ಓಡಿಶಾದಲ್ಲಿ ಐವರು ಮಾವೋವಾದಿಗಳ ಹತ್ಯೆ

ಕೊರಾಪುಟ್ ಜಿಲ್ಲೆ,ಮೇ.09-ಓಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ ಬುದುವಾರ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ನಡೆದ ಕಾದಾಟದಲ್ಲಿ ಮೂವರು ಮಹಿಳೆಯರು ಸೇರಿದಂತೆ ಐವರು ಮಾವೋವಾದಿಗಳು ಹತರಾದರು.

ಎಸ್‍ಒಜಿ ಮತ್ತು ಡಿವಿಫ್ ಸಿಬ್ಬಂದಿಗಳು ಪಡುವಾ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ಕಾರ್ಯಾಚರಣ್ಣೆ ನಡೆಸುತ್ತಿದ್ದಾಗ ಈ ದಾಳಿ ನಡೆಯಿತು.

ಎಸ್‍ಒಜಿ ಮತ್ತು ಡಿವಿಫ್ ಪಡೆಗಳನ್ನು ಗುರುತಿಸಿದ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದರು, ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ದಾಳಿ ನಡೆಸಿ ಐವರು ಮಾವೋವಾದಿಗಳನ್ನು ಕೊಂದರು ಎಂದು ಪೊಲೀಸರು ಹೇಳಿದರು. ಅರಣ್ಯದಲ್ಲಿ 15 ಜನ ಮಾವೋವಾದಿಗಳು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ದಾಳಿ ನಡೆದ ಸ್ಥಳದಲ್ಲಿ ಐದು ಬಂದೂಕಗಳನ್ನು ವಶಪಡಿಸಿಕೊಳ್ಳಲಾಯಿತು.

ಛತ್ತೀಸ್ಗಡದ ದಂತೇವಾಡಾ ಜಿಲ್ಲೆಯಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ ಭದ್ರತಾ ಪಡೆಗಳು ಇಬ್ಬರು ನಕ್ಸಲರನ್ನು ಕೊಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ