ಪ್ಲಾಸ್ಟಿಕ್ ಇಟ್ಟರು ಸಮಸ್ಯೆ, ಪ್ಲಾಸ್ಟಿಕ್ ಸುಟ್ಟರು ಸಮಸ್ಯೆ-ತೇಜಸ್ವಿನಿ ಅನಂತಕುಮಾರ್

ಬೆಂಗಳೂರು, ಮೇ 19- ದೇಶದಲ್ಲಿ ಪ್ಲ್ಯಾಸ್ಟಿಕ್ ಬಳಕೆ ಹೆಚ್ಚಾಗಿದ್ದು. ಪ್ಲ್ಯಾಸ್ಟಿಕ್ ಇಟ್ಟರು ಸಮಸ್ಯೆ, ಸುಟ್ಟರು ಸಮಸ್ಯೆ ಎಂಬ ವಿನೂತನ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ಅದಮ್ಯ ಚೇತನದ ಅಧ್ಯಕ್ಷರಾದ ಡಾ.ತೇಜಸ್ವಿನಿ ಅನಂತಕುಮಾರ ತಿಳಿಸಿದ್ದಾರೆ.

ನಗರದ ಕಸಾಪದಲ್ಲಿ ಡಾ.ಸಿ.ನಂದಿನಿ ಅವರು ರಚಿಸಿರುವ 1947 ನೆನಪು ಅಂದು-ಇಂದು ಹಾಗೂ ಶ್ಯಾಮನಿಲ್ಲದ ಸಂಜೆ ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಾವುವು ಈಗಾಗಲೇ ಎಲï.ಪಿ.ಜಿ. ದಾಸರಾಗಿದ್ದೇವೆ. ಪ್ಲ್ಯಾಸ್ಟಿಕನ್ನು ಮಿತವಾಗಿ ಬಳಸಿ. ಹಸಿರಿನಿಂದ ಕಲಿಕೆ ಹಾಗೂ ಉತ್ಸಾಹ ಹೆಚ್ಚಾಗುತ್ತದೆ. ಈಗಾಗಿ ಹಸಿರು ಭಾನುವಾರ ಎಂಬ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.

ನಗರದಲ್ಲಿರುವ ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಆಹಾರ ಹಾಹಾಕಾರ, ಅಕ್ಷರ ಜ್ಞಾನದ ಕೊರತೆ ಕಂಡು ಅದನ್ನು ತೊಲಗಿಸುವ ದೃಷ್ಟಿಯಿಂದ ಅನಂತಕುಮಾರ್ ಅವರು ಅದಮ್ಯ ಚೇತನ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ನನಗೆ ರಾಜಕೀಯದ ಬಗ್ಗೆ ಅಷ್ಟು ಜ್ಞಾನವಿಲ್ಲ ಎಂದ ಅವರು, ಪತಿ ದಿವಂಗತ ಅನಂತಕುಮಾರ ಅವರ ಸಾಧನೆಗಳನ್ನು ಮೆಲುಕು ಹಾಕಿದರು.

ಇನ್ನೂ ದೇಶಕ್ಕಾಗಿ ಹೋರಾಟ ಮಾಡುವುದು ಎಂದರೆ ರಸ್ತೆಯಲ್ಲಿ ನಿಂತು ಧ್ವಜಹಿಡಿದು ಹೋರಾಟ ಮಾಡುವುದಲ್ಲ. ಕೆಲವರು ಕೆಲವು ಸನ್ನಿವೇಶ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಹುಟ್ಟುಕೊಳ್ಳುತ್ತಾರೆ. ದೇಶ ಬದಲಿಸುವ ಶಕ್ತಿ ಸಾಹಿತ್ಯ ಹಾಗೂ ಅಕ್ಷರಕ್ಕೆ ಇದೆ ಎಂದರು.

ಕಸಾಪ ಸದಸ್ಯ ಬೈರಮಂಗಲ ರಾಮೇಗೌಡ ಅವರು ಕಾದಂಬರಿ ಕುರಿತು ಮಾತನಾಡಿ, ಒಂದು ಕೃತಿಯಲ್ಲಿ ಎರಡು ಧರ್ಮದ ಕೋಮು ಗಲಭೆಗಳ ಬಗ್ಗೆ ಸ್ವಚ್ಛಂದವಾಗಿ ನಂದಿನಿ ಅವರು ರಚಿಸಿದ್ದಾರೆ. ಇನ್ನೊಂದು ಕಾದಂಬರಿಯಲ್ಲಿ ದೇಶದಲ್ಲಿ ಹೆಣ್ಣನ್ನು ನೋಡುತ್ತಿರುವ ದೃಶ್ಯ ಹಾಗೂ ಅವರ ನಟೆ, ನರ್ತನ, ಕಲೆ, ಕೌಶಲ್ಯಗಳನ್ನು ಸಮಾಜ ಹೇಗೆ ನೋಡ್ತಿದ್ದಾರೆ ಎಂಬುವುದರ ಬಗ್ಗೆ ಹೇಳಿದ್ದಾರೆ. ವರ್ತಮಾನ ಸಂದರ್ಭದಲ್ಲಿ ಈ ಕಾದಂಬರಿಗಳನ್ನು ಓದುವುದು ತುಂಬ ಅವಶ್ಯಕತೆ ಇದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಬಲ ಅವರ ಕಾದಂಬರಿಗಳಿಗೆ ಇದೇ ಎಂದು ಶ್ಲಾಘಿಸಿದರು.

ಇದೇ ವೇಳೆ ಲೇಖಕಿ.ಡಾ.ಸಿ.ನಂದಿನಿ ಅವರನ್ನು ಅಭಿನಂದಿಸಲಾಯಿತು.

ಕಸಾಪ ಅಧ್ಯಕ್ಷ ನಾಡೋಜ ಡಾ.ಮನುಬಳಿಗಾರ್, ದಾಸರಹಳ್ಳಿ ಸಾಹಿತ್ಯ ಪರಿಷತ್ತನ ವೈ.ಬಿ.ಹೆಚ್.ಜಯದೇವ್, ಲೇಖಕ ಕಂನಾಡಿಗ ನಾರಾಯಣ, ಕರ್ನಾಟಕ ಲೇಖಕಿಯರ ಸಂಘದ ಮನಮೂಲ ಸಂಪನ್ನ ಕುಮಾರ್, ಎನ್.ಆರ್.ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ