![Hot day in New Delhi](http://kannada.vartamitra.com/wp-content/uploads/2019/05/new-delhi-heat-341x381.jpg)
ನವದೆಹಲಿ, ಮೇ 9- ಬಿಸಿಲಿನ ತಾಪಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿಯ ಜನತೆ ತತ್ತರಿಸಿ ಹೋಗಿದ್ದಾರೆ. ಇಂದು ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಷಿಯಸ್ ತಲುಪಿದ್ದು , ಇನ್ನು ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಜನರು ಬಿಸಿಲಿನ ಧಗೆಯಿಂದ ಪಾರಾಗಲು ಜನರು ನಾನಾ ರೀತಿಯ ಕಸರತ್ತು , ಪ್ರಯಾಸ ಪಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಗರಿಷ್ಠ 61 ಡಿಗ್ರಿ ಉಷ್ಣಾಂಶವಾಗಬಹುದು. ಮಧ್ಯಾಹ್ನದ ವೇಳೆ ಸುಡು ಬಿಸಿಲು ಇರುತ್ತದೆ. ಆದರೆ ಬೆಳಗ್ಗೆ 8.30ರಲ್ಲಿಯೇ ಸೂರ್ಯನ ತಾಪ ತಾಳಲಾರದೆ ಜನರು ರಸ್ತೆಗಳಲ್ಲಿ ಛತ್ರಿ ಹಾಗೂ ನೆರಳಿನ ಆಶ್ರಯ ಪಡೆಯುತ್ತಿದ್ದುದು ಕಂಡು ಬಂತು.
ರಾತ್ರಿ ವೇಳೆಗೆ ಗರಿಷ್ಠ ತಾಪಮಾನ 23 ಡಿಗ್ರಿಗೆ ಇಳಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.