ಆಲ್ರೌಂಡರ್ ರವೀಂದ್ರ ಜಡೇಜಾ ಈಗ ಚೆನ್ನೈ ತಂಡದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು ಮೊನ್ನೆ ಉಪ್ಪಾಳ್ ಅಂಗಳದಲ್ಲಿ ನಡೆದ ಚೆನ್ನೈ ಮತ್ತು ಮುಂಬೈ ನಡುವಿನ ರಣ ರೋಚಕ ಕದನದಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ ಕೇವಲ ಒಂದು ರನ್ಗಳ ಅಂತರದಿಂದ ವಿರೋಚಿತ ಸೋಲು ಕಂಡಿತು.
140 ರನ್ಗಳ ಸುಲಭ ಟಾರ್ಗೆಟ್ ಬೆನ್ನತ್ತಬಹುದಾಗಿದ್ದ ಪಂದ್ಯದಲ್ಲಿ ಮಾಡಿಕೊಂಡ ಎರಡು ರನೌಟ್ಗಳಿಂದಾಗಿ ಚೆನ್ನೈ ತಂಡ ಚಾಂಪಿಯನ್ ಪಟ್ಟವನ್ನ ಕಳೆದುಕೊಳ್ಳಬೇಕಾಯಿತು. ಹಾರ್ದಿಕ್ ಪಾಂಡ್ಯ ಅವರ 13ನೇ ಓವರ್ನಲ್ಲಿ ಧೋನಿ ಅನವಶ್ಯಕ ರನ್ ಕದಿಯಲು ಹೋಗಿ ಇಶನ್ ಕಿಶನ್ ಅವರ ಚುರುಕಿನ ಫೀಲ್ಡಿಂಗ್ಗೆ ಬಲಿಯಾದ್ರು. ಇದು ಚೆನ್ನೈ ತಂಡಕ್ಕೆ ದೊಡ್ಡ ಹೊಡೆತವನ್ನ ನೀಡಿತು.
ಜಡ್ಡು ಮಾಡಿದ ರನೌಟ್ ಚಾಂಪಿಯನ್ ಪಟ್ಟ ಕಳೆದುಕೊಂಡ ಚೆನ್ನೈ
ಇದಾದ ನಂತರ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ತಂಡವನ್ನ ಗೆಲುವಿನತ್ತ ಕೊಂಡೊಯ್ದಿದ್ದ ಶೇನ್ ವ್ಯಾಟ್ಸನ್ ಕೊನೆಯ ಓವರ್ನಲ್ಲಿ ರನೌಟ್ ಆದ್ರು. ವೇಗಿ ಮಲಿಂಗಾ ಎಸೆದ ಯಾರ್ಕರ್ ಎಸೆತವನ್ನ ಸ್ಟ್ರೈಕ್ನಲ್ಲಿದ್ದ ವ್ಯಾಟ್ಸನ್ ಚೆಂಡನ್ನ ಬಾರಿಸ್ತಾರೆ. ವ್ಯಾಟ್ಸನ್ಗೆ ಎರಡು ರನ್ ಬೇಕಾಗಿರುತ್ತೆ. ಹೀಗಾಗಿ ಎರಡನೇ ರನ್ಗಾಗಿ ಓಡಿ ಬರ್ತಾರೆ ಆದ್ರೆ ಸಹ ರವೀಂದ್ರ ಜಡೇಜಾ ಓಡದೇ ಓಮ್ಮೆ ನಿಂತು ಮತ್ತೆ ಓಡ್ತಾರೆ. ಇದರಿಂದ ಓಡಿ ಬಂದ ಶೇನ್ ವ್ಯಾಟ್ಸನ್ ರನೌಟ್ ಬಲಗೆ ಬಿಳ್ತಾರೆ. ಒಂದು ವೇಳೆ ಶೇನ್ ವ್ಯಾಟ್ಸನ್ ರನೌಟ್ ಬಲಗೆ ಬೀಳದಿದ್ದೆದ್ರೆ ಚೆನ್ನೈ ಖಂಡಿತವಾಗಿ ಪಂದ್ಯ ಗೆಲ್ಲುತ್ತಿತ್ತು.
ಆದ್ರೆ ರವೀಂದ್ರ ಜಡೇಜಾ ಮಾಡಿದ ಯಡವಟ್ಟು ಚೆನ್ನೈ ತಂಡ ಕೊನೆಯಲ್ಲಿ ಚಾಂಪಿಯನ್ ಪಟ್ಟವನ್ನೆ ಕಳೆದುಕೊಳ್ಳುವಂತಾಯಿತು. ಇದನ್ನ ಸ್ವತಃ ಧೋನಿ ಕೂಡ ರವೀಂದ್ರ ಜಡೇಜಾ ಬಳಿ ತಮ್ಮ ಅಸಮಾಧಾನವನ್ನ ಹೊರ ಹಾಕಿದ್ರು.
ಜಡೇಜಾಗೆ ಮಂಗಳಾರತಿ ಮಾಡಿದ ಚೆನ್ನೈ ಅಭಿಮಾನಿಗಳು
ತಂಡ ವಿರೋಚಿತವಚಾಗಿ ಸೋಲಲು ಕಾರಣವಾಗಿರುವ ರವೀಂದ್ರ ಜಡೇಜಾ ವಿರುದ್ಧ ಚೆನ್ನೈ ತಂಡದ ಅಭಿಮಾನಿಗಳು ಸಿಡಿಮಿಡಿಗೊಂಡಿದ್ದಾರೆ. ಚೆನ್ನೈ ಸೋಲಿಗೆ ರವೀಂದ್ರ ಜಡೇಜಾ ಅವರೇ ನೇರ ಕಾರಣ ಎಂದಿರುವ ಅಭಿಮಾನಿಗಳು ಟ್ವೀಟರ್ನಲ್ಲಿ ರವೀಂದ್ ಜಡೇಜಾಗೆ ಸರಿಯಾಗಿ ಮಂಗಳಾರತಿ ಮಾಡುತ್ತಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಸೋಲಲು ಕಾರಣವಾಗಿದ್ದ ಜಡ್ಡು
ಆಲ್ರೌಂಡರ್ ರವೀಂದ್ರ ಜಡೇಜಾ ಈ ರೀತಿ ಯಡವಟ್ಟು ಮಾಡಿದ್ದು ಇದೇ ಮೊದಲಲ್ಲ ಎರಡು ವರ್ಷಗಳ ಹಿಂದೆ ಇಂಗ್ಲೆಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ತಂಡವನ್ನ ಗೆಲುವಿನತ್ತ ಕೊಂಡೋಯ್ಯುತ್ತಿದ್ದ ಹಾರ್ದಿಕ್ ಪಾಂಡ್ಯ ಅವರನ್ನ ಇದೇ ರವೀಂದ್ರ ಜಡೇಜಾ ರನೌಟ್ ಮಾಡಿ ಚಾಂಪಿಯನ್ಸ್ ಟ್ರೋಫಿಯನ್ನೆ ಕೈಚೆಲ್ಲಿ ಕೊಳ್ಳುವಂತೆ ಮಾಡಿದ್ರು. ಅಂದು ಕೂಡ ಟೀಂ ಇಂಡಿಯಾ ಅಭಿಮಾನಿಗಳು ಜಡ್ಡು ವಿರುದ್ಧ ಭಾರೀ ಆಕ್ರೋಶವನ್ನ ಹೊರ ಹಾಕಿದ್ರು.
ಫೈನಲ್ಸ್ನಲ್ಲಿ ಎರಡು ಬಾರಿ ಪ್ರಶಸ್ತಿಯನ್ನ ಕೈಚೆಲ್ಲಿಕೊಳ್ಳುವಂತೆ ಮಾಡಿರುವ ರವೀಂದ್ರ ಜಡೇಜಾ ಬಗ್ಗೆ ಅಸಮಾಧಾನಗೊಂಡಿರುವ ಅಭಿಮಾನಿಗಳು ವಿಶ್ವಕಪ್ನಲ್ಲೂ ಜಡೇಜಾ ಹೀಗೆ ಮಾಡಿದ್ರೆ ಏನ್ ಗತಿ ಅಂತ ಆತಂಕಕೊಳ್ಳಗಾಗದ್ರೆ.