ಮಿಲಿಯನ್ ಡಾಲರ್ ಬೇಬಿ ಅಂತಾನೇ ಕರೆಸಿಕೊಳ್ಳುವ ಐಪಿಎಲ್ ಟೂರ್ನಿ ಹಲವು ರೋಚಕತೆಗಳಿಗೆ ಸಾಕ್ಷಿ ಆಗಿರುತ್ತೆ. ಗೆಲುವಿಗಾಗಿ ಪರಸ್ಪರ ಜಿದ್ದಾಜಿದ್ದಿನ ಹೋರಾಟ ನಡೆಸುವ ತಂಡಗಳೆಲ್ಲ ಗೆಲುವು ಪಡೆಯೊದಕ್ಕೆ ಆಗೋದಿಲ್ಲ. ಹಾಗೆ ಐಪಿಎಲ್ ಟೂರ್ನಿಯಲ್ಲಿ ಕೆಲವ ತಂಡಗಳು ಸಕ್ಸಸ್ ಕಂಡಿದ್ರೆ, ಕೆಲ ತಂಡಗಳಿಗೆ ಮಾತ್ರ ಸಕ್ಸಸ್ ಅನ್ನೊದು ಮರೀಚಿಕೆಯಾಗಿ ಉಳಿದಿದೆ.. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಹೆಚ್ಚು ಬಾರಿ ಐಪಿಎಲ್ ಚಾಂಪಿಯನ್ ಆಗಿದ್ರೆ, ಕೆಲ ತಂಡಗಳು ಐಪಿಎಲ್ನಲ್ಲಿ ಸೋಲಿನ ಸರದಾರರಾಗೇ ಉಳಿದಿವೆ.
12ನೇ ಆವೃತ್ತಿಯ ಮಿಲಿಯನ್ ಡಾಲರ್ ಟೂರ್ನಿ ಕ್ರಿಕೆಟ್ ಅಭಿಮಾನಿಗಳಿಗೆ ಸಖತ್ ಎಂಟರಟೈನ್ಮೆಂಟ್ ಕೊಟ್ಟಿದೆ.. ಜೊತೆಗೆ ಹೊಸ ಟ್ಯಾಲೆಂಟ್ ಆಟಗಾರರ ಸಾಮರ್ಥ್ಯ ಹೊರಹಾಕಲು ಐಪಿಎಲ್ ಉತ್ತಮ ವೇದಿಕೆ ಅನ್ನೋದು ಮತ್ತೊಮ್ಮೆ ಪ್ರೂವ್ ಮಾಡಿದೆ. ಐಪಿಎಲ್ನಲ್ಲಿ ಮತ್ತೆ ಮುಂಬೈ ಇಂಡಿಯನ್ಸ್ ಕಪ್ ಗೆಲ್ಲುವ ಮೂಲಕ ತನ್ನ ಪ್ರಭುತ್ವ ಸಾಧಿಸಿದೆ. ಆದ್ರೆ, ಈ ಬಾರಿಯಾದರೂ ಐಪಿಎಲ್ ಗೆಲ್ಲಬೇಕೆಂದು ಕಣಕ್ಕಿಳಿದಿದ್ದ ನತದೃಷ್ಟ ತಂಡಗಳ ಹಣೆಬರಹ ಮಾತ್ರ ಈ ಬಾರಿಯೂ ಬದಲಾಗಲಿಲ್ಲ ಎಂಬುವುದು ಮತ್ತೊಮ್ಮೆ ಪ್ರೂವ್ ಆಗಿದೆ.
ಐಪಿಎಲ್ ಅಧಿಪತಿಯಾಗಿ ಮೆರೆದ ಮುಂಬೈ, ಚೆನ್ನೈ..!
ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಮೋಸ್ಟ್ ಸಕ್ಸಸ್ಫುಲ್ ತಂಡಗಳು. 12ನೇ ಆವೃತ್ತಿಯ ಐಪಿಎಲ್ ಗೆಲ್ಲುವ ಮೂಲಕ ಅತಿ ಹೆಚ್ಚುಬಾರಿ ಐಪಿಎಲ್ ಗೆದ್ದ ತಂಡ ಎಂಬ ಹಿರಿಮೆಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ. 2017, 2015, 2013ರಲ್ಲೂ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನೂ ಚೆನ್ನೈ ಸೂಪರ್ಕಿಂಗ್ಸ್ ಐಪಿಎಲ್ ನಿಜವಾದ ಕಿಂಗ್ಸ್, ಐಪಿಎಲ್ನಿಂದ 2 ವರ್ಷ ಬ್ಯಾನ್ ಆಗಿದ್ದರು ಆಡಿದ ಎಲ್ಲಾ ವರ್ಷಗಳಲ್ಲಿ ಪ್ಲೇ ಆಫ್ ಪ್ರವೇಶಿಸಿದ ಕೀರ್ತಿ ಚೆನ್ನೈ ಸೂಪರ್ ಕಿಂಗ್ಸ್ಗೆ ಸಲ್ಲುತ್ತೆ.. 8 ಬಾರಿ ಫೈನಲ್, 3 ಬಾರಿ ಟೈಟಲ್ ಗೆದ್ದು ಹೆಗ್ಗಳಿಕೆ ಮಿಸ್ಟರ್ ಕೂಲ್ ಕ್ಯಾಪ್ಟನ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ್ದು.
2 ಬಾರಿ ಟೈಟಲ್ಗೆ ಮುತ್ತಿಕ್ಕಿದ ಕೋಲ್ಕತ್ತಾ, ಸನ್ ರೈಸರ್ಸ್
ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದ್ರಬಾದ್ ತಂಡಗಳು ಐಪಿಎಲ್ನ ಬಲಿಷ್ಠ ತಂಗಳಾಗಿ ಗುರುತಿಸಿಕೊಂಡಿವೆ. ಗೌತಮ್ ಗಂಭೀರ್ ನಾಯಕತ್ವದಲ್ಲಿ 2 ಬಾರಿ ಕೋಲ್ಕತ್ತಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪ್ರಸಕ್ತ ಟೂರ್ನಿಯಲ್ಲಿ ಐಪಿಎಲ್ ಗೆಲ್ಲುವ ಎಲ್ಲಾ ಅರ್ಹತೆ ಇದ್ರು, ಅದೃಷ್ಟದ ಪರೀಕ್ಷೆಯಲ್ಲಿ ಫೇಲ್ ಆಗೋ ಮೂಲಕ ಕಪ್ ಗೆಲ್ಲೋ ಕಸನಸು ನುಚ್ಚು ನೂರು ಮಾಡಿಕೊಂಡಿದೆ. ಐಪಿಎಲ್ ಆರಂಭದಲ್ಲಿ ಡೆಕ್ಕನ್ ಚಾರ್ಜಸ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಹೈದ್ರಾಬಾದ್ 2ನೇ ಆವೃತ್ತಯಲ್ಲೇ ಚಾಂಪಿಯನ್ ಪಟ್ಟ ಆಲಂಕರಿಸಿತ್ತು. ನಂತರ ಸನ್ ರೈಸರ್ಸ್ ಎಂದು ಮರುನಾಮಕಾರಣ ಮಾಡಿಕೊಂಡ ಹೈದ್ರಬಾದ್ 2016ರಲ್ಲಿ ಚಾಂಪಿಯನ್, 2018ರಲ್ಲಿ ರನರ್ ಆಪ್ ಆಗಿ ಹೊರಹೊಮ್ಮಿತ್ತು..
ಮೊದಲ ಐಪಿಎಲ್ ಚಾಂಪಿಯನ್ಗೆ ಮತ್ತೆ ಸಿಗಲಿಲ್ಲ ಅದೃಷ್ಟ..!
ಸ್ಪಿನ್ ದಿಗ್ಗಜ ಶೇನ್ ವಾರ್ನ್ ನಾಯಕತ್ವದಲ್ಲಿ 2008ರಲ್ಲಿ ರಾಜಸ್ಥಾನ ರಾಯಲ್ಸ್ ಮೊದಲ ಐಪಿಎಲ್ ಮುಕುಟ ಮುತ್ತಿಕ್ಕಿತ್ತು. ಅಂದು ಬಿಟ್ರೆ ಮತ್ತೆ ಮೂರು ಬಾರಿ ಪ್ಲೇ ಆಫ್ಗೇರಿದ್ದೆ ರಾಜಸ್ಥಾನ ರಾಯಲ್ಸ್ ತಂಡದ ಸಾಧನೆಯಾಗಿದೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ 2 ವರ್ಷ ನಿಷೇಧದ ಬಳಿಕ ಐಪಿಎಲ್ಗೆ ರಾಜಸ್ಥಾನ ಕಮ್ ಬ್ಯಾಕ್ ಮಾಡಿತ್ತು. 2ನೇ ಐಪಿಎಲ್ ಗೆಲ್ಲೂ ಉತ್ಸಾಹದಲ್ಲಿದ್ದ ರಾಜಸ್ಥಾನ ಸರ್ವಾಂಗೀಣ ಪ್ರದರ್ಶನ ತೋರಲು ವಿಫಲವಾಗಿ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದೆ.
ರನ್ನರ್ ಆಫ್ಗೆ ತೃಪ್ತಿಪಟ್ಟ ಆರ್ಸಿಬಿ, ಪಂಜಾಬ್..!
ಬರೋಬ್ಬರಿ 12 ವರ್ಷಗಳಿಂದ ಕಪ್ ಗೆಲ್ಲೋ ಕನಸು ಕಾಣುತ್ತಿರೋ ರಾಯಲ್ ಚಾಂಲೆಂಜರ್ಸ್, ಕಿಂಗ್ಸ್ ಇಲವೆನ್ ಪಂಜಾಬ್, ಡೆಲ್ಲಿ ಕ್ಯಾಪಿಟಲ್ಸ್ಗೆ ಈ ವರ್ಷವೂ ನಿರಾಸೆ ತಪ್ಪಲಿಲ್ಲ.. ಈ ಬಾರಿ ಕಪ್ ಗೆಲ್ಲಲೇಬೇಕೆಂದು ಬಲಿಷ್ಠ ತಂಡವನ್ನು ಕಟ್ಟಿದ್ರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸುವಲ್ಲಿ ಆರ್ಸಿಬಿ ವಿಫಲವಾಯಿತು.
ಪರಿಣಾಮ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿ ತೃಪ್ತಿಪಡಬೇಕಾಯಿತು. 2009, 2011, 2016ರಲ್ಲಿ ರನ್ನರ್ ಆಫ್ ಆಗಿದ್ದೆ, ರಾಯಲ್ ಚಾಲೆಂಜರ್ಸ್ ಸಾಧನೆ.
ಇನ್ನೂ ಕಿಂಗ್ಸ್ ಇಲೆವೆನ್ ಪಂಜಾಬ್ ಕಥೆ ಇದಕ್ಕೆ ಹೊರತಾಗಿಲ್ಲ. 2008ರಲ್ಲಿ ಸೆಮಿಫೈನಲ್, 2014 ರನ್ನರ್ ಆಫ್ ಆಗಿದ್ದೆ ಪಂಜಾಬ್ ಸಾಧನೆ. ಈ ಬಾರಿಯೂ ತಂಡದಲ್ಲಿ ಉತ್ತಮ ಆಟಗಾರರಿದ್ದರು ಪ್ಲೇ ಆಫ್ ಪ್ರವೇಶಿಸೋಕು ಪಂಜಾಬ್ ವಿಫಲವಾಯ್ತು.
ಫೈನಲ್ ಪ್ರವೇಶಿಸದ ಏಕೈಕ ತಂಡ ಡೆಲ್ಲಿ ಕ್ಯಾಪಿಟಲ್ಸ್..!
ಐಪಿಎಲ್ನಲ್ಲಿ ಸದ್ಯ ಆಡುತ್ತಿರುವ ಉಳಿದೆಲ್ಲ ತಂಡಗಳು ಒಂದು ಬಾರಿಯಾದರೂ ಫೈನಲ್ ತಲುಪಿವೆ. 5 ತಂಡಗಳು ಪ್ರಶಸ್ತಿ ಗೆದ್ದಿವೆ. ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳದ ದುರದೃಷ್ಟವಂತ ತಂಡವೆಂದರೆ ಡೆಲ್ಲಿ ಮಾತ್ರ. ಐಪಿಎಲ್ ಗೆಲ್ಲುವ ಯೋಗ್ಯತೆ ಇದ್ದರೂ ಕಪ್ ಅನ್ನು ಮಾತ್ರ ಪ್ರತಿಬಾರಿ ಬಿಟ್ಟುಕೊಡುತ್ತಲೇ ಬಂದಿದೆ. ಪ್ರತಿ ಬಾರಿಯೂ ಕಪ್ ಗೆಲ್ಲುವ ಮೆಚ್ಚಿನ ತಂಡಗಳಲ್ಲೊಂದಾಗಿಯೇ ಸ್ಪರ್ಧೆಗಿಳಿಯುವ ಡೆಲ್ಲಿ ಸೆಮಿಫೈನಲ್ನಲ್ಲೋ, ಅದಕ್ಕೂ ಮುನ್ನವೋ ಎಡವಟ್ಟು ಮಾಡಿಕೊಂಡು ಹೊರಬೀಳುತ್ತದೆ. ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ಸ್, ವಿಶ್ವದ ಘಾತಕ ವೇಗಿಗಳ ದಂಡೇ ಇದ್ದರೂ ಐಪಿಎಲ್ನಲ್ಲಿ ಫೈನಲ್ಗೇರದ ನತದೃಷ್ಟ ತಂಡವಾಗಿದೆ ಗುರುತಿಸಿಕೊಂಡಿದೆ. ಕಪ್ ಗೆಲ್ಲಲೇಬೇಕೆಂದು ಯುವ ತಂಡವನ್ನು ಕಟ್ಟಿದ್ದ ಡೆಲ್ಲಿ ಪ್ರಾಂಚೈಸಿಗೆ ಈ ಬಾರಿಯೂ ನಿರಾಸೆಯಾಗಿದೆ. ಆದ್ರೆ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಈ ಬಾರಿ ಕ್ವಾಲಿಫೈಯರ್-2ನಲ್ಲಿ ಸೋಲುವ ಮೂಲಕ ಕಪ್ ಗೆಲ್ಲೋ ಅದೃಷ್ಟವನ್ನ ಕಳೆದುಕೊಂಡಂತೆ ಆಯ್ತು..
ಒಟ್ಟಾರೆ ಪ್ರತಿ ಐಪಿಎಲ್ನಲ್ಲೂ ಗೆದ್ದ ತಂಡಗಳೇ ಮತ್ತೆ ಮತ್ತೆ ಪ್ರಶಸ್ತಿಗಳನ್ನ ಗೆಲ್ಲುತ್ತಿವೆ ಮುಂದಿನ ಸೀಸನ್ನಲ್ಲೀ ಇದುವರೆಗೂ ಪ್ರಶಸ್ತಿ ಗೆಲ್ಲದ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಲಿ ಅನ್ನೋದೇ ಅಭಿಮಾನಿಗಳ ಆಶಯವಾಗಿದೆ.