ಬೆಂಗಳೂರು,ಮೇ 14- ಹುತಾತ್ಮ ಯೋಧರ ಕುಟುಂಬದ ಸಬಲೀಕರಣಕ್ಕಾಗಿ ವಸಂತ ರತ್ನ ಫೌಂಡೇಷನ್ ವತಿಯಿಂದ 2ವರ್ಷಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್ ಸಂಸ್ಥಾಪಕಿ ಶುಭಾಷಿಣಿ ವಸಂತ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣ ಬಿಟ್ಟ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸವನ್ನು ನಮ್ಮ ಫೌಂಡೇಷನ್ ಮಾಡುತ್ತಿದ್ದು, 10ವರ್ಷದಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.
ವ್ಯಕ್ತಿತ್ವ ವಿಕಸನ ಮತ್ತು ಶಿಕ್ಷಣ ಸೇರಿದಂತೆ ವಿವಿಧ ರೀತಿ ವ್ಯವಸ್ಥೆ ಮಾಡಲಾಗುತ್ತಿದೆ. ಈಗ ಫೌಂಡೇಷನ್ ನಮ್ಮ ರಾಜ್ಯದಲ್ಲಿ ಮಾತ್ರ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತದ್ಯಾಂತ ಈ ಕಾರ್ಯಕ್ರಮವನ್ನು ನಡೆಸುವ ಯೋಜನೆಯಿದ್ದು, ಇದಕ್ಕೆ ಸರ್ಕಾರ ನೆರವು ಸಹ ಅಗತ್ಯ ಎಂದು ಹೇಳಿದರು.
ಈಗಾಗಲೇ ದೊಡ್ಡಬಳ್ಳಾಪುರದಲ್ಲಿ ಕ್ಯಾಂಪ್ ನಡೆದಿದ್ದು, 6 ತಿಂಗಳಿಗೊಮ್ಮೆ ಈ ಕ್ಯಾಂಪ್ ನಡೆಸಲಾಗುತ್ತದೆ. ಮೃತ ಯೋಧರ ಕುಟುಂಬ ವರ್ಗದವರು, ಯಾವ ರೀತಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು. ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಇನ್ನಿತರದ ಬಗ್ಗೆ ಮಾಹಿತಿ ನೀಡಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.