ಪ್ರಜ್ಞಾ ಸಿಂಗ್​ ಠಾಕೂರ್​ನಂಥವರು, ಗಾಂಧೀಜಿಯವರ, ಭಾರತದ ಆತ್ಮವನ್ನೇ ಹತ್ಯೆಗೈಯುತ್ತಿದ್ದಾರೆ; ಕೈಲಾಶ್ ಸತ್ಯಾರ್ಥಿ

ನವದೆಹಲಿ: ನಾಥುರಾಮ್​ ಗೋಡ್ಸೆ ಕುರಿತ ವಾದ-ವಿವಾದಗಳು ಮುಂದುವರಿಯುತ್ತಲೇ ಇದೆ. ಈ ನಡುವೆ ನೊಬೆಲ್​ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಬಿಜೆಪಿ ಅಭ್ಯರ್ಥಿ ಸಾದ್ವಿ ಪಜ್ನಾ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭೋಪಾಲ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್​ ಠಾಕೂರ್​ ನಾಥುರಾಮ್​ ಗೋಡ್ಸೆಯನ್ನು ದೇಶಭಕ್ತ ಎಂದಿದ್ದರು. ಆದರೆ ಅವರ ಹೇಳಿಕೆಯಿಂದ ಬಿಜೆಪಿ ಸೇರಿ ಎಲ್ಲ ಪಕ್ಷಗಳೂ ವಿರೋಧಿಸಿದ್ದು, ಮೋದಿಯವರೂ ಕೂಡ ಈ ವಿಚಾರದಲ್ಲಿ ಪ್ರಜ್ಞಾ ಅವರನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.

ಇದೇ ವೇಳೆ ಟ್ವೀಟ್​ ಮಾಡಿರುವ ಕೈಲಾಶ್ ಸತ್ಯಾರ್ಥಿ, ಗೋಡ್ಸೆ ಗಾಂಧಿಯ ದೇಹವನ್ನು ಹತ್ಯೆಗೈದ. ಆದರೆ ಪ್ರಜ್ಞಾ ಸಿಂಗ್​ ಠಾಕೂರ್​ನಂಥವರು, ಗಾಂಧೀಜಿಯವರ, ಭಾರತದ ಆತ್ಮವನ್ನೇ ಹತ್ಯೆಗೈಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಜ್ಞಾ ಸಿಂಗ್​ ಠಾಕೂರ್ ರಂಥ ಹಲವು ಜನರು ಶಾಂತಿ, ಅಹಿಂಸೆ, ಸಹನೆಗಳನ್ನು ಕೊಲೆ ಮಾಡುತ್ತಿದ್ದಾರೆ. ಗಾಂಧಿಯವರು ಪಕ್ಷ, ರಾಜಕೀಯಕ್ಕೂ ಮೀರಿ ಬೆಳೆದಂಥ ವ್ಯಕ್ತಿ. ಬಿಜೆಪಿ ನಾಯಕರು ತಮ್ಮ ಲಾಭದ ಆಸೆಯನ್ನು ಬಿಟ್ಟು ಗಾಂಧಿ ವಿರುದ್ಧ ಹೇಳಿಕೆ ನೀಡುತ್ತಿರುವ ತಮ್ಮ ಪಕ್ಷದವರನ್ನು ಉಚ್ಚಾಟನೆ ಮಾಡಿ ರಾಜಧರ್ಮ ಪಾಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Godse Killed Gandhi, Pragya Killed His Soul”, Says Kailash Satyarthi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ