ಸಚಿವ ರೇವಣ್ಣ ರಕ್ಷಣೆಗಾಗಿ ಹಣ ಸೀಜ್ ಮಾಡಿದ್ದ ವಿಡಿಯೋ ಡಿಲೀಟ್!

ಬೆಂಗಳೂರು: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ ಅವರ ಬೆಂಗಾವಲು ಪಡೆಯ ವಾಹನವನ್ನು ತಪಾಸಣೆ ನಡೆಸಿ ಹಣ ಸೀಜ್ ಮಾಡಲಾಗಿತ್ತು. ಈ ವೇಳೆ ಹಣ ಸೀಜ್ ಮಾಡಿದ್ದನ್ನು ತಪಾಸಣಾ ತಂಡ ವಿಡಿಯೋ ಮಾಡಿತ್ತು. ಆದರೆ ಇದೀಗ ರಾತ್ರೋರಾತ್ರಿ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಸಚಿವರ ರಕ್ಷಣೆಗಾಗಿ ಈ ವಿಡಿಯೋ ಡಿಲೀಟ್ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ತಪಾಸಣಾ ತಂಡ ರೇವಣ್ಣ ಅವರ ಬೆಂಗಾವಲು ಪಡೆಯ ವಾಹನವನ್ನು ತಪಾಸಣೆ ನಡೆಸಿ ಹಣ ಸೀಜ್ ಮಾಡಿಕೊಂಡಿತ್ತು. ಈ ವಿಡಿಯೋವನ್ನು ತಾಲೂಕು ಆಫೀಸಿನಲ್ಲಿ ಚುನಾವಣಾ ಅಧಿಕಾರಿಗಳು ಸೇವ್ ಮಾಡಿದ್ದರು. ವಿಡಿಯೋ ಸೇವ್ ಮಾಡಿದ ನಂತರ ಈ ಬಗ್ಗೆ ವಿಶೇಷ ಚುನಾವಣಾ ಅಧಿಕಾರಿ ಮನೀಷ್ ಮೌದ್ಗಿಲ್‍ಗೂ ಸ್ಥಳೀಯ ಅಧಿಕಾರಿಗಳು ವಿಷಯ ತಿಳಿಸಿದ್ದರು.

ವಿಡಿಯೋ ತಪಾಸಣೆ ಮಾಡಲು ಮನೀಷ್ ಮೌದ್ಗಿಲ್ ಆಫೀಸ್‍ಗೆ ಬಂದಿದ್ದಾರೆ. ಆದರೆ ಸೇವ್ ಮಾಡಿದ್ದ ಕಂಪ್ಯೂಟರ್ ನಲ್ಲಿ ವಿಡಿಯೋನೇ ಇಲ್ಲ. ಇದರಿಂದ ವಿಡಿಯೋ ತಪಾಸಣೆಗೆ ಬಂದ ಮನೀಷ್ ಮೌದ್ಗಿಲ್‍ಗೆ ಶಾಕ್ ಆಗಿದೆ. ಕೂಡಲೇ ವಿಡಿಯೋ ಡಿಲೀಟ್ ಬಗ್ಗೆ ತನಿಖೆ ನಡೆಸುವಂತೆ ಮನೀಷ್ ಮೌದ್ಗಿಲ್ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಪೊಲೀಸ್ ವಾಹನದಲ್ಲಿ 1.20 ಲಕ್ಷ ರೂ. ಹಣ ಸೀಜ್ ಆಗಿತ್ತು. ಆಗ ಮನೀಷ್ ಮೌದ್ಗಿಲ್ ಅವರ ಮೇರೆಗೆ ದೂರ ದಾಖಲಾಗಿತ್ತು. ಈ ವೇಳೆ ಹಣ ಸೀಜ್ ಮಾಡುವಾಗ ಕಂಪ್ಲೀಟ್ ವಿಡಿಯೋ ರೆಕಾರ್ಡ್ ಮಾಡಲಾಗಿತ್ತು. ಅದನ್ನು ಸ್ಥಳೀಯ ಚುನಾವಣಾ ಕಚೇರಿಯಲ್ಲಿ ಸೇವ್ ಮಾಡಲಾಗಿದ್ದು, ಅಲ್ಲಿನ ಚುನಾವಣಾ ಅಧಿಕಾರಿಗಳು ವಿಡಿಯೋ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಆದರೆ ಮನೀಷ್ ಮರುದಿನ ಆಫೀಸ್‍ಗೆ ಬರುವಷ್ಟರಲ್ಲಿ ವಿಡಿಯೋ ಡಿಲೀಟ್ ಆಗಿತ್ತು.

ಸದ್ಯಕ್ಕೆ ಮನೀಷ್ ಅಂದಿನ ದಿನ ಅಧಿಕಾರದಲ್ಲಿದ್ದ ಅಧಿಕಾರಿಗಳು, ಸೆಕ್ಯೂರಿಟ್ ಗಾರ್ಡ್ ಮುಂತಾದವರ ಮೇಲೆ ಸೂಕ್ತ ಕ್ರಮಗೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ. ರೇವಣ್ಣ ಅವರ ಮೇಲೆ ಯಾವುದೇ ಆರೋಪ ಬರದಂತೆ ಸ್ಥಳೀಯ ಅಧಿಕಾರಿಗಳು ವಿಡಿಯೋ ಡಿಲೀಟ್ ಮಾಡಿಸಿದ್ದಾರೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ