ನಂಜನಗೂಡು, ಮೇ 19- ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ರೈತರುಗಳ ಬಾಳೆ ಬೆಳೆ ನೆಲಕಚ್ಚಿರುವ ಘಟನೆ ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ.
ಬಿರುಗಾಳಿ ಮತ್ತು ಆಲಿಕಲ್ಲು ಮಳೆ ಸುರಿದ ಪರಿಣಾಮ ಸುಮಾರು 10ಕ್ಕೂ ಹೆಚ್ಚು ರೈತರ 8 ಎಕರೆಯಲ್ಲಿ ಬೆಳೆದಿದ್ದ ಬಾಳೆ ಬೆಳೆ ನೆಲಕಚ್ಚಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ರೈತರು ತಿಳಿಸಿದ್ದಾರೆ.
ಗ್ರಾಮದ ಪ್ರಸಾದ್, ಮಧು, ಬಸವಣ್ಣ, ದೊರೆಸ್ವಾಮಿ, ಶಿವನಂಜಪ್ಪ, ಗುರುಸಿದ್ದಪ್ಪ, ಶಿವಪ್ಪ, ಶಿವಸ್ವಾಮಿ ಎಂಬ ರೈತರು, ಬೋರ್ವೆಲ್ ಆಶ್ರಯದಲ್ಲಿ ಬಾಳೆ ಬೆಳೆ ಬೆಳೆದಿದ್ದು, ನೆನ್ನೆ ಸುರಿದ ಭಾರೀ ಬಿರುಗಾಳಿ ಸಹಿತ ಮಳೆಗೆ ಬೆಳೆ ನೆಲ ಕಚ್ಚಿದೆ. ಪ್ರಕೃತಿ ವಿಕೋಪ ಪರಿಹಾರದಡಿಯಲ್ಲಿ ಸೂಕ್ತ ಪರಿಹಾರವನ್ನು ಕೊಡಿಸುವಂತೆ ಮನವಿ ಮಾಡಿದ್ದಾರೆ.