ಹಾವು ಕಚ್ಚಿ ಇಬ್ಬರು ಮಕ್ಕಳ ಸಾವು

ಬೆಳಗಾವಿ,ಮೇ 16: ಆಟವಾಡುತ್ತಿದ್ದ ಮಕ್ಕಳಿಬ್ಬರಿಗೆ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಡೆದಿದೆ.

ರಾಜಾಪುರ ಕಟ್ಟಿಕಾರ ತೋಟದ ಸಿದ್ಧಪ್ಪ ಭೀಮಪ್ಪ ಅವರ ಪುತ್ರಿ ಕಾವೇರಿ(6), ಪುತ್ರ ಮುತ್ತುರಾಜ್(6 ತಿಂಗಳು) ಮೃತ ಮಕ್ಕಳು.

ಕೃಷಿಕರಾಗಿರುವ ಸಿದ್ದಪ್ಪ ಭೀಮಪ್ಪ ಕಟ್ಟಿಕಾರ ದಂಪತಿ ಮಕ್ಕಳನ್ನು ತೋಟದ ಮನೆಯ ಹೊರಗೆ ಆಟವಾಡಲು ಬಿಟ್ಟು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು.

ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳಿಗೆ ಹಾವು ಕಚ್ಚಿದೆ. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ