ನವದೆಹಲಿ: ಲೋಕಸಭಾ ಚುನಾವಣೆಯ 7ನೇ ಮತ್ತು ಕೊನೆ ಹಂತದ ನಡೆಯುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಕೇದಾರನಾಥ್ ದೇಗುಲ, ಬದರಿನಾಥ ಪ್ರವಾಸವು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ಪ್ರಧಾನಿ ಮೋದಿ ನಡೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಟಿಎಂಸಿ ಚುನಾವಣೆ ಆಯೋಗಕ್ಕೆ ದೂರು ನೀಡಿದೆ.
ಟಿಎಂಸಿ ನಾಯಕ ದೆರೆಕ್ ಒ ಬಹ್ರಿನ್ ನೀಡಿರುವ ದೂರಿನಲ್ಲಿ, ಲೋಕಸಭಾ ಚುನಾವಣೆಯ ಪ್ರಚಾರ ಕೊನೆಗೊಂಡಿರುವ ಹೊತ್ತಲ್ಲೇ ಪ್ರಧಾನಿ ಮೋದಿ ಕೇದಾರನಾಥ ಯಾತ್ರೆ ಕೈಗೊಂಡಿದ್ದಾರೆ ಮತ್ತು ಇದನ್ನು ಎಲ್ಲ ರಾಷ್ಟ್ರೀಯ ಮತ್ತು ಸ್ಥಳೀಯ ವಾಹಿನಿಗಳು ಎರಡು ದಿನ ನಿರಂತರವಾಗಿ ಪ್ರಸಾರ ಮಾಡಿವೆ. ಇದು ಚುನಾವಣೆಯ ಮೇಲೆ ಪರಿಣಾಮ ಬೀರುವುದರಿಂದಾಗಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ.
ಕೇದರನಾಥದ ಅಭಿವೃದ್ಧಿ ಕಾರ್ಯ ಸಿದ್ಧವಾಗಿದೆ ಎಂದು ಘೋಷಿಸಿರುವುದು ಮತ್ತು ಕೇದಾರನಾಥ್‌ನಲ್ಲಿ ಸಾರ್ವಜನಿಕರನ್ನು ಮತ್ತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮೋದಿಯ ಈ ನಡೆಯು ಕಾನೂನು ಬಾಹಿರ. ಮೋದಿಯವರ ಪ್ರತಿ ನಿಮಿಷದ ಚಟುವಟಿಕೆಗಳನ್ನು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಇದು ಮತದಾರರ ಮೇಲೆ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಹಿಂಬದಿಯಿಂದ ಮೋದಿ ಮೋದಿ ಎಂದು ಕೂಗುವ ಶಬ್ದವು ಕೂಡ ಕೇಳಿಬಂದಿದೆ. ಈ ಎಲ್ಲ ಚಲನ ವಲನಗಳು ಚುನಾವಣಾ ದಿನದಂದು ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದಲೇ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಚುನಾವಣೆ ಆಯೋಗವೂ ಕೂಡಲೇ ಈ ವಿರುದ್ಧ ಕ್ರಮ ಕೈಗೊಂಡು ಮಾಧ್ಯಮಗಳಲ್ಲಿನ ಈ ರೀತಿಯ ಪ್ರಸಾರಕ್ಕೆ ತಡೆ ನೀಡಬೇಕು ಎಂದು ಕೋರಿದ್ದಾರೆ.
ಚುನಾವಣೆ ಆಯೋಗವು ಉನ್ನತ ಮಟ್ಟದ ಸಂಸ್ಥೆಯಾಗಿದ್ದು, ಪ್ರಜಾಪ್ರಭುತ್ವದ ಪ್ರಕ್ರಿಯೆಗಳ ಮೇಲೆ ಕಣ್ಣು, ಕಿವಿಯನ್ನು ನೆಟ್ಟಿರಬೇಕಾಗುತ್ತದೆ. ಆದರೆ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ವಿಚಾರದಲ್ಲಿ ಕುರುಡಾಗಿ ಮತ್ತು ಕಿವುಡಾಗಿ ಉಳಿದಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ದೂರಿದ್ದಾರೆ.
TMC Complains to Poll Body Over PM Modi’s Kedarnath Yatra, Calls it ‘Gross’ Violation of Poll Code