12ನೇ ಸೀಸನ್ ಐಪಿಎಲ್ ಮುಗಿದು ಹೋಗಿದೆ.ಈ ಬಾರಿಯ ಐಪಿಎಲ್ ಈ ಹಿಂದಿನ ಎಲ್ಲ ಸೀಸನ್ಗಳಿಗಿಂತ ಭಿನ್ನವಾಗಿದ್ದು ಹಲವಾರು ಅಚ್ಚರಿಯ ದಾಖಲೆಗಳು ನಿರ್ಮಾಣವಾಗಿದೆ. ಹಾಗಾದ್ರೆ ಬನ್ನಿ ಈ ಬಾರಿ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ದಾಖಲಾದ ಪ್ರಮುಖ ದಾಖಲೆಗಳ್ಯಾವುದು ಅನ್ನೋದನ್ನ ನೋಡೋಣ.
ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆ್ಯಂಡ್ರೆ ರಸ್ಸೆಲ್
ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಇಂಪ್ರೆಸ್ ಮಾಡಿದ ಬ್ಯಾಟ್ಸ್ಮನ್ ಅಂದ್ರ ಅದು ಕೆಕೆಆರ್ ತಂಡದ ಆಲ್ರೌಂಡರ್ ಆ್ಯಂಡ್ರೆ ರಸ್ಸೆಲ್. ತಮ್ಮ ಮಸಲ್ ಪವರ್ನಿಂದಲೇ ಚೆಂಡನ್ನ ಸಿಕ್ಸರ್ ಗಡಿ ದಾಟಿಸುತ್ತಿದ್ದ ರಸ್ಸೆಲ್ ಪಂದ್ಯದ ಗತಿಯನ್ನ ಬದಲಿಸುತ್ತಿದ್ರು. ಸಿಕ್ಸರ್ಗಳ ಮಳೆ ಸುರಿಸಿರುವ ರಸ್ಸೆಲ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರಾಗಿದ್ದಾರೆ. ರಸ್ಸೆಲ್ 17 ಪಂದ್ಯಗಳಿಂದ 52 ಸಿಕ್ಸರ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಪಂಜಾಬ್ ತಂಡದ ಓಪನರ್ ಕ್ರಿಸ್ ಗೇಲ್ 34 ಸಿಕ್ಸರ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಹೈಯೆಸ್ಟ್ ರನ್ ಸ್ಕೋರರ್ ಡೇವಿಡ್ ವಾರ್ನರ್
ಅಮಾನತು ಶಿಕ್ಷೆ ನಂತರ ಕಮ್ಬ್ಯಾಕ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ ಈ ಬಾರಿಯ ಐಪಿಎಲ್ನಲ್ಲಿ ರನ್ ಹೊಳೆಯನ್ನೆ ಹರಿಸಿದ್ದಾರೆ. ಕಳೆದ ಬಾರಿ ಐಪಿಎಲ್ ಮಿಸ್ ಮಾಡಿಕೊಂಡಿದ್ದ ಈ ಆಸಿಸ್ ಆಟಗಾರ ಈ ಬಾರಿ 12 ಪಂದ್ಯಗಳಿಂದ ಒಟ್ಟು 692 ರನ್ ಕಲೆ ಹಾಕಿದ್ದಾರೆ.
ಅತಿ ಹೆಚ್ಚು ಅರ್ಧ ಶತಕ ಬಾರಿಸಿದ ಡೇವಿಡ್ ವಾರ್ನರ್
ಹೈಯೆಸ್ಟ್ ಸ್ಕೋರರ್ ಆಗಿರುವ ಡೇವಿಡ್ ವಾರ್ನರ್ ಹಲವಾರು ದಾಖಲೆಗಳನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಾರ್ನರ್ 12 ಪಂದ್ಯಗಳಿಂದ ಒಟ್ಟು 8ಅರ್ಧ ಶತಕ ಬಾರಿಸಿದ್ದಾರೆ. ಪಂಜಾಬ್ ತಂಡದ ಓಪನರ್ ಕನ್ನಡಿಗ ಕೆ.ಎಲ್. ರಾಹುಲ್ 6 ಅರ್ಧ ಶತಕ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಡೆಲ್ಲಿ ತಂಡದ ಓಪನರ್ ಶಖರ್ ಧವನ್ 5 ಅರ್ಧ ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ವೇಗದ ಶತಕ ಬಾರಿಸಿದ ಜಾನಿ ಬೇರ್ಸ್ಟೊ
ಚೊಚ್ಚಲ ಐಪಿಎಲ್ ಆಡಿದ ಇಂಗ್ಲೆಂಡ್ನ ಸ್ಟಾರ್ ಆಟಗಾರ ಜಾನಿ ಬೇರ್ ಸ್ಟೋ ಸಿಡಿಲ್ಬರದ ಬ್ಯಾಟಿಂಗ್ ಮಾಡಿ ಮೊದಲ ಸೀಸನ್ನನ್ನ ಸ್ಮರಣಿವಾಗಿರಿಸಿಕೊಂಡಿದ್ದಾರೆ.
ತಂಡದ ಸಹ ಓಪನರ್ ಡೇವಿಡ್ ವಾರ್ನರ್ ಜೊತೆಗೂಡಿ ಬೊಂಬಾಟ್ ಬ್ಯಾಟಿಂಗ್ ಮಾಡಿರುವ ಜಾನಿ ಬೇರ್ ಸ್ಟೋ ಈ ಸೀಸನ್ನಲ್ಲಿ ವೇಗದ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ತವರಿನಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಜಾನಿ ಬೇರ್ ಸ್ಟೊ ಕೇವಲ 52 ಎಸೆತದಲ್ಲಿ ಶತಕ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ.
ವೇಗದ ಅರ್ಧ ಶತಕ ಬಾರಿಸಿ ದಾಖಲೆ ಬರೆದ ಹಾರ್ದಿಕ್
ಇಂಜುರಿ ನಂತರ ಐಪಿಎಲ್ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರ ಜಬರ್ದಸ್ತ್ ಆಗಿ ಆಲ್ರೌಂಡ್ ಪರ್ಫಾಮನ್ಸ್ ಕೊಟ್ಟು ಮ್ಯಾಚ್ ವಿನ್ನರ್ರಾಗಿ ಹೊರ ಹೊಮ್ಮಿದ್ದಾರೆ. ಲೀಗ್ನಲ್ಲಿ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಕೇವಲ 17 ಎಸೆತಲ್ಲಿ ವೇಗದ ಅರ್ಧ ಶತಕ ಬಾರಿಸಿ ಐಪಿಎಲ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಅತಿ ಹೆಚ್ಚು ಬೌಂಡರಿ ಬಾರಿಸಿದ ಶಿಖರ್ ಧವನ್
ಡೆಲ್ಲಿ ಪರ ಅಬ್ಬರದ ಬ್ಯಾಟಿಂಗ್ ಮಾಡಿರುವ ಡ್ಯಾಶೀಂಗ್ ಓಪನರ್ ಶಿಖರ್ ಧವನ್ ಟೂರ್ನಿಯಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿರುವ ಬ್ಯಾಟ್ಸ್ಮನ್ ಆಗಿದ್ದಾರೆ. ಪ್ರತಿ ಪಂದ್ಯದಲ್ಲೂ ಸ್ಲೋ ಅಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟುತ್ತಿದ್ದ ಧವನ್ 16 ಪಂದ್ಯಗಳಿಂದ 64 ಬೌಂಡರಿ ಬಾರಿಸಿ ಮೊದಲ ಸ್ಥಾನದಲ್ಲದ್ದಾರೆ.
ದೂರದ ಸಿಕ್ಸ್ ಬಾರಿಸಿದ ಚೆನ್ನೈ ತಲೈವಾ ಧೋನಿ
ಧೋನಿ ಈ ಬಾರಿಯ ಐಪಿಎಲ್ನಲ್ಲಿ ಡೆಡ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಧೋನಿ ಬೌಂಡರಿ ಸಿಕ್ಸರ್ಗಳ ಮೂಲಕ ಅಬ್ಬರಿಸಿದ್ದಾರೆ. ಅದರಲ್ಲೂ ಧೋನಿ 111 ಮೀಟರ್ ದೂರ ಸಿಕ್ಸ್ ಬಾರಿಸಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ 104 ಮೀಟರ್ ದೂರ ಸಿಕ್ಸ್ ಬಾರಿಸಿದ ಎರಡನೇ ಬ್ಯಾಟ್ಸ್ಮನ್ ಎನಿಸಿದ್ದಾರೆ.
ಒಟ್ಟಾರೆ 12ನೇ ಐಪಿಎಲ್ ಟೂರ್ನಿ ಈ ಹಿಂದಿನ ಎಲ್ಲ ಸೀಸನ್ಗಳಿಗಿಂತ ಭಿನ್ನವಾಗಿದ್ದು ಹಲವಾರು ವಿಶೇಷ ದಾಖಲೆಗಳು ದಾಖಲಾಗಿವೆ ಅನ್ನೋದೇ ವಿಶೇಷವಾಗಿದೆ.