ಶ್ರೀ ಪಟಾಲಮ್ಮದೇವಿಯವರ ಮಹೋತ್ಸವಕ್ಕೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು,ಮೇ 15- ಶ್ರೀ ಪಟಾಲಮ್ಮ ದೇವಸ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಪಟಾಲಮ್ಮದೇವಿಯವರ ಮಹೋತ್ಸವಕ್ಕೆ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

ಜಯನಗರದ 3ನೇ ಬ್ಲಾಕ್‍ನ ಆನೆ ಬಂಡೆ ರಸ್ತೆಯಲ್ಲಿರುವ ಕನಕನಪಾಳ್ಯ, ಸಿದ್ದಾಪುರ, ಯಡಿಯೂರು, ಬೈರಸಂದ್ರ ಹಾಗೂ ನಾಗಸಂದ್ರ ಗ್ರಾಮಗಳ ಅಧಿದೇವತೆಯ ಮಹೋತ್ಸವಕ್ಕೆ ಪೂರ್ಣಕುಂಭಗಳೊಂದಿಗೆ ಬಂದ ಮೆರವಣಿಗೆಯಲ್ಲಿಮಗಮಳ ವಾದ್ಯಗಳೊಂದಿಗೆ ಮಹೋತ್ಸವಕ್ಕೆ ಮುಖ್ಯಮಂತ್ರಿಗಳಿಂದ ವಿದ್ಯುಕ್ತ ಚಾಲನೆ ದೊರೆಯಿತು.

ಜಾನಪದ ಕಲಾ ತಂಡಗಳು ವೀರಗಾಸೆ ಮರಗಾಲು ಕೀಲು ಕುದುರೆ, ಲಂಬಾಣಿ ನೃತ್ಯ, ಬೀಸು ಕಂಸಾಳೆ, ಕರಗ ಕೋಲಾಟ ಅಲಂಕಾರಿಕ ಬಣ್ಣದ ಛತ್ರಿ, ಕೊಡೆಗಳ ಮೆರವಣಿಗೆ ಬಿಂಡೇ ಮೇಳದಂತಹ ಅನೇಕ ಕಲಾತಂಡಗಳು ಮಹೋತ್ಸವದ ನಿಮಿತ್ತ ನಡೆದ ಮೆರವಣಿಗೆಗೆ ಮೆರಗು ನೀಡಿದವು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ಡಿ.ಹೇಮಚಂದ್ರ ಸಾಗರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ವಿ.ದೇವರಾಜ್, ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ