ರೈಲಿಗೆ ಸಿಕ್ಕಿ ಅಪರಿಚಿತ ವ್ಯಕ್ತಿ ಸಾವು

ಬೆಂಗಳೂರು, ಮೇ 19- ಯಶವಂತಪುರ ಯಲಹಂಕ ರೈಲ್ವೆ ನಿಲ್ದಾಣ ಸಮೀಪ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.
ಸುಮಾರು 35ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಗೋಧಿ ಬಣ್ಣ, 5 ಅಡಿ ಎತ್ತರ, ಅಗಲ ಹಣೆ, ಸಾಧಾರಣ ಶರೀರ ಹೊಂದಿದ್ದಾನೆ.
ಮೃತನ ಬಲಗೈ ಮೊಣಕೈ ಮೇಲೆ ಡಿ.ಪಿ. ರಾಧಮ್ಮ, ಪಾಪೇಗೌಡ್ರು, ಡಿ.ಪಿ. ಎಂಬ ಗುರುತು ಇದೆ. ಎಡಗೈ ಮೊಣಕೈ ಮೇಲೆ ಹಳೆ ಸುಟ್ಟ ಗಾಯದ ಗುರುತು ಇದೆ.

ಬಿಳಿ ಬಣ್ಣದ ಡಿಸೈನ್‍ವುಳ್ಳ ಅರ್ಧ ತೋಳಿನ ಶರ್ಟ್, ಕೆಂಪು-ಕಂದು ಬಣ್ಣ ಮಿಶ್ರಿತ ಪ್ಯಾಂಟ್, ಕಂದು ಬಣ್ಣದ ಬನಿಯನ್ ಧರಿಸಿದ್ದಾನೆ. ಮೃತದೇಹವನ್ನು ಎಮ್.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇಡಲಾಗಿದೆ.
ವಾರಸುದಾರರಿದ್ದಲ್ಲಿ ಯಶವಂತಪುರ ರೈಲ್ವೆ ಪೆÇಲೀಸ್ ಠಾಣೆ ಮೊಬೈಲ್ ನಂಬರ್ 9480802118 ಸಂಪರ್ಕಿಸುವಂತೆ ಕೋರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ