12ನೇ ಆವೃತ್ತಿಯ ಐಪಿಎಲ್ ಟೂರ್ನಿ ಅಂತ್ಯಗೊಂಡಿದೆ. ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟಕ್ಕೆ ಏರಿದೆ. ಐಪಿಎಲ್ನ ಮೋಸ್ಟ್ ಸಕ್ಸಸ್ಫುಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ 1 ರನ್ನಿಂದ ವಿರೋಚಿತ ಸೋಲು ಕಂಡಿತು. ಗೆಲುವಿಗಾಗಿ ಪರಸ್ಪರ ಜಿದ್ದಾಜಿದ್ದಿನ ಹೋರಟ ಸೇರಿದಂತೆ ಹಲವು ರೋಚಕತೆಗಳಿಗೆ ಐಪಿಎಲ್ ಸಾಕ್ಷಿ ಆಗಿರುತ್ತೆ. ಇಂಥಹ ಎಷ್ಟೋ ರೋಚಕ ಕ್ಷಣಗಳಿಗೆ ಈ ಬಾರಿಯ ಐಪಿಎಲ್ ಟೂರ್ನಿಯೂ ಸಾಕ್ಷಿಯಾಗಿದೆ.. ಅಂತಹ ಟಾಪ್ ಮೂಮೆಂಟ್ಸ್ ಯಾವುದು ಅನ್ನೋದನ್ನ ನೋಡೋಣ ಬನ್ನಿ,..
ಒಂದು ರನ್ನಿಂದ ಫೈನಲ್ ಗೆದ್ದ ಮುಂಬೈ ಇಂಡಿಯನ್ಸ್..!
ಈ ಬಾರಿಯ ಐಪಿಎಲ್ ಟೂರ್ನಿ ಫೈನಲ್ ಎರಡು ಬಲಿಷ್ಠ ತಂಡಗಳ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾಯ್ತು. ಚೆನ್ನೈ ಸೂಪರ್ ಕಿಂಗ್ಸ್-ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಈ ಫೈನಲ್ ಬ್ಯಾಟಲ್ ಎಷ್ಟು ರೋಚಕತೆಯನ್ನು ಹುಟ್ಟಿಸಿತ್ತೆಂದರೆ ನೋಡುಗರಿಗೆ ಮಾತ್ರ ಅದು ಅರ್ಥವಾಗಿರುತ್ತೆ. ಮುಂಬೈ ನೀಡಿದ್ದ 149 ರನ್ಗಳ ಗುರಿ ಬೆನ್ನಟ್ಟಿದ್ದ ಚೆನ್ನೈ 1 ರನ್ನಿಂದ ಶರಣಾಯಿತು. ಮಲಿಂಗಾ ಎಸೆದ ಆ ಕೊನೆ ಎಸೆತದಲ್ಲಿ ದೀಪಕ್ ಚಹರ್ಗೆ ಔಟ್ ಮಾಡೋ ಮೂಲಕ ಗೆಲುವಿನ ರೂವಾರಿಯಾದ್ರು. ಆದ್ರೆ, ಕೊನೆಯ ಎಸೆತದವರೆಗೂ ಸಾಗಿದ್ದ ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಮಲಿಂಗಾ ಎಸೆದ ಆ ಓವರ್ ಎಂದಿಗೂ ಕ್ರಿಕೆಟ್ ಅಭಿಮಾನಿಗಳ ಮನಸಿನಲ್ಲೇ ಇರುತ್ತೆ.
ಚೆನ್ನೈ ವಿರುದ್ಧ ರಾಯಲ್ ಚಾಲೆಂಜರ್ಸ್ಗೆ ಹೀನಾಯ ಸೋಲು
12ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ-ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಮಂಡಿಯೂರಿತ್ತು. ಕೇವಲ 70 ರನ್ಗಳಿಗೆ ಆಲೌಟ್ ಆಗೋ ಮೂಲಕ ರಾಯಲ್ ಚಾಂಲೆಜರ್ಸ್ ಟೂರ್ನಿಯಲ್ಲಿ ಕನಿಷ್ಟ ಮೊತ್ತಕ್ಕೆ ಆಲೌಟ್ ಆದ ಕುಖ್ಯಾತಿಗೆ ಪಾತ್ರವಾಯ್ತು. ಜೊತೆಗೆ ಆರಂಭಿಕ ಪಂದ್ಯಗಳಲ್ಲಿ ಸತತ 6 ಸೋಲು ಕಂಡ ತಂಡ ಎಂಬ ಬೇಡವಾದ ತಂಡವಾಗಿಯೂ ಗುರುತಿಸಿಕೊಳ್ತು..
ಸಿಎಸ್ಕೆ ವಿರುದ್ಧ ಆರ್ಸಿಬಿಗೆ ರೋಚಕ ಗೆಲುವು
ಐಪಿಎಲ್ ಉದ್ಘಾಟನಾ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಪಡೆ, ಧೋನಿ ಸೈನ್ಯದ ಎದುರು ತಲೆಬಾಗಿತ್ತು. ಆದ್ರೆ, ಸಿಎಸ್ಕೆ ವಿರುದ್ಧದ ಲೀಗ್ ಹಂತದ 2ನೇ ಪಂದ್ಯದಲ್ಲಿ ಆರ್ಸಿಬಿ 1 ರನ್ನಿಂದ ರೋಚಕ ಗೆಲುವು ಸಾಧಿಸಿತ್ತು. ಈ ಮೂಲಕ 5 ವರ್ಷಗಳ ಬಳಿಕ ಚೆನ್ನೈ ವಿರುದ್ಧ ಆರ್ಸಿಬಿ ಗೆದ್ದ ಸಾಧನೆ ಮಾಡಿತು. ಇನ್ನೂ ಈ ಪಂದ್ಯದಲ್ಲಿ ಕೊನೆ ಓವರ್ನಲ್ಲಿ ಗೆಲ್ಲಲು ಚೆನ್ನೈಗೆ 24 ರನ್ಗಳ ಬೇಕಾಗಿತ್ತು. ಆದ್ರೆ, ಕ್ರೀಸ್ನಲ್ಲಿದ್ದ ಧೋನಿ ಆ ಓವರ್ನಲ್ಲಿ 2 ಸಿಕ್ಸರ್ 2 ಫೊರ್, 2 ರನ್ ಬಾರಿಸಿದ್ದರು, ಇನ್ನೂ ಕೊನೆ ಎಸೆತದಲ್ಲಿ ಚೆನ್ನೈ ಗೆಲುವಿಗೆ 2 ರನ್ ಅಗತ್ಯವಿತ್ತು. ಧೋನಿಯಿಂದ ಉಮೇಶ್ ಯಾದವ್ ಲಾಸ್ಟ್ ಬಾಲ್ ಡಾಟ್ ಮಾಡಿಸಿದರು. ಬೈಸ್ ಮೂಲಕ ರನ್ ತೆಗೆಯಲು ಮುಂದಾದ ದೀಪಕ್ ಚಹರ್ಗೆ ಪಾರ್ಥಿವ್ ಪಟೇಲ್ರ ಸ್ಟ್ರೈಟ್ ಹಿಟ್ ವಿಕೆಟ್ಗೆ ಬೀಳ್ತದ್ದಂತೆ ಆರ್ಸಿಬಿ 1 ರನ್ನಿಂದ ಪಂದ್ಯ ಗೆದ್ದು ಕೊಂಡಿತ್ತು..
ಸರ್ವ ಶ್ರೇಷ್ಠ ದಾಖಲೆ ಬರೆದ ಅಲ್ಜಾರಿ ಜೋಸೆಫ್..!
ಮುಂಬೈ ಇಂಡಿಯನ್ಸ್ ಪರ ಆಡಿದ ಮೊದಲ ಪಂದ್ಯದಲ್ಲೇ ಅಲ್ಜಾರಿ ಜೊಸೆಫ್ ಎಲ್ಲರ ಗಮನಸೆಳೆದರು. 12 ರನ್ ನೀಡಿ 6 ವಿಕೆಟ್ ಕಬಳಿಸಿ ಐಪಿಎಲ್ ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಿಸಿದರು. ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅಲ್ಜಾರಿ ಜೊಸೆಫ್ ಬೌಲಿಂಗ್ ಸರ್ವಶ್ರೇಷ್ಠ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 2008ರಲ್ಲಿ ಪಾಕಿಸ್ತಾನ ವೇಗಿ ಸೊಹೈಲ್ ತನ್ವೀರ್ ಅSಏ ವಿರುದ್ಧ 14 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇದೀಗ ಈ ದಾಖಲೆ ಪುಡಿಯಾಗಿದೆ.
ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಶ್ರೇಯಸ್, ಸ್ಯಾಮ್ ಕರನ್
12ನೇ ಆವೃತ್ತಿಯಲ್ಲಿ ಇಬ್ಬರು ಯುವ ಆಟಗಾರರು ಹ್ಯಾಟ್ರಿಕ್ ವಿಕೆಟ್ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ.ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮಾರ್ಕಸ್ ಸ್ಟೊಯ್ನಿಸ್ ವಿಕೆಟ್ ಕಬಳಿಸೋ ಮೂಲಕ ಕನ್ನಡಿಗ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಈ ಮೂಲಕ 12ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ 20 ವರ್ಷದ ಯುವ ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಕರನ್ ಡೆಲ್ಲಿ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.
ಬಾಲ್ ಬಿದ್ರು, ಔಟ್ ಆಗಲಿಲ್ಲ ಬ್ಯಾಟ್ಸ್ಮನ್ಸ್..!
ರಾಜಸ್ಥಾನ ವಿರುದ್ಧ ಧೋನಿ ಬ್ಯಾಟ್ ಬೀಸುತ್ತಿದ್ದಾಗ ಆರ್ಚರ್ ಬೌಲಿಂಗ್ನಲ್ಲಿ ಬಾಲ್ ವಿಕೆಟ್ಗೆ ತಾಗಿತು. ಆದ್ರೆ, ಬೇಲ್ಸ್ ಬೀಳದ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಔಟ್ ಆಗಲಿಲ್ಲ. ಇದೇ ರೀತಿ ಚೆನ್ನೈ – ಪಂಜಾಬ್ ನಡುವಿನ ಪಂದ್ಯದಲ್ಲೂ ಮರುಕಳಿಸಿತ್ತು. ಕ್ರೀಸ್ನಲ್ಲಿದ್ದ ಕೆ.ಎಲ್.ರಾಹುಲ್ ಒಂದು ರನ್ಗಾಗಿ ಯತ್ನಿಸುತ್ತಾರೆ. ಆದ್ರೆ, ಧೋನಿಯ ಚಾಣಾಕ್ಷ ಕೀಪಿಂಗ್ಗೆ ಹೆದರಿ ಹಿಂತಿರುಗುತ್ತಾರೆ. ಈ ವೇಳೆ ಧೋನಿ ಎಸೆದ ಬಾಲ್ ವಿಕೆಟ್ ಬಿದ್ದರು ಬೇಲ್ಸ್ ಬೀಳದೆ ರಾಹುಲ್ ಬಚಾವ್ ಆಗ್ತಾರೆ..
ಒಟ್ಟಾರೆ ಈ ಬಾರಿಯ ಐಪಿಎಲ್ ರೋಚಕ ರಸದೌತಣಗಳನ್ನ ಕೊಟ್ಟು ಅಭಿಮಾನಿಗಳ ಮನಸಲ್ಲಿ ಅಚ್ಚ ಹಸಿರಾಗಿ ಉಳಿಯುವಂತೆ ಮಾಡಿದೆ.