ಡೆಲ್ಲಿಗೆ ಗೆಲುವಿನ ಪಾಠ ಹೇಳಿ ಫೈನಲ್‍ಗೆ ಎಂಟ್ರಿ ಕೊಟ್ಟ ಚೆನ್ನೈ

ಐಪಿಎಲ್ ಟೂರ್ನಿಯಲ್ಲಿ ಫೈನಲ್ಗೇರೋ ಡೆಲ್ಲಿ ಕ್ಯಾಪಿಟಲ್ಸ್ ಕೊನೆಗೂ ಈಡೇರಲಿಲ್ಲ. 12ನೇ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಪ್ಲೇ ಆಫ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್, ಟೂರ್ನಿಯಿಂದ ಹೊರಬಿದ್ದಿದೆ. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಲ್ರೌಂಡರ್ ಪ್ರದರ್ಶನಕ್ಕೆ ಡೆಲ್ಲಿ ಸೋತು ಶರಣಾಯಿತು. 6 ವಿಕೆಟ್ ಗೆಲುವು ಸಾಧಿಸಿದ ಚೆನ್ನೈ ಫೈನಲ್ ಪ್ರವೇಶಿಸಿದೆ.
ಗೆಲುವಿಗೆ 148 ರನ್ ಸುಲಭ ಟಾರ್ಗೆಟ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಯಾವ ಹಂತದಲ್ಲೂ ಒತ್ತಡಕ್ಕೆ ಸಿಲುಕಲಿಲ್ಲ. ಫಾಫ್ ಡುಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ಮೊದಲ ವಿಕೆಟ್ಗೆ 81 ರನ್ ಜೊತೆಯಾಟ ನೀಡೋ ಮೂಲಕ ಚೆನ್ನೈ ಗೆಲುವಿನ ಹಾದಿ ಸುಗಮಗೊಳಿಸಿದರು. ಡುಪ್ಲೆಸಿಸ್ 39 ಎಸೆತದಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 50 ರನ್ ಸಿಡಿಸಿ ಔಟಾದರು.
ಮೊದಲ ವಿಕೆಟ್ ಕಬಳಿಸಿದ ಸಂಭ್ರಮ ಡೆಲ್ಲಿ ತಂಡದಲ್ಲಿರಲಿಲ್ಲ. ಕಾರಣ ಅSಏ ಆಗಲೇ ಗೆಲುವಿನತ್ತ ದಾಪುಗಾಲಿಟ್ಟಿತು. ಡುಪ್ಲೆಸಿಸ್ ಬಳಿಕ ವ್ಯಾಟ್ಸನ್ ಅಬ್ಬರ ಆರಂಭಗೊಂಡಿತು. ವ್ಯಾಟ್ಸನ್ 32 ಎಸೆತದಲ್ಲಿ 50 ರನ್ ಸಿಡಿಸಿ ಔಟಾದರು. ಸುರೇಶ್ ರೈನಾ 11 ರನ್ ಸಿಡಿಸಿ ಔಟಾದರು. ಅSಏ ಗೆಲುವಿಗೆ ಇನ್ನು 2 ರನ್ ಬೇಕಿತ್ತು. ಅಷ್ಟರಲ್ಲಿ ಎಂ.ಎಸ್.ಧೋನಿ ವಿಕೆಟ್ ಪತನಗೊಂಡಿತು. ಅಂಬಾಟಿ ರಾಯುಡು ಡ್ವೇನ್ ಬ್ರಾವೋ ಅSಏ ತಂಡವನ್ನು ಗೆಲುವಿನ ದಡ ಸೇರಿಸಿದರು. ಇನ್ನೂ 6 ಎಸೆತ ಬಾಕಿ ಇರುವಂತೆ 6 ವಿಕೆಟ್ ಗೆಲುವು ಸಾಧಿಸಿತು.
ಒಟ್ಟಾರೆ 19 ಓವರ್ಗಳಲ್ಲಿ 151 ರನ್ ಗಳಿಸಿದ ಚೆನ್ನೈ 6 ವಿಕೆಟ್ಗಳ ಗೆಲುವನ್ನು ದಾಖಲಿಸಿ, ತಾನಾಡಿದ 10 ಐಪಿಎಲ್ ಸರಣಿಗಳ ಪೈಕಿ 8ನೇ ಬಾರಿಗೆ ಫೈನಲ್ ಪ್ರವೇಶಿಸಿತು. ಒಟ್ಟು 3 ಬಾರಿ ಕಪ್ ಗೆದ್ದಿರುವ ಸಿಎಸ್ಕೆ ಈ ಬಾರಿ ಮುಂಬೈಯನ್ನು ಮಣಿಸುವುದೇ ಎನ್ನುವುದು ನಾಳೆ ಹೈದ್ರಾಬಾದ್ನಲ್ಲಿ ತಿಳಿಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ