ಚೆನ್ನೈಗೆ ಆಘಾತ- ಮುಂಬೈಗೆ ಚಾಂಪಿಯನ್ ಕಿರೀಟ

12ನೇ ಆವೃತ್ತಿ ಐಪಿಎಲ್ ಟೂರ್ನಿ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿದ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಕೊನೆಯ ಎಸೆತದಲ್ಲಿ ವಿಕೆಟ್ ಕಬಳಿಸೋ ಮೂಲಕ ಮುಂಬೈ 1 ರನ್ಗಳ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ 4ನೇ ಬಾರಿಗೆ ಮುಂಬೈ ಟ್ರೋಫಿ ಗೆದ್ದುಕೊಂಡಿತು. ಗರಿಷ್ಠ ಐಪಿಎಲ್ ಪ್ರಶಸ್ತಿ ಗೆದ್ದ ತಂಡ ಅನ್ನೋ ದಾಖಲೆ ಬರೆಯಿತು.

ಐಪಿಎಲ್ 12ರ ಆವೃತ್ತಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಹೈದ್ರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ಗಳಿಂದ ಜಯ ದಾಖಲಿಸಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್ಗೆ 45 ರನ್ ಜೊತೆಯಾಟವಾಡಿ ಉತ್ತಮ ಆರಂಭ ಒದಗಿಸಿದ್ರು. ಆದ್ರೆ ಡಿಕಾಕ್ 29 ರನ್ಗೆ ವಿಕೆಟ್ ಒಪ್ಪಿಸಿದ್ರೆ, ರೋಹಿತ್ 15 ರನ್ಗೆ ಔಟಾದ್ರು. ಇನ್ನುಳಿದಂತೆ ಇಶಾನ್ ಕಿಶಾನ್ 23, ಸೂರ್ಯಕುಮಾರ್ ಯಾದವ್ 15, ಕೃನಾಲ್ ಪಾಂಡ್ಯ 7, ರಾಹುಲ್ ಚಾಹರ್ ಹಾಗೂ ಮೆಕ್ಲೆನೆಘನ್ ಶೂನ್ಯಕ್ಕೆ ಪೆವಿಲಿಯನರ ಪರೇಡ್ ನಡೆಸಿದ್ರು. ನಿರೀಕ್ಷೆ ಹೆಚ್ಚಿಸಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಆಟ ಕೂಡ 16 ರನ್ಗಳಿಗೆ ಅಂತ್ಯವಾಯ್ತು. ಆದ್ರೆ ಅಬ್ಬರಿಸಿದ ಕೀರನ್ ಪೊಲಾರ್ಡ್ 25 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಮೇತ ಸ್ಫೋಟಕ 41 ರನ್ ಸಿಡಿಸಿ ಮುಂಬೈ ತಂಡಕ್ಕೆ ನೆರವಾದ್ರು. ಕೊನೆಗೆ ಸಿಎಸ್ಕೆ ಬೌಲರ್ಗಳ ಸಂಘಟಿತ ದಾಳಿ ಎದುರು 20 ಓವರ್ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 149ರನ್ಗಳ ಸಾಧಾರಣ ಮೊತ್ತ ಕಲೆಹಾಕಲಷ್ಟೇ ಮುಂಬೈ ಶಕ್ತವಾಯಿತು. ಸಿಎಸ್ಕೆ ಪರ ದೀಪಕ್ ಚಾಹರ್ 3 ವಿಕೆಟ್, ಶಾರ್ದೂರ್ ಠಾಕೂರ್ ಮತ್ತು ಇಮ್ರಾನ್ ತಾಹಿರ್ ತಲಾ 2 ವಿಕೆಟ್ ಪಡೆದು ಮಿಂಚಿದ್ರು.

150 ರನ್ಗಳ ಟಾರ್ಗೆಟ್ ಪಡೆದು ಚೇಸಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಫಾಪ್ ಡು ಪ್ಲೆಸಿಸ್ 13 ಎಸೆತಗಳಲ್ಲಿ 26 ರನ್ ಸಿಡಿಸಿ ಉತ್ತಮ ಆರಂಭ ನೀಡಿದ್ರು. ಆದ್ರೆ ಶೇನ್ ವಾಟ್ಸನ್ ಬಿಟ್ಟರೆ ಬಳಿಕ ಬಂದ ಚೆನ್ನೈ ಬ್ಯಾಟ್ಸ್ಮೆನ್ಗಳಿಂದ ರನ್ ಹೊಳೆ ಹರಿಯಲಿಲ್ಲ. ರೈನಾ 8, ರಾಯುಡು 1 ರನ್ಗೆ ವಿಕೆಟ್ ಒಪ್ಪಿಸಿ ಪಂದ್ಯದಲ್ಲಿ ಮುಂಬೈ ಮೇಲುಗೈಗೆ ಕಾರಣರಾದ್ರು. 2 ರನ್ ಗಳಿಸಿದ್ದ ಕ್ಯಾಪ್ಟನ್ ಕೂಲ್ ಧೋನಿ ಇಶಾನ್ ಕಿಶಾನ್ ಮಾಡಿದ ಅದ್ಭುತ ಥ್ರೋಗೆ ರನೌಟ್ ಆದ್ರು.

ಬ್ರಾವೋ ಬ್ಯಾಟ್ನಿಂದ ಬಂದಿದ್ದು 15 ರನ್ ಮಾತ್ರ. ಕೃನಾಲ್ ಪಾಂಡ್ಯ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸೇರಿ 59 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಿಡಿಸಿದ ವಾಟ್ಸನ್ ಗೆಲುವಿನಂಚಲ್ಲಿ ಎಡವಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ