ಗುವಾಹತಿ, ಮೇ 15-ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಬಿರುಗಾಳಿ ಮತ್ತು ಗುಡುಗು-ಮಿಂಚು ಆರ್ಭಟದಿಂದ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದ 18 ಜಿಲ್ಲೆಗಳಲ್ಲಿ ಈ ಎರಡು ನೈಸರ್ಗಿಕ ವಿಕೋಪಗಳಿಂದ 22,801 ಕುಟುಂಬಗಳು ಸಂತ್ರಸ್ತಗೊಂಡಿವೆ ಎಂದು ಅಸ್ಸಾಂ ರಾಜ್ಯ ಪತ್ತು ನಿರ್ವಹಣಾ ಪ್ರಾಧಿಕಾರ(ಎಎಸ್‍ಡಿಎಂಎ) ತಿಳಿಸಿದೆ.
ಗೋಲಾಘಾಟ್, ಶಿವಸಾಗರ್, ಧುಬ್ರಿ, ಸೊಂಟಿಪುರ್ ಮತ್ತು ಕಾಚಾರ್ ತೀವ್ರ ಹಾನಿಗೆ ಒಳಗಾದ ಜಿಲ್ಲೆಗಳಾಗಿವೆ.
ಭಾರೀ ಬಿರುಗಾಳಿಗೆ 10 ಮಂದಿ ಮೃತಪಟ್ಟಿದ್ದು, ಮಿಂಚು-ಸಿಡಿಲಿನಿಂದ 13 ಮಂದಿ ಸಾಗೀಡಾಗಿದ್ದಾರೆ ಎಂದು ಪ್ರಾಧಿಕಾರ ಅಂಕಿಅಂಶ ನೀಡಿದೆ.
ಬಿರುಗಾಳಿಯಿಂದ ಅನೇಕ ಮನೆಗಳು, ಮರಗಳು ಮತ್ತು ವಿದ್ಯುತ್ ಕಂಬಗಳಿಗೆ ವ್ಯಾಪಕ ಹಾನಿಯಾಗಿದೆ.
ಮೃತ ಕುಟುಂಬಗಳ ಹತ್ತಿರ ಸಂಬಂಧಿಗಳಿಗೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂ.ಗಳ ಪರಿಹಾರ ಧನ ಘೋಷಿಸಿದೆ.