ಪುರೋಲಿಯಾ,ಮೇ.09-ಇಂದು ಪಶ್ಚಿಮ ಬಂಗಾಳದ ಪುರೋಲಿಯಾದ ರ್ಯಾಲಿಯಲ್ಲಿ ಮಾತನಾಡಿದ ಪ್ರದಾನಿ ಮಂತ್ರಿ ಮೋದಿ ನಿಮ್ಮ ಹೊಡೆತ ನನಗೆ ಆಶೀರ್ವಾದವಿದ್ದಂತೆ ಎಂದು ಹೇಳಿದರು. ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರಧಾನಿ ಮೋದಿ ಕುರಿತು ಪ್ರಧಾನಿಯವರಿಗೆ ಪ್ರಜಾಪ್ರಭುತ್ವದ ಬಿಗಿಯಾದ ಹೊಡೆತ ನೀಡಬೇಕು ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ನಿಮ್ಮ ಹೊಡೆತ ನನಗೆ ಆಶೀರ್ವಾದವಿದ್ದಂತೆ ಎಂದು ಹೇಳಿದರಲ್ಲದೇ, ಮಮತಾ ಬ್ಯಾಮರ್ಜಿಯವರ ಟೀಕೆಗಳಿಂದ ಕೆರಳಿದ ಪ್ರಧಾನಿ ಮಮತಾ ಮೇಲಿನ ಆರೋಪಗಳನ್ನು ದ್ವಿಗುಣಗೊಳಿಸಿದರು.
ನಾನು ದಿದಿಗೆ ಹೇಳುತ್ತಿದ್ದೇನೆ ಅವರು ನನಗೆ ಹೊಡೆಯಬೇಕು ಎಂದು ಹೇಳಿದ್ದಾರೆ. ನಾನು ನಿಮ್ಮನ್ನು ದಿದಿ ಎಂದು ಕರೆಯುತ್ತೇನೆ, ನಿಮಗೆ ಗೌರವ ಕೊಡುತ್ತೇನೆ. ನಿಮ್ಮ ಹೊಡೆತ ನನಗೆ ಆಶೀರ್ವಾದವಿದ್ದಂತೆ ಎಂದು ಪ್ರಧಾನಿ ಹೇಳಿದರು.
ನಾನು ಅದನ್ನು ಸ್ವೀಕರಿಸುತ್ತೇನೆ, ಆದರೂ ಸಹ ಹೇಳುತ್ತಿದ್ದೇನೆ ನೀವು ಧೈರ್ಯವನ್ನು ಹೊಂದಿದ್ದರೆ, ಚಿಟ್ ಫಂಡ್ ಮುಖಾಂತರ ಬಡವರ ಹಣವನ್ನು ಕದ್ದಿರುವ ನಿಮ್ಮ ಸಹೋದ್ಯೋಗಿಗಳಿಗೆ ಹೊಡೆಯಿರಿ ಎಂದು ಪ್ರಧಾನಿ ಹೇಳಿದರು. ಚಿಟ್ ಫಂಡ್ ಮತ್ತು ಸುಲಿಗೆ ಮಾಡುವ ತೆರಿಗೆ ಸೇರಿದಂತೆ ಆನೇಕ ಆರೋಪಗಳನ್ನು ಒಳಗೊಂಡ ಟಿಎಂಸಿ ಮುಖ್ಯಸ್ಥೆ ವಿರುದ್ಧ ತಮ್ಮ ನಿರಂತರ ದಾಳಿಯನ್ನು ಪ್ರಧಾನಿ ಮುಂದುವರಿಸಿದರು.