ಬೆಂಗಳೂರು, ಮೇ 14-ಕರ್ನಾಟಕ ರಾಜ್ಯ ಪಿಕಲ್ ಬಾಲ್ ಅಸೋಸಿಯೇಷನ್ ಹಾಗೂ ಡೆಕಥ್ಲೋನ್ ಇಟಿಎ ಸಹಯೋಗದಲ್ಲಿ ನಗರದ ಇಟಿಎ ಮಾಲ್‍ನಲ್ಲಿ ನಡೆದ ಸಮ್ಮರ್ ಉತ್ಸವ್ ಪಿಕಲ್ ಬಾಲ್ ಚಾಂಪಿಯನ್‍ಷಿಪ್ ಪಂದ್ಯಾವಳಿ ರೋಚಕವಾಗಿ ಮುಕ್ತಾಯಗೊಂಡಿತು.
ಪುರುಷರ ವಿಭಾಗದ ಡಬಲ್ಸ್‍ನಲ್ಲಿ ಪ್ರಶಾಂತ್-ಗೌತಮ್ ಜೋಡಿ, ಮಹಿಳೆಯರ ಡಬಲ್ಸ್‍ನಲ್ಲಿ ದಿವ್ಯಾ-ಅಪೂರ್ವ ಜೋಡಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಪುರುಷರ ಫೈನಲ ಪಂದ್ಯವಂತೂ ತೀವ್ರ ಸೆಣಸಾಟದಿಂದ ಕೂಡಿತ್ತು. ನೆರೆದಿದ್ದ ಪ್ರೇಕ್ಷಕರು ಕೊನೆ ಕ್ಷಣದವರೆಗೂ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆಯೇ ಕುತೂಹಲ ಭರಿತರಾಗಿ ವೀಕ್ಷಿಸುತ್ತಿದ್ದರು. ಪ್ರತಿಯೊಂದು ಪಾಯಿಂಟ್‍ಗೂ ಚಪ್ಪಳೆ ತಟ್ಟಿ ಎರಡೂ ತಂಡಗಳನ್ನು ಹುರಿದುಂಬಿಸುತ್ತಿದ್ದರು.
ಅಂತಿಮವಾಗಿ ಪ್ರಶಾಂತ್-ಗೌತಮ್ ಜೋಡಿ 11-8 ಪಾಯಿಂಟ್‍ಗಳಿಂದ ದೀಪಕ್-ಶ್ರೀಧರ್ ಜೋಡಿಯನ್ನು ಮಣಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರು.
ಸಮಬಲದ ಹೋರಾಟದಿಂದ ಗಮನ ಸೆಳೆದ ಮಹಿಳಾ ವಿಭಾಗದ ಪಂದ್ಯದಲ್ಲಿ ಕೊನೆಯವರೆಗೆ ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆಂಬ ಕುತೂಹಲ ಕೆರಳಿಸಿ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಅಂತಿಮವಾಗಿ ದಿವ್ಯಾ-ಅಪೂರ್ವ ಜೋಡಿ 11-9 ಅಂಕಗಳಿಂದ ಕಾವ್ಯ-ಜಯಂತಿ ಜೋಡಿಯನ್ನು ಸೋಲಿಸಿ ಚಾಂಪಿಯನ ಪಟ್ಟಕ್ಕೇರಿತು.
ಉತ್ತಮ ಆಟವಾಡಿ ಜಯ ಸಾಧಿಸಿದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಕರ್ನಾಟಕ ಪಿಕಲ್ ಬಾಲ್ ಸಂಸ್ಧೆಯ ಕಾರ್ಯದರ್ಶಿ ರಜತ್ ಕಂಕರ್ ಪ್ರಶಸ್ತಿ ಪುರಸ್ಕøತ ಆಟಗಾರರು ಜೈಪೂರ್ ನಲ್ಲಿ ನಡೆಯಲಿರುವ ಜೈಪೂರ್ ಓಪನ್ ಪಂದ್ಯಗಳಿಗೆ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.