ಕಾಬೂಲ್: ಮಾಜಿ ಪತ್ರಕರ್ತೆ ಹಾಗೂ ಸಲಹೆಗಾರ್ತಿಯೊಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದು ಹಾಕಿರುವ ಘಟನೆ ಅಪ್ಘಾನಿಸ್ತಾನದ ಕಾಬೂಲ್ ನಲ್ಲಿ ನಡೆದಿದೆ.
ಕೆಲ ದಿನಗಳ ಹಿಂದಷ್ಟೇ ತನಗೆ ಜೀವ ಬೆದರಿಕೆ ಇದೆ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದ ರಾಜಕೀಯ ಸಲಹೆಗಾರ್ತಿ ಮೀನಾ ಮಂಗಲ್ ಗುಂಡಿನ ದಾಳಿಗೆ ಬಲಿಯಾದವರು.
ಅರಿಯಾನಾ ನ್ಯೂಸ್ ಮಾಜಿ ವರದಿಗಾರ್ತಿಯಾಗಿದ್ದ ಮಿನಾ ಮಂಗಲ್ ಅವರನ್ನು ಕಾಬೂಲ್ ನ ಅವರ ನಿವಾಸದ ಸಮೀಪ ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆಂದು ಪೊಲೀಸ್ ವಕ್ತಾರ ಬಸಿರ್ ಮುಜಾಹೀದ್ ತಿಳಿಸಿದ್ದಾರೆ.
ಮೀನಾ ಅಫ್ಘಾನ್ ಸಂಸತ್ತಿನ ಸಾಂಸ್ಕೃತಿಕ ವ್ಯವಹಾರಗಳ ಆಯೋಗದ ಸಲಹೆಗಾರರಾಗಿದ್ದರು. ಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಆದರೆ ಮೇ 3ರಂದು ಮೀನಾ “ತಮ್ಮ ಜೀವಕ್ಕೆ ಅಪಾಯವಿದೆ” ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದರು. ಅಲ್ಲದೇ ಆಕೆ ರಕ್ಷಣೆಗೆ ಮನವಿ ಸಲ್ಲಿಸಿದ್ದರೂ ಸರ್ಕಾರ ಅವರಿಗೆ ಸರಿಯಾದ ಭದ್ರತೆ ಒದಗಿಸಿಲ್ಲ ಹಾಗಾಗಿ ಪತ್ರಕರ್ತೆಯ ಹತ್ಯೆ ನಡೆದಿದೆ ಎಂದು ಮಾನವ ಹಕ್ಕುಗಳ ವಕೀಲರು, ಮಹಿಳಾ ಹಕ್ಕುಗಳ ಅಭಿಯಾನ ಹೋರಾಟಗಾರು ವಝ್ಮಾ ಫ್ರೊಗ್ ಹೇಳಿದ್ದಾರೆ.
Meena Mangal, Afghan former journalist shot dead in Kabul