂಡ ಮತ್ತು ಸಪೋಟಿಂಗ್ ಸ್ಟಾಫ್, ಇಂಗ್ಲೆಂಡ್ ಫ್ಲೈಟ್ ಏರಲಿದ್ದಾರೆ.
ಅದೇನೇ ಆಗಲಿ ಓತ್ತಡದಿಂದ ಆಟಗಾರರು ಹೊರಬಂದು, ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡಲಿ ಅನ್ನೋದೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯ..