ಕೇದರನಾಥಕ್ಕೆ ಭೇಟಿ ನೀಡಲಿರುವ ಪ್ರಧಾನಿ; ನಾಳೆ ಬದ್ರಿನಾಥ್​ಗೆ ಪ್ರವಾಸ

ನವದೆಹಲಿ: ಲೋಕಸಭಾ ಚುನಾವಣಾ ಕೊನೆ ಹಂತದ ಮತದಾನ ನಾಳೆ ನಡೆಯಲಿದ್ದು, ಅದಕ್ಕೂ ಮುನ್ನ ಮೋದಿ ಟೆಂಪಲ್​ ರನ್​ ನಡೆಸಲಿದ್ದಾರೆ. ಇಂದು ಉತ್ತರಖಂಡದ ಕೇದರನಾಥಕ್ಕೆ ಭೇಟಿ ನೀಡಲಿರುವ ಮೋದಿ ಅಲ್ಲಿಯೇ ರಾತ್ರಿ ಕಳೆಯಲಿದ್ದಾರೆ. ನಾಳೆ ಬದ್ರಿನಾಥ್​ಕ್ಕೆ ಭೇಟಿ ನೀಡಲಿದ್ದಾರೆ.

ಮೋದಿ ಚುನಾವಣೆ ಎದುರಿಸುತ್ತಿರುವ ವಾರಣಾಸಿ ಕ್ಷೇತ್ರ ಸೇರಿದಂತೆ 59 ಕ್ಷೇತ್ರಗಳಲ್ಲಿ ನಾಳೆ ಕೊನೆಯ ಹಾಗೂ ಏಳನೇ ಹಂತದ ಮತದಾನ ನಡೆಯಲಿದೆ.

ಕೇದರನಾಥ್​ನಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾದ ಬಳಿಕ, ಆ ಪ್ರದೇಶದಲ್ಲಿ ನಡೆಯುತ್ತಿರುವ ಪುನರ್​ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ.  ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಪ್ರಧಾನಿ ಭೇಟಿ ಅಧಿಕೃತವಾಗಿರುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ, ಚುನಾವಣಾ ನೀತಿ ಆಯೋಗ ಜಾರಿಯಲ್ಲಿರುವದನ್ನು ಮರೆಯಬಾರದು ಎಂದು ಚುನಾವಣಾ ಆಯೋಗ ಪ್ರಧಾನಿ ಕಚೇರಿಗೆ ಸೂಚನೆ ನೀಡಿದೆ.

ಇಂದು ಕೇದರನಾಥ ಭೇಟಿ ಬಳಿಕ ಅಲ್ಲಿಯೇ ತಂಗಲಿರುವ ಪ್ರಧಾನಿ ಮೋದಿ, ನಾಳೆ ಮಧ್ಯಾಹ್ನ ದೆಹಲಿಯಿಂದ ಬದ್ರಿನಾಥ್​ಗೆ ಪ್ರಯಾಣಿಸಲಿದ್ದಾರೆ. ಕಳೆದ ನವೆಂಬರ್​ನಲ್ಲಿ ದೀಪಾವಳಿ ಸಮಯದಲ್ಲಿ ಕೂಡ ಮೋದಿ ಕೇದರ್​ನಾಥ್​ಗೆ ಭೇಟಿ ನೀಡಿದ್ದರು. 2017ರಲ್ಲಿ ಕೂಡ ಎರಡು ಬಾರಿ ಪ್ರಧಾನಿ ಮೋದಿ ಇಲ್ಲಿಗೆ ಆಗಮಿಸಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ