ನವದೆಹಲಿ: ಸಾಮಾನ್ಯವಾಗಿ ಯಾರದೋ ಮಾತು ಕೇಳಿ ಅಥವಾ ಆನ್ಲೈನ್ನಲ್ಲಿ ನೋಡಿ ಲೈಫ್ ಇನ್ಸುರೆನ್ಸ್ ಪಾಲಿಸಿ ಮಾಡಿಸಿಕೊಳ್ಳುತ್ತೇವೆ. ಪಾಲಿಸಿ ಮಾಡಿಸಿದ ನಂತರ ಒಲ್ಲದ ಮನಸ್ಸಿನಿಂದ ಪ್ರೀಮಿಯಮ್ ಹಣ ಪಾವತಿಸಲು ಹಿಂದೇಟು ಹಾಕುತ್ತೇವೆ. ಹೀಗೆ ಸಮಸ್ಯೆಯನ್ನು ಎದುರಿಸುತ್ತಿರುವ ಹಲವಾರು ಗ್ರಾಹಕರು ನಮ್ಮಲ್ಲಿಯೇ ಇದ್ದಾರೆ. ನೀವೂ ಕೂಡ ಈ ಸಮಸ್ಯೆಗೆ ಒಳಗಾಗಿದ್ದೀರಾ? ಸದ್ಯ ಮಾಡಿಸಿರುವ ಎಲ್ಐಸಿ ಪಾಲಿಸಿ ಬೇಡವೇ? ಹಾಗಾದರೇ ಚಿಂತೆ ಮಾಡಬೇಡಿ, ಮತ್ತೆ ಪಾಲಿಸಿಯನ್ನು ರದ್ದು ಮಾಡುವ ಆಪ್ಷನ್ ನಮ್ಮಲಿದೆ.
ಭಾರತೀಯ ಇನ್ಸೂರೆನ್ಸ್ ಕಾರ್ಪೊರೇಷನ್ ಸಂಸ್ಥೆ ಎಲ್ಐಸಿ ಪಾಲಿಸಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಒಲ್ಲದ ಮನಸ್ಸಿನಿಂದ ಮಾಡಿಸಿದ ಪಾಲಿಸಿ ಬೇಡದೆ ಹೋದಲ್ಲಿ ನೀವು ರದ್ದು ಮಾಡಬಹುದಾಗಿದೆ. ಇದಕ್ಕೆಂದಲೇ ಗ್ರಾಹಕರಿಗೆ ಎಲ್ಐಸಿ ಸಂಸ್ಥೆ 15 ದಿನಗಳಲ್ಲಿ ಪಾಲಿಸಿ ಬದಲಾಯಿಸುವ ಅಥವಾ ರದ್ದು ಮಾಡುವ ಅವಕಾಶ ಮಾಡಿಕೊಟ್ಟಿದೆ.
ಎಲ್ಐಸಿ ಪಾಲಿಸಿದಾರರಿಗೆ ‘ಫ್ರೀ ಲುಕ್ ಪಿರಿಯಡ್‘ ಎಂಬ ಆಪ್ಷನ್ ಅನ್ನು ಇತ್ತೀಚೆಗೆ ಭಾರತೀಯ ಇನ್ಸೂರೆನ್ಸ್ ಕಾರ್ಪೊರೇಷನ್ ಜಾರಿಗೊಳಿಸಿದೆ. ಇದರ ಅಡಿಯಲ್ಲಿ ನೀವು ಪಾಲಿಸಿಯನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಅಂತೆಯೇ ಇದಕ್ಕಾಗಿ ಕೊನೆಯ ನಿರ್ಣಯ ತೆಗೆದುಕೊಳ್ಳಲು ಫ್ರೀ ಲುಕ್ ಪಿರಿಯಡ್ ಹೆಸರಿನಲ್ಲಿ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ.
ಪಾಲಿಸಿಗಾಗಿ ನೀವು ಕಟ್ಟಿರುವ ಸಂಪೂರ್ಣ ಪ್ರೀಮಿಯಮ್ ಹಣ ವಾಪಸ್ಸು ಪಡೆಯಬಹುದಾಗಿದೆ. ಹಾಗಾಗಿ ಈಗಲೇ ಹತ್ತಿರದ ಭಾರತೀಯ ಇನ್ಸೂರೆನ್ಸ್ ಕಾರ್ಪೊರೇಷನ್ ಸಂಸ್ಥೆ ಕಚೇರಿಗೆ ಭೇಟಿ ನೀಡಿ, ಎಲ್ಐಸಿ ಬೇಕಾದರೆ ಬದಲಾಯಿಸಿಕೊಳ್ಳಬಹುದಾಗಿದೆ.