ನಿಯಂತ್ರಣ ತಪ್ಪಿ ಉರುಳಿಬಿದ್ದ ಬೈಕ್-ಘಟನೆಯಲ್ಲಿ ಬೈಕ್ ಸವಾರನ ಸಾವು

ಬೆಂಗಳೂರು,ಮೇ 14- ಮುಂದೆ ಹೋಗುತ್ತಿದ್ದ ಬಸ್‍ನ್ನು ಹಿಂದಿಕ್ಕಲು ಬೈಕ್ ಸವಾರ ಮುನ್ನುಗ್ಗಿದಾಗ ನಿಯಂತ್ರಣ ತಪ್ಪಿ ಉರುಳಿ ಬಸ್ ಚಕ್ರಕ್ಕೆ ಸಿಕ್ಕಿ ಮೃತಪಟ್ಟಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗೌಡನಪಾಳ್ಯದ ನಿವಾಸಿ ಜೀವನ್ (18) ಮೃತಪಟ್ಟ ಬೈಕ್ ಸವಾರ.

ಗ್ಯಾಸ್ ಕಚೇರಿಯೊಂದರಲ್ಲಿ ನೌಕರಿ ಮಾಡುತ್ತಿದ್ದ ಜೀವನ್ ನಿನ್ನೆ ಸಂಜೆ 5.15ರಲ್ಲಿ ಕನಕಪುರ ಮುಖ್ಯರಸ್ತೆಯ ದೊಡ್ಡಕಲ್ಲಸಂದ್ರ ಮುಖಾಂತರ ಬೈಕ್‍ನಲ್ಲಿ ಹೋಗುತ್ತಿದ್ದರು.

ಈ ವೇಳೆ ಮುಂದೆ ಹೋಗುತ್ತಿದ್ದ ಕಾಲೇಜು ಬಸ್‍ನ್ನು ಓವರ್‍ಟೇಕ್ ಮಾಡುವ ಭರದಲ್ಲಿ ಮುನ್ನುಗ್ಗಿದಾಗ ನಿಯಂತ್ರಣ ತಪ್ಪಿ ಬೈಕ್ ಉರುಳಿ ಬಿದ್ದಿದೆ. ಪರಿಣಾಮ ಜೀವನ್ ಬಸ್ ಚಕ್ರಕ್ಕೆ ಸಿಕ್ಕಿ ಗಂಭೀರ ಗಾಯಗೊಂಡನು. ತಕ್ಷಣ ಸಾರ್ವಜನಿಕರು ಗಾಯಾಳುವನ್ನು ಆಸ್ಪತ್ರೆಗೆ ಕರೆದ್ಯೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ