ಗೋದ್ರಾ ಹತ್ಯಾಕಾಂಡಕ್ಕೂ ನಿಮಗೂ ನಂಟಿದೆ ಎಂದರೆ ನೀವೇನು ಹೇಳುತ್ತೀರಿ: ಪ್ರಧಾನಿ ಮೋದಿಗೆ ಸಿಎಂ ಅಮರಿಂದರ್ ಸಿಂಗ್ ಪ್ರಶ್ನೆ

ಪಟಿಯಾಲಾ : ‘2002ರಲ್ಲಿ ನಡೆದಿದ್ದ ಗುಜರಾತ್‌ನ ಗೋದ್ರಾ ಹತ್ಯಾಕಾಂಡಕ್ಕೂ ನಿಮಗೂ ನಂಟಿದೆ ಎಂದು ಯಾರಾದಾರೂ ಆರೋಪಿಸಿದರೆ ನೀವೇನು ಹೇಳುವಿರಿ?’ ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ 1984ರ ಸಿಕ್ಖ್ ವಿರೋಧಿ ಹಿಂಸೆಗೆ ಕಾಂಗ್ರೆಸ್‌ ಮತ್ತು ಗಾಂಧಿ ಕುಟುಂಬವೇ ಕಾರಣ ಎಂದು ಆರೋಪಿಸುತ್ತಿರುವ ಹಿನ್ನಲೆಯಲ್ಲಿ ಅಮರೀಂದರ್‌ ಸಿಂಗ್‌ ಈ ಪ್ರಶ್ನೆಯನ್ನು ಕೇಳಿದ್ದಾರೆ.

1984ರ ಸಿಕ್ಖ್ ವಿರೋಧಿ ಹಿಂಸೆಗೆ ಮಾಜಿ ದಿವಂಗತ ಪ್ರಧಾನಿ ರಾಜೀವ್‌ ಗಾಂಧಿ ಕಾರಣರೆಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸುವುದು ತಪ್ಪು. ಇದು ಸರಿ ಎಂದಾದರೆ ಗೋದ್ರಾ ಹಿಂಸೆಗೆ ಮೋದಿಯೇ ಕಾರಣ ಎಂದು ಹೇಳುವುದು ಕೂಡ ಸರಿಯಾದೀತು’ ಎಂದು ಅಮರೀಂದರ್‌ ಸಿಂಗ್‌ ಅವರು ಹೇಳಿದ್ದಾರೆ.

‘ಚುನಾವಣೆಗಳನ್ನು ಗೆಲ್ಲುವ ಸಲುವಾಗಿ ಪ್ರಧಾನಿ ಮೋದಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ; ಈ ರೀತಿಯ ವರ್ತನೆ ದೇಶದ ಪ್ರಧಾನಿಗೆ ಶೋಭೆಯಲ್ಲ ಎಂದು ಅಮರೀಂದರ್‌ ಸಿಂಗ್‌ ತಿಳಿಸಿದ್ದಾರೆ.

What If Someone Links You To Godhra”: Amarinder Singh To PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ