ಇಂದೋರ್: ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು, ಮೋದಿ ವಿಭಜನಾಕಾರಿ ಶಕ್ತಿಗಳ ಮುಖ್ಯಸ್ಥ. ಎಲ್ಲಕ್ಕಿಂತ ಮಿಗಿಲಾಗಿ ಅಂಬಾನಿ ಮತ್ತು ಅದಾನಿಯಂಥ ಕೈಗಾರಿಕೋದ್ಯಮಿಗಳ ಬಿಜಿನೆಸ್ ಮ್ಯಾನೇಜರ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದ ಇಂಧೋರ್ ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಸಿಧು, ಪ್ರಧಾನಿ ಮೋದಿ ಸುಳ್ಳುಗಾರರ ಸಂಸ್ಥೆಯ ಮುಖ್ಯಸ್ಥ. ಮೋದಿ ಅವರದ್ದು ಕೇವಲ ಬಂಡವಾಳವಿಲ್ಲದ ಬಡಾಯಿ ಎಂದು ಗುಡುಗಿದ್ದಾರೆ.
ಅಲ್ಲದೇ ಮೋದಿ ಒಂದು ರೀತಿ ನವವಿವಾಹಿತೆ ಇದ್ದಂತೆ. ರೊಟ್ಟಿ ಮಾಡಲು ಸೋಂಬೇರಿತನ ತೋರಿದರೂ, ನಾಲ್ಕು ಜನರು ಈಕೆ ತುಂಬಾ ಕೆಲಸ ಮಾಡುತ್ತಿದ್ದಾಳೆ ಎಂಬುದನ್ನು ತೋರಿಸಿಕೊಳ್ಳಲು ಬಳೆಯ ಸದ್ದು ಮಾಡುವವಳಿದ್ದಂತೆ. ಅಡುಗೆ ಮಾಡಲಾಗದ ವಧು ಹೆಚ್ಚು ಕೆಲಸ ಮಾಡುತ್ತಿದ್ದೇನೆ ಎಂದು ನೆರೆಹೊರೆಯವರು ತಿಳಿದುಕೊಳ್ಳಲಿ ಎಂದು ಬಳೆಗಳ ಶಬ್ದ ಜಾಸ್ತಿ ಮಾಡುತ್ತಾಳೆ. ಇದೇ ರೀತಿ ನರೇಂದ್ರ ಮೋದಿ ಸರ್ಕಾರ ಮಾಡಿದೆ ಎಂದು ಕಿಡಿಕಾರಿದರು.