ಮಿಲಿಯನ್ ಡಾಲರ್ ಐಪಿಎಲ್ ಹಬ್ಬಕ್ಕೆ ಅಂತೂ ತೆರೆಬಿದ್ದಿದೆ. ಸುಮಾರು ಒಂದುವರೆ ತಿಂಗಳ ಕಾಲ ಬ್ಯುಸಿಯಾಗಿದ್ದ ಸ್ಟಾರ್ ಆಟಗಾರರು ರಿಲ್ಯಾಕ್ಸ್ ಮೂಡ್ಗೆ ಮರಳಿದ್ದಾರೆ. ಇನ್ನೇನು ಕ್ರಿಕೆಟ್ ಜನಕರ ನಾಡಲ್ಲಿ ಶುರುವಾಗೋ ವಿಶ್ವಕಪ್ ಮಹಾಸಮರಕ್ಕೆ ಆಟಗಾರರು ರೆಡಿಯಾಗಬೇಕಿದೆ. ಟಿ20ಗೆ ಹೊಂದಿಕೊಂಡಿದ್ದ ಆಟಗಾರರು ಈಗ ಲಾಂಗ್ ಫಾರ್ಮೆಟ್ ಆಟಕ್ಕೆ ಹೊಂದಿಕೊಳ್ಳಬೇಕಾದ ಸವಾಲು ಎದುರಾಗಿದೆ.
ಹೌದು.. ಐಪಿಎಲ್ ಕಪ್ ಗೆಲ್ಲುವ ಕನಸಿನಲ್ಲಿದ್ದ ಟೀಮ್ ಇಂಡಿಯಾ ಆಟಗಾರರಿಗೆ ಈಗ ಮತ್ತೊಂದು ಆಸೆ ಚಿಗುರಿದೆ. ಅದೇ ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್, ವಿಶ್ವಕಪ್ ಗೆದ್ದು ಇಡೀ ಜಗತನ್ನ ಆಳಲು ಸಜ್ಜಾಗಿದ್ದಾರೆ. ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರೆಟ್ ತಂಡಗಳ ಪೈಕಿ ಟೀಂ ಇಂಡಿಯಾ ಕೂಡ ರೇಸ್ನಲ್ಲಿದ್ದು ಕೊಹ್ಲಿ ಸೈನ್ಯದ ಮೇಲೆ ಅಪಾರ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿದೆ. ಸದ್ಯ ಈಗಷ್ಟೆ ಐಪಿಎಲ್ ಮುಗಿದಿರೋದ್ರಿಂದ ರೆಸ್ಟ್ ತೆಗೆದುಕೊಂಡು ಆಗಬೇಕಿದೆ.
ವಿಶ್ವಕಪ್ಗೆ ಆಯ್ಕೆಯಾಗಿರುವ ಬಹುತೇಕ ಮಂದಿ ಟೀಂ ಇಂಡಿಯಾ ಆಟಗಾರರು ಈ ಬಾರಿಯ ಐಪಿಎಲ್ ಆಡಿದ್ದಾರೆ. ಐಪಿಎಲ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಆಟಗಾರರು ಐಪಿಎಲ್ ಆಡುವ ಬಗ್ಗೆ ಅಪಸ್ವರ ಎದ್ದಿತ್ತು. ಆಟಗಾರರು ಇಂಜುರಿಗೆ ಗುರಿಯಾದ್ರೆ ವಿಶ್ವಕಪ್ನಲ್ಲಿ ತಂಡದ ಪರ್ಫಾಮನ್ಸ್ ಮೇಲೆ ಪರಿಣಾಮ ಬೀರುತ್ತೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದಕ್ಕಾಗಿ ವರ್ಕ್ ಲೋಡ್ ಕಡಿಮೆ ಮಾಡುವಂತೆ ಬಿಸಿಸಿಐ ಫ್ರಾಂಚೈಸಿಗಳಿಗೆ ಸೂಚಿಸಿತ್ತು.
ತಪ್ಪುಗಳನ್ನ ತಿದ್ದಿಕೊಳ್ಳಲು ಆಟಗಾರರಿಗೆ ಕೊನೆ ಚಾನ್ಸ್..!
ಐಪಿಎಲ್ನಲ್ಲಿ ಆಡಿ ದಣಿದಿರುವ ಟೀಂ ಇಂಡಿಯಾ ಆಟಗಾರರು, ಇನ್ನು ಕೆಲ ದಿನಗಳಲ್ಲಿ ಇಂಗ್ಲೆಂಡ್ಗೆ ಪ್ರಯಾಣ ಬೆಳಸಲಿದ್ದಾರೆ. ಹೀಗಾಗಿ ವಿಶ್ವಕಪ್ಗೂ ಮುನ್ನಾ ಆಟಗಾರರು ತಮ್ಮ ನೂನ್ಯತೆಗಳನ್ನು ಸರಿಪಡಿಸಿಕೊಳ್ಳುವ ಅಗತ್ಯತೆ ಇದೆ. ಐಪಿಎಲ್ನಲ್ಲಿ ಮಾಡಿದ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಆಟಗಾರರಿಗೆ ಕೆಲ ಸಮಯ ಸಿಕ್ಕಿದ್ದು, ಆ ನೂನ್ಯತೆಗಳಿಗೆ ಆದಷ್ಟು ಬಗ ಪರಿಹಾರ ಕಂಡುಕೊಳ್ಳಬೇಕಿದೆ.
ಇನ್ನೂ ಐಪಿಎಲ್ನಲ್ಲಿ ಸಾಲಿಡ್ ಓಪನಿಂಗ್ ನೀಡೋದ್ರಲ್ಲಿ ವಿಫಲವಾಗಿರುವ ರೋಹಿತ್ ಶರ್ಮಾ, ಶಿಖರ್ ಧವನ್ಗೆ ಸ್ಥಿರ ಪ್ರದರ್ಶನ ಕಂಡಕೊಳ್ಳಬೇಕಿದೆ. ಸ್ಪಿನ್ನರ್ಸ್ ವಿರುದ್ಧ ಲೀಲಾಜಾಲವಾಗಿ ಬ್ಯಾಟ್ ಬೀಸುತ್ತಿದ್ದ ವಿರಾಟ್ ಕೊಹ್ಲಿ, ಐಪಿಎಲ್ನಲ್ಲಿ ಸ್ಪಿನ್ನರ್ಸ್ ವಿರುದ್ಧ ಮಂಡಿಯೂರಿದ್ದೆ ಹೆಚ್ಚು. ಹೀಗಾಗಿ ಸ್ಪಿನ್ನರ್ಸ್ ವಿರುದ್ಧ ಮತ್ತೆ ಎಂದಿನ ಖದರ್ ತೋರಿಸಬೇಕಿದೆ. ಎಂ.ಎಸ್.ಧೋನಿ, ಹಾರ್ದಿಕ್ ಪಾಡ್ಯಾ ಅದೇ ಬ್ಯಾಟಿಂಗ್ ಟಚ್ ಮುಂದಿವರಿಸೋದು ಅಷ್ಟೇ ಸವಾಲಿನ ವಿಚಾರವಾಗಿದೆ.
ಒಟ್ನಲ್ಲಿ ಕಲಫುಲ್ ಟೂರ್ನಿಯಲ್ಲಿ ಇಷ್ಟುದಿನ ಬ್ಯಸಿಯಾಗಿದ್ದ ಟೀಮ್ ಇಂಡಿಯಾ ಆಟಗಾರಾರಿಗೆ ಈಗ ಮತ್ತೊಂದು ಹೊಸ ಸವಾಲು ಎದರಾಗಿವೆ. ವಿಶ್ವಕಪ್ ಮಹಾ ಸಮರದ ಹೊಸ ಕನಸಿನೊಂದಿಗೆ ಇಂಗ್ಲೆಂಡ್ಗೆ ಪ್ರಯಾಣ ಬೆಳಸಲಿರುವ ಟೀಮ್ ಇಂಡಿಯಾ ಕಪ್ ಗೆದ್ದು ಭಾರತಕ್ಕೆ ವಾಪಸ್ ಆಗಲಿ ಎಂಬುವುದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯ