ಜೈಪುರ: ಪಾಕಿಸ್ತಾನದ ಎಎನ್-12 ಬೃಹತ್ ಕಾರ್ಗೋ ವಿಮಾನ ವಾಯುಪ್ರದೇಶವನ್ನು ಉಲ್ಲಂಘಿಸಿ ಭಾರತ ಪ್ರವೇಶಿಸಿದ ತಕ್ಷಣ ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ಅದನ್ನು ತಡೆದು ಜೈಪುರ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಿವೆ.
ಅಮೆರಿಕಾದ ಜಾರ್ಜಿಯದಿಂದ ದೆಹಲಿಗೆ ಹೊರಟಿದ್ದ ಈ ವಿಮಾನ ಕರಾಚಿ ಮಾರ್ಗ ಬದಲಿಸಿ ಗುಜರಾತ್ನ ಅಪರಿಚಿತ ಸ್ಥಳದ ಮೂಲಕ ಭಾರತೀಯ ವಾಯು ಪ್ರದೇಶವನ್ನು ತಲುಪಿದೆ. ಸರಕು ವಿಮಾನ ಪೈಲಟ್ಗಳ ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪಾಕಿಸ್ತಾನ ವಿಮಾನವನ್ನು ನಮ್ಮ ವಿಮಾನಗಳು ಎಚ್ಚರಿಕೆಯಿಂದ ತಡೆದು ಬಲವಂತವಾಗಿ ಇಳಿಸುವಲ್ಲಿ ಯಶಸ್ವಿಯಾಗಿವೆ ಎಂದು ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
Air Force Jets Force Georgian Plane From Karachi To Land In Jaipur After It Deviates From Flight Path