ನವದೆಹಲಿ: ಭಾರತೀಯ ವಾಯುಪಡೆಗೆ ಹೊಸ ಬಲ ಬಂದಂತಾಗಿದೆ. ಮೊದಲ ಅಪಾಚೆ ಗಾರ್ಡಿಯನ್ ದಾಳಿ ಹೆಲಿಕಾಪ್ಟರ್ (ಎಎಚ್-64(1) ಅನ್ನು ಅಮೆರಿಕದ ಅರಿಝೋನಾದಲ್ಲಿರುವ ಮೆಸಾ ಬೋಯಿಂಗ್ ಉತ್ಪಾದನಾ ಕೇಂದ್ರದಲ್ಲಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗಿದೆ.
ಭಾರತೀಯ ವಾಯಪಡೆಯ ಪ್ರತಿನಿಧಿಯಾಗಿ ಏರ್ ಮಾರ್ಷಲ್ ಎ.ಎಸ್ ಬಟೋಲಾ ಅವರು ಮೊದಲ ಅಪಾಚೆ ಹೆಲಿಕಾಪ್ಟರ್ ಅನ್ನು ಸ್ವೀಕರಿಸಿದರು. 2020ರ ಮಾರ್ಚ್ ವೇಳೆಗೆ ಭಾರತೀಯ ವಾಯುಪಡೆ 22 ಅಪಾಚೆ ಹೆಲಿಕಾಪ್ಟರ್ಗಳನ್ನು ಸೇರಿಸಿಕೊಳ್ಳಲಿದೆ. ಒಟ್ಟು 13,952 ಕೋಟಿ ರೂ ವೆಚ್ಚದಲ್ಲಿ ಇವುಗಳ ಖರೀದಿಗೆ 2015ರಲ್ಲಿ ಅಮೆರಿಕದ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ವರ್ಷ ಜುಲೈ ನಲ್ಲಿ ಐಎಎಫ್ ಗೆ ಈ ಹೆಲಿಕಾಪ್ಟರ್ಗಳ ಮೊದಲ ಕಂತು ಪೂರೈಕೆಯಾಗಲಿದೆ.
ಇನ್ನು ಅಪಾಚೆ ಐಎಎಫ್ ನ ಆವಶ್ಯಕ್ಯತೆಗೆ ತಕ್ಕಂತೆ ಮಾರ್ಪಡಿಸಲಾಗಿದೆ. ದುರ್ಗಮ ಪರ್ವತ ಪ್ರದೇಶಗಳಲ್ಲಿ ಶತ್ರುಗಳ ವಿರುದ್ಧ ನಿಖರ ದಾಳಿಗೆ ಈ ಅಪಾಚೆ ಹೆಲಿಕಾಪ್ಟರ್ ಅತ್ಯಂತ ಪರಿಣಾಮಕಾರಿಯಾಗಿದೆ. ಅಪಾಚೆ ದಾಳಿ ಹೆಲಿಕಾಪ್ಟರ್ ಬಹುಸ್ತರದ ಪಾತ್ರ ನಿರ್ವಹಿಸುವ ಅಪಾರ ಸಾಮರ್ಥ್ಯ ಹೊಂದಿದೆ. ಇದನ್ನು ಅಮೆರಿಕ ಸೇನೆ ಈಗಾಗಲೇ ತನ್ನ ವಾಯು ಪಡೆಗೆ ಸೇರಿಸಿಕೊಂಡಿದೆ.
IAF adds more teeth as Boeing hands over first AH-64E Apache Guardian attack helicopter to India