ಪ್ರತಿ ಧರ್ಮದಲ್ಲೂ ಭಯೋತ್ಪದನೆ ಇರುತ್ತದೆ ಎಂದ ಕಮಲ ಹಾಸನ್

ಕೊಯಮತ್ತೂರು: ನಟ, ರಾಜಕಾರಣಿ ಕಮಲ್ ಹಾಸನ್ ಅವರು ನೀಡಿದ ಮತ್ತೊಂದು ಹೇಳಿಕೆ ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಪ್ರತಿಯೊಂದು ಧರ್ಮವೂ ತನ್ನದೇ ಆದ ಭಯೋತ್ಪಾದಕರನ್ನು ಹೊಂದಿದೆ ಎಂದು ಹೇಳಿದ್ದಾರೆ.

ಗೋಡ್ಸೆಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದ ನಟ ಕಮಲ್ ಹಾಸನ್ ಮೇಲೆ ಚಪ್ಪಲಿ,ಮೊಟ್ಟೆ ಕಲ್ಲು ತೂರಾಟ ಮಾಡಲಾಗಿತ್ತು. ತಮ್ಮ ಮೇಲಿನ ದಾಳಿಗಳ ಕುರಿತು ಪ್ರತಿಕ್ರಿಯೆ ನೀಡಿರುನ ನಟ ಕಮಲ್ ಹಾಸನ್, ಪ್ರತಿಯೊಂದು ಧರ್ಮವೂ ತನ್ನದೇ ಆದ ಭಯೋತ್ಪಾದಕರನ್ನು ಹೊಂದಿದೆ.

ಇದೇ ಹಿನ್ನಲೆಯಲ್ಲಿ ನಾನು ಹೇಳಿಕೆ ನೀಡಿದ್ದೆ. ಒಂದು ವೇಳೆ ನನ್ನ ಬಂಧಿಸುವುದಾದರೇ ಬಂಧಿಸಲಿ.. ಆದರೆ ನನ್ನ ಬಂಧನದಿಂದ ಮತ್ತಷ್ಟು ಸಮಸ್ಯೆಗಳು ಉದ್ಭವವಾಗಲಿದೆ. ಇದು ಎಚ್ಚರಿಕೆಯಲ್ಲ ಕೇವಲ ಸಲಹೆ ಮಾತ್ರ ಎಂದು ಹೇಳಿದ್ದಾರೆ.

ಪ್ರತೀಯೊಂದು ಧರ್ಮದಲ್ಲಿ ಅದರದೇ ಆದ ಭಯೋತ್ಪಾದನೆ ಇರುತ್ತದೆ. ನಾವು ಯಾರೂ ಪವಿತ್ರರು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಪ್ರತೀಯೊಂದು ಧರ್ಮದಲ್ಲೂ ಆತಂಕವಾದಿಗಳು ಇದ್ದಾರೆ ಎಂಬುದನ್ನು ಇತಿಹಾಸವೇ ತಿಳಿಸಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ