ನಿನ್ನೆ ಸನ್ರೈಸರ್ಸ್ ಮತ್ತು ಡೆಲ್ಲಿ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ಎರಡು ವಿಕೆಟ್ಗಳ ರೋಚಕ ಗೆಲುವು ಪಡೆದು ಕ್ವಾಲಿಫೈರ್ 2ಕ್ಕೆ ಎಂಟ್ರಿಕೊಟ್ಟಿದೆ. ವೈಜಾಗ್ ಅಂಗಳದಲ್ಲಿ ನಡೆದ ಕದನ ಹೇಗಿತ್ತು ನೋಡೋಣ ಬನ್ನಿ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ತಂಡಕ್ಕೆ ಓಪನರ್ಸ್ಗಳಾದ ವೃದ್ದಿಮಾನ್ ಸಾಹಾ ಮತ್ತು ಮಾರ್ಟಿನ್ ಗಪ್ಟಿಲ್ Decent ಓಪನಿಂಗ್ ಕೊಡುವಲ್ಲಿ ಎಡವಿದ್ರು.
8 ರನ್ ಗಳಿಸಿದ್ದ ವೃದ್ದಿಮನ್ ಸಾಹಾ ಇಶಾಂತ್ಗೆ ಬಲಿಯಾದ್ರೆ 36 ರನ್ ಗಳಿಸಿ ಭರವಸೆ ಮೂಡಿಸಿದ್ದ ಮಾರ್ಟಿನ್ ಗಪ್ಟಿಲ್ ಗೆ ಅಮಿತ್ ಮಿಶ್ರ ಮ್ಯಾಜಿಕ್ಗೆ ಬಲಿಯಾದ್ರು.
ಮೂರನೇ ವಿಕೆಟ್ಗೆ ಜೊತೆಗೂಡಿದ ಮನೀಶ್ ಪಾಂಡೆ ಜೊತೆಗೂಡಿದ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಎಚ್ಚರಿಕೆಯ ಬ್ಯಾಟಿಂಗ್ ಮಾಡಿ ತಂಡಕ್ಕೆ ಬಿಗ್ ಕಟ್ಟುವ ಸೂಚನೆ ಕೊಟ್ರು. ಆದರೆ 30 ರನ್ಗಳಿಸಿದ್ದ ಕನ್ನಡಿಗ ಮನೀಶ್ ಪಾಂಡೆ 30 ರನ್ಗಳಿಸಿದ್ದಾಗ ಕಿಮೊ ಪೌಲ್ಗೆ ಬಲಿಯಾದ್ರು. ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಜೊತೆಗೂಡಿದ ಆಲ್ರೌಂಡರ್ ವಿಜಯ್ ಶಂಕರ್ ನಾಲ್ಕನೆ ವಿಕೆಟ್ಗೆ 36 ರನ್ ಸೇರಿಸಿ ತಂಡದ ಸ್ಕೋರ್ ಹೆಚ್ಚಿಸಿದ್ರು. ನಂತರ ಕೇನ್ ವಿಲಿಯಮ್ಸನ್ 28, ವಿಜಯ್ ಶಂಕರ್ 25ಬೇಗನೆ ಪೆವಿಲಿಯನ್ ಸೇರಿದ್ರು.
ಸನ್ರೈಸರ್ಸ್ 8 ವಿಕೆಟ್ ನಷ್ಟಕ್ಕೆ 162 ರನ್
ಕೊನೆಯಲ್ಲಿ ಬಂದ ಹೂಡ 4, ಮೊಹ್ಮದ್ ನಬಿ 20 ರನ್ ಗಳಿಸಿ ಪೌಲ್ಗೆ ಬಲಿಯಾದ್ರು, ಇದರೊಂದಿಗೆ ಸನ್ರೈಸರ್ಸ್ ನಿಗದಿತ ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಕಲೆ ಹಾಕಿತು.
163 ರನ್ ಗುರಿ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಓಫನರ್ಸ್ಗಳಾದ ಪೃಥ್ವಿ ಶಾ ಮತ್ತು ಶಿಖರ್ ಧವನ್ ಒಳ್ಳೆಯ ಓಪನಿಂಗ್ ಕೊಟ್ರು. ಆದ್ರೆ 17 ರನ್ ಗಳಿಸಿದ್ದ ಧವನ್ ಹೂಡಾಗೆ ಬಲಿಯಾದ್ರು.
ಧವನ್ ಔಟ್ ಆಗುತ್ತಿದ್ದಂತೆ ಡೆಲ್ಲಿ ತಂಡ ಧಿಡೀರ್ ಕುಸಿತ ಕಂಡಿತ್ತು. ಕ್ಯಾಪ್ಟನ್ ಶ್ರೇಯಸ್ ಅಯ್ಯರ್ 8, ಕಾಲಿನ್ ಮನ್ರೊ 14, ಅಕ್ಷರ್ ಪಟೇಲ್ ಬೇಗನೆ ಪೆವಿಲಿಯನ್ ಸೇರಿದ್ರು.
ಏಕಾಂಗಿ ಹೋರಾಟ ಮಾಡಿದ ರಿಷಬ್ 49 ರನ್ಗಳಿಸಿದ್ದಾಗ ಭುವನೇಶ್ವರ್ ಕುಮಾರ್ ಬಲಿಯಾದ್ರು. ಈ ಸಂದರ್ಭದಲ್ಲಿ ಡೆಲ್ಲಿ ಮತ್ತೆ ಇಕ್ಕಟ್ಟಿಗೆ ಸಿಲುಕಿತು.
ಕೊನೆಯ ಓವರ್ನಲಲ್ಲಿ 6 ಎಸೆತದಲ್ಲಿ 5 ರನ್ ಬೇಕಿತ್ತು. ಐದನೇ ಎಸೆತಕ್ಕೂ ಮುನ್ನ ಮೂರು ಎಸೆತದಲ್ಲಿ ರನ್ ಬೇಕಿದ್ದಾಗ ಅಮಿತ್ ಮಿಶ್ರ Feild Obstruct ಮಾಡಿ ಅಂಪೈರ್ ತೀರ್ಪಗೆ ಬಲಿಯಾದ್ರು. ಐದನೇ ಎಸೆತದಲ್ಲಿ ಸ್ಟ್ರೈಕ್ನಲ್ಲಿದ್ದ ಕಿಮೊ ಪೌಲ್ ಬೌಂಡರಿ ಬಾರಿಸಿ ಡೆಲ್ಲಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ರು.
ಇದರೊಂದಿಗೆ ಐಪಿಎಲ್ ಪ್ಲೇ ಆಫ್ನಲ್ಲಿ ಡೆಲ್ಲಿ ಮೊದಲ ಗೆಲುವು ದಾಖಲಿಸಿದ ಸಾಧನೆ ಮಾಡಿತು. ನಾಳೆ ಕ್ವಾಲಿಫೈಯರ್ ಎರಡರಲ್ಲಿ ಚೆನ್ನೈ ವಿರುದ್ಧ ಡೆಲ್ಲಿ ಆಡಲಿದೆ.