ಐಪಿಎಲ್ನಲ್ಲಿ ಹೇಗಿತ್ತು ಟೀಂ ಇಂಡಿಯಾ ಆಟಗಾರರ ಪರ್ಫಾಮನ್ಸ್ ? ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ರು ಧೋನಿ, ಕೊಹ್ಲಿ

ಎರಡು ತಿಂಗಳಕಾಲ ಕ್ರಿಕೆಟ್ ಅಭಿಮಾನಿಗಳನ್ನ ರಂಜಿಸಿದ್ದ ಐಪಿಎಲ್ ಟೂರ್ನಿ ಮುಗಿದಿದೆ. ಇನ್ನೂ ರೋಚಕತೆಯಿಂದ ಸಾಗಿದ ಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದು, ನಾಲ್ಕನೇ ಬಾರಿಗೆ ಐಪಿಎಲ್ ಕಿರೀಟಕ್ಕೆ ಮುತ್ತಿಕ್ಕಿದೆ. ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಇನ್ನೂ ಸಂಭ್ರಮಾಚರಣೆಯಲ್ಲಿದ್ದರೆ.

ಇತ್ತ ಎಲ್ಲರ ಚಿತ್ತ ಆಂಗ್ಲರ ನಾಡಿನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಮೇಲೆ ಬಿದ್ದಿದೆ. ಹೀಗಾಗಿಯೇ ಐಪಿಎಲ್ನಲ್ಲಿ ಟೀಮ್ ಇಂಡಿಯಾ ಆಟಗಾರರರ ಪ್ರದರ್ಶನ ಈಗ ಚರ್ಚಾನೀಯ ವಿಷಯವಾಗಿದೆ.

ಐಪಿಎಲ್ನಲ್ಲಿ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನ ಹೇಗಿತ್ತೆಂದರೆ, ಇಬ್ಬರು ಹಿಟ್, ಮೂವರು ಆವರೇಜ್, ಇನ್ನೂ ಉಳಿದವರೆಲ್ಲಾ ಫ್ಲಾಪ್ ಎಂಬಂತೆ ಇತ್ತು. ಇದೀಗ ಆಟಗಾರರ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಹಾಗೂ ಕ್ರಿಕೆಟ್ ಪಂಡಿತರ ಚಿಂತೆಗೆ ಕಾರಣವಾಗಿದೆ. ಅಸಲಿಗೆ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನ ಹೇಗಿತ್ತು ಅನ್ನೋದನ್ನ ನಾವು ತೋರಿಸ್ತೀವಿ ನೋಡಿ..

ಐಪಿಎಲ್ನಲ್ಲಿ ರಾಹುಲ್, ಹಾರ್ದಿಕ್ ಸೂಪರ್ ಹಿಟ್
ಟೀಮ್ ಇಂಡಿಯಾದ ಕುಚುಕುಗಳು ಅಂದ್ರೆ ಅದು ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ, ಈ ಇಬ್ಬರು ಕಮಾಲ್ ಮಾಡಿದಷ್ಟು ಇನ್ಯಾವ ಭಾರತೀಯ ಆಟಗಾರನು ಐಪಿಎಲ್ನಲ್ಲಿ ಸದ್ದು ಮಾಡಲಿಲ್ಲ. ಇನ್ನೂ ಟೂರ್ನಿಯಲ್ಲಿ 1 ಶತಕ, 6 ಅರ್ಧ ಶತಕ ಸಹಿತ 593 ರನ್ಗಳನ್ನ ಬಾರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಆಡಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಬ್ಯಾಟಿಂಗ್ ಅಂತೂ ಅಭಿಮಾನಿಗಳನ್ನ ತುಗಿಗಾಲಿನಲ್ಲಿ ನಿಲ್ಲಿಸಿತ್ತು.

ಟೂರ್ನಿಯಲ್ಲಿ 402 ರನ್ ಸಹಿತ 14 ವಿಕೆಟ್ ಕಬಳಿಸುವ ಮೂಲಕ ಐಪಿಎಲ್ನಲ್ಲಿ ಗಮನ ಸೆಳೆದರು. ಇನ್ನೂ ಈಗ ವಿಶ್ವಕಪ್ ಮೇಲೆ ದೃಷ್ಟಿ ನೆಟ್ಟಿರುವ ಹಾರ್ದಿಕ್ ಪಾಂಡ್ಯಾ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.

ಶಿಖರ್ ಧವನ್, ವಿರಾಟ್ ಕೊಹ್ಲಿ, ಧೋನಿ ಮಿಂಚು..!
ಐಪಿಎಲ್ನಲ್ಲಿ ಆವರೇಜ್ ಫರ್ಪಾಮೆನ್ಸ್ ನೀಡಿದ ಆಟಗಾರರೆಂದರೆ ಶಿಖರ್ ಧವನ್, ವಿರಾಟ್ ಕೊಹ್ಲಿ, ಧೋನಿ ಆಗಿದ್ದಾರೆ. ಇವ್ರ ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆಯುತ್ತಾರೆ. ಇನ್ನೂ ಈ ಆಟಗಾರರು ದಿ ಬೆಸ್ಟ್ ಏಕದಿನ ಆಟಗಾರರಾಗಿದ್ದು, ವಿಶ್ವಕಪ್ನಲ್ಲಿ ಇವರ ಪ್ರದರ್ಶನದ ಮೇಲೆ ಟೀಮ್ ಇಂಡಿಯಾದ ರಿಸಲ್ಟ್ ಇರುತ್ತೆ. ಹೀಗಾಗಿ ಈ ಆಟಗಾರರು ವಿಶ್ವಕಪ್ ಜಾತ್ರೆಯಲ್ಲಿ ಸದ್ದು ಮಾಡಲೇಬೇಕು. ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಅಗ್ರ ಕ್ರಮಾಂಕದಲ್ಲಿ ತಮ್ಮ ಖದರ್ ತೋರಿಸಬೇಕಿದೆ. ಇನ್ನೂ ಐಪಿಎಲ್ನಲ್ಲಿ ಆವರೇಜ್ ಬ್ಯಾಟಿಂಗ್ ಫರ್ಪಾಮೆನ್ಸ್ ನೀಡಿರೋ ಹಿಟ್ಮ್ಯಾನ್ ವಿಶ್ವಕಪ್ನಲ್ಲಿ ಹಿಟ್ಟಿಂಗ್ ಆಟ ಆಡಬೇಕು.

ರೋಹಿತ್ ಲಯಕ್ಕೆ ಬರುವುದು ಕೂಡ ಇಂಪಾರ್ಟೆಂಟ್ ಆಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ನಡೆಸಿದೆ ಕೀರ್ತಿ ಧೋನಿಗೆ ಸೇರುತ್ತೆ. ಅಲ್ದೇ ಈ ಟೂರ್ನಿಯಲ್ಲಿ ಒಬ್ಬಂಟಿಯಾಗಿ ತಂಡದ ಗೆಲುವಿಗೆ ಹೋರಾಡಿದ ಧೋನಿ, ವಿಶ್ವಕಪ್ನಲ್ಲಿ ಅಗ್ರಕ್ರಮಾಂಕ ಕೈಕೊಟ್ಟರೆ ತಂಡವನ್ನು ಗೆಲುವಿನ ದಡ ಸೇರಿಸುವ ಹೊಣೆ ಧೋನಿ ಮೇಲಿದೆ.

ದಿನೇಶ್, ಕೇದಾರ್, ವಿಜಯ್ ಫ್ಲಾಪ್ ಪರ್ಫಾಮೆನ್ಸ್..!
ತಮ್ಮ ಅದೃಷ್ಟ ಎಂಬಂತೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಖುಷಿಯಲ್ಲಿದ್ದ ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ಐಪಿಎಲ್ನಲ್ಲಿ ಮಾತ್ರ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಹಂಚಲಿಲ್ಲ. ತಮ್ಮ ಫ್ಲಾಪ್ ಪರ್ಫಾಮೆನ್ಸ್ ಮೂಲಕವೇ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು. ಏ.. ಚೇ.. ಇಂಥಾ ಆಟಗಾರರನ್ನಾ ಬಿಸಿಸಿಐ ವಿಶ್ವಕಪ್ಗಾ.. ಆಯ್ಕೆ ಮಾಡೋದು ಅಂತ ತಮ್ಮ ತಮ್ಮಲ್ಲೇ ಜರಿದರು. ಸದ್ಯ ಐಪಿಎಲ್ನಲ್ಲಿ ಗಾಯಗೊಂಡಿರುವ ಕೇದಾರ್ ಜಾಧವ್ ಇಂಗ್ಲೆಂಡ್ ಪ್ಲೈಟ್ ಹತ್ತುವುದು ಸಹ ಡೌಟ್ ಆಗಿದೆ. ಹೀಗಾಗಿಯೇ ಮೊದಲ ವಿಶ್ವಕಪ್ ಟೂರ್ನಿಯ ಕನಸಿನಲ್ಲಿದ್ದ ಕೇದಾರ್ ಜಾಧವ್ ವಿಶ್ವಕಪ್ ಭವಿಷ್ಯ ತೂಗು ಉಯ್ಯಾಲೆಯಲ್ಲಿದ್ದು, 23ರವರೆಗೆ ಕಾದು ನೋಡಬೇಕಾಗುತ್ತೆ.

ಇನ್ನೂ ಐಪಿಎಲ್ನಲ್ಲಿ ತಲಾ 14 ಪಂದ್ಯಗಳನ್ನಾಡಿರುವ ಕೇದಾರ್ ಜಾಧವ್ 162 ರನ್ ಸಿಡಿದಿದ್ರೆ, ದಿನೇಶ್ ಕಾರ್ತಿಕ್ 253 ರನ್ ಬಾರಿಸಿದ್ದಾರೆ. 15 ಪಂದ್ಯಗಳನ್ನಾಡಿರುವ ವಿಜಯ್ ಶಂಕರ್ ಟೂರ್ನಿಯಲ್ಲಿ ದಾಖಲಿಸಿದ್ದು 244 ರನ್ ಮಾತ್ರ..

ಚಹಲ್, ಬೂಮ್ರಾ, ಶಮಿ ಓಕೆ.. ಭುವಿ, ಕಲದೀಪ್ ಬಗ್ಗೆನೇ ಚಿಂತೆ..!
ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ಚರ್ಚೆಯಾಗಿದ್ದೆ ಭಾರತೀಯ ಬೌಲರ್ಗಳು, ವಿಶ್ವಕಪ್ ಟೂರ್ನಿಗೆ ಆಯ್ಕೆಯಾದರೂ ಟೂರ್ನಿಯಲ್ಲಿ ಕನಿಷ್ಟ ದೇಶಿಯ ಬೌಲರ್ ಮಾಡಿದ ಸಾಧನೆಯನ್ನು ಟೀಮ್ ಇಂಡಿಯಾ ಬೌಲರ್ಗಳು ಮಾಡುವಲ್ಲಿ ಕಂಪ್ಲೀಟ್ ಫೇಲ್ ಆಗಿದ್ದಾರೆ. ಇದರಲ್ಲಿ ಮುಖ್ಯವಾಗಿ ಕಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್ ದುಬಾರಿಯಾಗಿದ್ದು, ಇನ್ನುಳಿದ ಜಸ್ಪ್ರೀತ್ ಬೂಮ್ರಾ ರನ್ ವೇಗಕ್ಕೆ ಕಡಿವಾಣ ಹಾಕಿದ್ರೂ, ಹೆಚ್ ವಿಕೆಟ್ ಕೀಳೋದ್ರಲ್ಲಿ ಮಾತ್ರ ವಿಫಲರಾಗಿದ್ದಾರೆ.16 ಪಂದ್ಯಗಳನ್ನಾಡಿ 19 ವಿಕೆಟ್ಗಳನ್ನು ಮಾತ್ರ ಈ ಡೆತ್ ಸ್ಪೆಷಲಿಸ್ಟ್ ಬೌಲರ್ ಕಬಳಿಸಿದ್ದಾರೆ. ಸ್ಪೀಡ್ ಸ್ಟಾರ್ ಮೊಹಮ್ಮದ್ ಶಮಿ 14 ಪಂದ್ಯಗಳಿಂದ 19 ವಿಕೆಟ್ ಕಬಳಿಸಿದ್ರೂ ಬ್ಯಾಟ್ಸ್ಮನ್ಗಳಿಂದ ದಂಡನೆಗೊಳಾಗಾಗಿದ್ದೆ ಹೆಚ್ಚು. ಆರಂಭದಲ್ಲಿ ಸ್ವಲ್ಪ ಚಹಲ್ ಮ್ಯಾಜಿಕ್ ನಡೆದ್ರೂ ತಂಡಕ್ಕೆ ಗೆಲುವು ತಂದುಕೊಡಬಲ್ಲ ಆಟವಾಡಿಲ್ಲ. ಹೀಗಾಗಿಯೇ ಇಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ