ಚಿಟಗುಪ್ಪ: ಇಲ್ಲಿಯ ಪುರಸಭೆ 12ನೇ ವಾಡ್೯ ರಿಂದ ಕಾಂಗ್ರಸ್ ಅಭ್ಯರ್ಥಿಯಾಗಿ ಶಿರಿಲ್ ರೂಪ್ ಕುಮಾರ ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ತಮ್ಮ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ ಶಿರಿಲರೂಪ್ ಕುಮಾರ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಿರಿಲರೂಪ್ ಕುಮಾರ, ವಾಡ್೯ ಜನರ ಒತ್ತಾಯದ ಮೇರೆಗೆ ಚುನಾವಣೆ ಕಣಕ್ಕೆ ಇಳಿದಿರುವೆ. ಸರ್ವ ಜನಾಂಗದ ಬೆಂಬಲವಿದ್ದು, ಭಾರಿ ಬಹುಮತದಿಂದ ಗೆಲ್ಲುವ ವಿಶ್ವಾದ ಇದೆ ಎಂದು ಹೇಳಿದ್ದರು.
ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಆಡಳಿತವಿದ್ದು, ಹಲವು ಜನಪ್ರಿಯ ಯೋಜನೆಗಳು ನೀಡಿವೆ. ಬರುವ ದಿನಗಳಲ್ಲಿ ಜಿಲ್ಲಾ, ರಾಜ್ಯ ಮಟ್ಟದ ನಾಯಕರು ಪ್ರಚಾರಕ್ಕೆ ಬರಲಿದ್ದಾರೆ ಎಂದು ಹೇಳಿದರು.
ಮುಖಂಡರಾದ ಪೀಟರ್ ಚಿಟಗುಪ್ಪ, ಸ್ಯಾಮಸನ್, ಬ್ರೆಜಿಲ್, ಎಲಿಯಾ ಇತರರಿದ್ದರು.