ಬೆಂಗಳೂರು: ಲೋಕಸಭಾ ಚುನಾವಣೆ ಸಮರ ಇನ್ನೇನು ಕೊನೆ ಘಟ್ಟಕ್ಕೆ ಬಂದು ತಲುಪಿದ್ದು, ಅಂತಿಮ ಹಂತದ ಮತದಾನ ಮಾತ್ರ ಬಾಕಿಯಿದೆ. ಈ ನಡುವೆ ನಾಥುರಾಮ್ ಗೋಡ್ಸೆ ಕುರಿತ ವಿವಾದಾತ್ಮಕ ಹೇಳಿಕೆಗಳು ಭುಗಿಲೆದ್ದಿದೆ. ಬಿಜೆಪಿ ಸಂಸದ ನಳೀನ್ ಕುಮಾರ್ ಕಟಿಲು ಗೋಡ್ಸೆಗಿಂತ, ಕಸಬ್ ಗಿಂತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮಹಾನ್ ಕ್ರೋರಿ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ನೀಡಿದ ಹೇಳಿಕೆ ಈಗ ದೇಶಾದ್ಯಂತ ಹೊಸ ಹೊಸ ವಿವಾದಗಳನ್ನು ಹೆಚ್ಚಿಸಲು ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ’ನಾಥೂರಾಮ್ ಗೋಡ್ಸೆಗಿಂತ ರಾಜೀವ್ ಗಾಂಧಿ ಮಹಾಕ್ರೂರಿ’ ಎಂದು ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.
ಟ್ವಿಟರ್ನಲ್ಲಿ ಗಾಂಧಿಯನ್ನು ಕೊಂದ ಗೋಡ್ಸೆ ‘ಹಿಂದೂ ಉಗ್ರ’ನಾಗಲು ಹೇಗೆ ಸಾಧ್ಯ? ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000 ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು? ಎಂದು ಸಮ್ಸದ ನಳೀನ್ ಕುಮಾರ್ ಟ್ವೀಟ್ ಮಾಡಿದ್ದಾರೆ.
rajiv gandhi was more cruel than godse & kasab , mp nalin kumar kateel tweet