ವೈದ್ಯನಿಂದ 180 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ; ದಶಕಗಳ ನಂತರ ವಿಚಾರ ಬೆಳಕಿಗೆ

ವಾಷಿಂಗ್ಟನ್​: ಅಮೆರಿಕದ ಓಹಿಯೋ ಸ್ಟೇಟ್​ ವಿಶ್ವ ವಿದ್ಯಾಲಯದಲ್ಲಿ ಆರೋಗ್ಯ ಮೇಲ್ವಿಚಾರಣೆ ಮಾಡುತ್ತಿದ್ದ ವೈದ್ಯನೋರ್ವ 170ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ವಿಚಾರ ಎರಡು ದಶಕಗಳ ನಂತರ ಬೆಳಕಿಗೆ ಬಂದಿದೆ. ಈ ವಿಚಾರ ಕಾಲೇಜು ಸಿಬ್ಬಂದಿಗೆ ಗೊತ್ತಿದ್ದರೂ ಅವರು ಮೌನ ವಹಿಸಿದ್ದರು ಎನ್ನಲಾಗಿದೆ.

ಡಾ.ರಿಚರ್ಡ್​​ ಸ್ಟ್ರಾಸ್​ 1978-98ರವರೆಗೆ ಓಹಿಯೋ ಸ್ಟೇಟ್​ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದಲ್ಲಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಣೆ ಮಾಡುತ್ತಿದ್ದ.

ರಿಚರ್ಡ್ 177 ಯುವಕರಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಆತ ಮೃತಪಟ್ಟ ನಂತರದಲ್ಲಿ ಈ ಪ್ರಕರಣದ ತನಿಖೆ ವರದಿ ಬಂದಿದೆ. ರಿಚರ್ಡ್ ಲೈಂಗಿಕ ಕಿರುಕುಳ ನೀಡಿದ್ದ ವಿಚಾರ ತನಿಖೆಯಲ್ಲಿ ಸಾಬೀತಾಗಿದೆ.

1979ರಲ್ಲಿ ಕಾಲೇಜು ಸಿಬ್ಬಂದಿಗೆ ಈ ವಿಚಾರ ತಿಳಿದಿತ್ತು. ಆದರೆ, 1996ರವರೆಗೆ ಈ ವಿಷಯ ಬೆಳಕಿಗೆ ಬಂದಿರಲಿಲ್ಲ. ಯಾರೊಬ್ಬರೂ ದೂರನ್ನೂ ನೀಡಿರಲಿಲ್ಲ.

ನಂತರ ವೈದ್ಯನ ಬಗ್ಗೆ ದೂರುಗಳು ಬರಲು ಆರಂಭವಾದವು. ಪ್ರಾಥಮಿಕ ತನಿಖೆಯ ವರದಿ ಬಂದ ನಂತರ ಆತನನ್ನು ಕೆಲಸದಿಂದ ತೆಗೆದು ಹಾಕಲಾಯಿತು.

ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಬಹಿರಂಗವಾಗಿ ಕ್ಷಮೆಯಾಚಿಸಿದೆ. ಬಹಿರಂಗವಾದ ವಿಚಾರ ಎಲ್ಲರಿಗೂ ಆಘಾತ ನೀಡಿದೆ ಎಂದಿದೆ. ಈ ಮೊದಲು ಕೂಡ ಅಮೆರಿಕದ ಹಲವಿ ವಿಶ್ವ ವಿದ್ಯಾಲಯಗಳಲ್ಲಿ ಇದೇ ಮಾದರಿಯ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ