![bbl](http://kannada.vartamitra.com/wp-content/uploads/2019/05/bbl-678x377.jpg)
ಬೆಂಗಳೂರು,ಮೇ 14- ಭಾರತ ಹಾಗೂ ಕರ್ನಾಟಕ ಸರ್ಕಾರದ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ)ಯಡಿ ಗ್ರಾಮೀಣ ಭಾಗದ ಬಿಪಿಎಲ್ ಕುಟುಂಬದ ಯುವಕ/ಯುವತಿಯರಿಗೆ ವೃತ್ತಿ ಆಧಾರಿತ ತಾಂತ್ರಿಕ ಕೌಶಲ್ಯಗಳ ಉಚಿತ ತರಬೇತಿ ನೀಡಲಾಗುತ್ತಿದೆ.
ಅಪೋಲೋ ಮೆಡ್ಸ್ಕಿಲ್ ಸಹಯೋಗದಲ್ಲಿ ಈ ತರಬೇತಿ ನೀಡಲಾಗುತ್ತಿದ್ದು, ಇಲ್ಲಿ ತರಬೇತಿ ಪಡೆದವರಿಗೆ ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗವಕಾಶದೊಂದಿಗೆ ಭಾರತ ಮತ್ತು ರಾಜ್ಯ ಸರ್ಕಾರದ ಪ್ರಮಾಣ ಪತ್ರ ನೀಡಲಾಗುತ್ತದೆ.
ಊಟ, ಉಚಿತ ವಸತಿ ವ್ಯವಸ್ಥೆ, 6ರಿಂದ 10 ತಿಂಗಳ ಕಾಲ ತರಬೇತಿ ನೀಡಲಾಗುತ್ತಿದ್ದು, ತಾಂತ್ರಿಕಪ್ರಯೋಗಾಲ ಶಿಕ್ಷಣ, ಕಂಪ್ಯೂಟರ್ ಆಧಾರಿತ ತರಗತಿಗಳು, ಇಂಗ್ಲೀಷ್ ಭಾಷಾ ತರಗತಿ ಕೌಶಲ್ಯ, ವ್ಯಕ್ತಿತ್ವ ವಿಕಸನ ತರಬೇ, ಸುಸಜ್ಜಿತ ಡೋಮೇನ್ ಲ್ಯಾಬ್ಗಳು ಟ್ಯಾಬ್ಲೆಟ್ಗಳ ಮೂಲಕ ತರಬೇತಿ ನೀಡಲಾಗುತ್ತಿದ್ದು, ಉಚಿತ ಸಮವಸ್ತ್ರ ಮತ್ತು ತರಬೇತಿ ಸಾಮಾಗ್ರಿಗಳ ಪೂರೈಕೆ ಮಾಡಲಾಗುತ್ತದೆ.
ಪಿಯುಸಿ ಉತ್ತೀರ್ಣರಾದ, ಯಾವುದೇ ಪದವಿ, ನರ್ಸಿಂಗ್ ಡಿಪ್ಲೋಮ ಮಾಡಿದ 18ರಿಂದ 30ರೊಳಗೆ ವಯೋಮಿತಿಯವರು ತರಬೇತಿ ಪಡೆಯಬಹುದಾಗಿದೆ. ವಿಳಾಸ: ಅಪೋಲೊ ಮೆಡ್ಸ್ಕಿಲ್ ನಂ. 174/1, ಎಂಇಯು ಸಕ್ವೇರ್ ಬಿಲ್ಡಿಂಗ್, ಬನ್ನೇರುಘಟ್ಟ ಮುಖ್ಯರಸ್ತೆ,ಜೆಪಿನಗರ, 3ನೇ ಹಂತ, ಬೆಂಗಳೂರು-76 ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗೆ ಮೊ: 9121018615/ 9590864652 ಸಂಪರ್ಕಿಸಲು ಕೋರಲಾಗಿದೆ.