ರಾಜ್ಯ ಸರ್ಕಾರದ ಆಯುಷ್ಯ ಸಿದ್ದರಾಮಯ್ಯ ಕೈಯಲ್ಲಿದೆ-ಬಿಜೆಪಿ ಮುಖಂಡ ಆರ್.ಆಶೋಕ್

ಚಿಂಚೋಳಿ ಮೇ 10- ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದ ಮುಖ್ಯಮಂತ್ರಿಗಳು ರೆಸಾರ್ಟ್‍ನಲ್ಲಿಯೇ ವಿಶ್ರಾಂತಿ ತಗೆದುಕೊಳ್ಳುತ್ತಿದ್ದಾರೆ.

ಬರಗಾಲದ ಪರಿಸ್ಥಿತಿಯಲ್ಲಿ ರೆಸಾರ್ಟ್ ವಾಸಕ್ಕೆ ಮುಂದಾಗಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬರಗಾಲದಿಂದ ರಾಜ್ಯದ ಹಲವು ಭಾಗದ ಜನರು ತತ್ತರಿಸಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರವಿದೆ. ಜನರ ಆರೋಗ್ಯ ವಿಚಾರಿಸುವ ಬದಲು ಮುಖ್ಯಮಂತ್ರಿಗಳು ರೆಸಾರ್ಟ್‍ನಲ್ಲಿ ವಿಶ್ರಾಂತಿ ತಗೆದುಕೊಳ್ಳಿತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಳೆದ 6 ತಿಂಗಳ ಹಿಂದೆಯೇ ಬರ ನಿರ್ವಹಣೆಗೆ ತಯಾರಿ ನಡೆಸಬೇಕಿತ್ತು. ಆದರೆ, ಯಾವುದೇ ತಯಾರಿ ನಡೆಸದೆ ಈಗ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರಕಾರದ ಮೇಲೆ ಬೆರಳು ತೋರಿಸುತ್ತಿದ್ದಾರೆ. ಕುಣಿಯಲು ಬಾರದವರು ನೆಲ ಡೊಂಕು ಎನ್ನುವಂತಿದೆ ಎಂದು ಟೀಕಿಸಿದರು.

ಮದ್ಯಂತರ ಚುನಾವಣೆ ಸಿದ್ದವೇ?ಎಂದು ಚೆಲುವನಾರಾಯಣಸ್ವಾಮಿ ಬಿಜೆಪಿಗೆ ಸವಾಲ್ ಹಾಕುತ್ತಾರೆ. ನಾವು ಅವರಿಗೆ ಪ್ರತಿ ಸವಾಲ್ ಹಾಕುತ್ತಿದ್ದೇವೆ. ಧೈರ್ಯ ಇದ್ದರೆ ಮೊದಲು ಕಾಂಗ್ರೆಸ್ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆಯಲಿ ಎಂದರು.

ಚುನಾವಣೆಗೆ ಬಿಜೆಪಿ ಎಂದೂ ಹೆದರಿಲ್ಲ. ರಾಜ್ಯ ಸರಕಾರದ ಆಯುಷ್ಯ ಸಿದ್ದರಾಮಯ್ಯ ಕೈಯಲ್ಲಿ ಇದೆ. ಧೈರ್ಯ ಇದ್ದರೆ ಬೆಂಬಲ ವಾಪಾಸ್ ತಗೆದುಕೊಂಡು ಸವಾಲು ಹಾಕಿ ನಾವು ಆಗ ಉತ್ತರ ನೀಡುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ