ಚೆನ್ನೈ ಸೂಪರ್ ಕಿಂಗ್ಸ್, ಮಿಲಿಯನ್ ಡಾಲರ್ ಟೂರ್ನಿಯ ಬಲಿಷ್ಠ ತಂಡ. ಐಪಿಎಲ್ ತಂಡಗಳ ಪೈಕಿ ಚೆನ್ನೈ ತುಂಬ ವಿಶಿಷ್ಟ ತಂಡವಾಗಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣ ಚಾಣಾಕ್ಷ ಕ್ಯಾಪ್ಟನ್ ಎಂ.ಎಸ್.ಧೋನಿ.. ಯೆಸ್.. ಎದುರಾಳಿ ಯಾರೇ ಇರಲಿ, ಆಟಗಾರ ಯಾರೇ ಇರಲಿ, ಎದುರಾಳಿಗೆ ತಂತ್ರಕ್ಕೆ ಪ್ರತಿತಂತ್ರ ರೂಪಿಸೋದ್ರಲ್ಲಿ ಧೋನಿ ಪಂಟರ್.. ಜೊತೆಗೆ ಅದನ್ನ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುತ್ತಾರೆ. ಆದ್ರೆ ಆ ತಂಡದ ವಿರುದ್ಧ ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಫೇಲ್ ಆಗ್ತಿದ್ದಾರೆ. ಈ ಮೂಲಕ ಆ ತಂಡದ ವಿರುದ್ಧ ಪದೇ ಪದೇ ಸೋತು ಮುಖಭಂಗ ಅನುಭವಿಸುತ್ತಿದ್ದಾರೆ.
ಮುಂಬೈ ವಿರುದ್ಧ ಪದೇ ಪದೇ ಸೋಲುತ್ತೆ ಚೆನ್ನೈ ಸೂಪರ್..!?
ಐಪಿಎಲ್ನಲ್ಲಿ ಮೋಸ್ಟ್ ಸಕ್ಸಸ್ಫುಲ್ ತಂಡಗಳು ಎಂದರೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು. ಇನ್ನೂ ಐಪಿಎಲ್ನಲ್ಲಿ ಬಲಿಷ್ಠ ತಂಡ ಅನ್ನೋ ಹೆಗ್ಗಳಿಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ್ದಾಗಿದೆ. ಇಂಥಹದ್ದೇ ಮತ್ತೊಂದು ಬಲಿಷ್ಠ ತಂಡ ಮುಂಬೈ ಇಂಡಿಯನ್ಸ್, ಈ ಎರಡು ತಂಡಗಳು ಮುಖಾಮುಖಿಯಾದ್ರೆ ಕ್ರಿಕೆಟ್ ಅಭಿಮಾನಿಗಳಿಗೆ ರಸೌದೌತಣ ಪಕ್ಕಾ. ಎಲ್ಲಾ ತಂಡಗಳ ವಿರುದ್ಧ ಪಾರುಪತ್ಯ ಸಾಧಿಸುವ ಚೆನ್ನೈ ತಂಡ ಮುಂಬೈ ವಿರುದ್ಧ ಕಿಂಗ್ ಆಗಲಿಕ್ಕೆ ಪರದಾಡುತ್ತಿದೆ.
ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಒಟ್ಟು 29 ಬಾರಿ ಮುಖಾಮುಖಿ ಆಗಿವೆ. 29 ಪಂದ್ಯಗಳ ಪೈಕಿ 12 ಪಂದ್ಯಗಳಲ್ಲಿ ಚೆನ್ನೈ ಗೆಲುವುಸಾಧಿಸಿದ್ರೆ. ಉಳಿದ 17 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಪಾರುಪತ್ಯ ಮೆರೆದಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೆಚ್ಚು ಪಾರುಪತ್ಯ ಸಾಧಿಸಿರುವ ಹೆಗ್ಗಳಿಕೆ ಮುಂಬೈ ಇಂಡಿಯನ್ಸ್ ತಂಡದ್ದು. ಬರೀ 12ನೇ ಆವೃತ್ತಿಯ ಐಪಿಎಲ್ನಲ್ಲಿ ಮಾತ್ರವಲ್ಲ, ಉಳಿದೆಲ್ಲಾ ಐಪಿಎಲ್ ಟೂರ್ನಿಗಳಲ್ಲೂ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಿಂಗ್ ಆಗಿದೆ.
12ನೇ ಆವೃತ್ತಿಯ ಮುಂಬೈ ಎದುರು ನಡೆಯಲಿಲ್ಲ ಚೆನ್ನೈ ಆಟ..!
12ನೇ ಆವೃತ್ತಿಯಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಆಲಕರಿಸಬೇಕೆಂಬ ಗುರಿಯೊಂದಿಗೆ ಚೆನ್ನೈ ಕಣಕ್ಕಿಳಿದಿತ್ತು. ಈ ನಿಟ್ಟಿನಲ್ಲಿ ಐಪಿಎಲ್ ಆರಂಭದಲ್ಲಿ ಗೆಲುವಿನ ಸರದಾರನಂತೆ ಮುನ್ನುಗ್ಗುತ್ತಿದ್ದ ಚೆನ್ನೈಗೆ 2 ಬಾರಿ ಬ್ರೇಕ್ ಹಾಕಿತ್ತು. ಇನ್ನೂ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಸೇಡು ತೀರಿಸಿಕೊಳ್ಳಲು ಚೆನ್ನೈ ಕಾದು ಕುಳಿತಿತ್ತು. ಆದ್ರೆ, ಚೆನ್ನೈ ತವರಿನ ಅಂಗಳದಲ್ಲೇ ಧೋನಿಯ ಗೇಮ್ ಪ್ಲಾನ್ ಉಲ್ಟಾ ಮಾಡಿ ಚೆನ್ನೈಗೆ ಶಾಕ್ ನೀಡಿದೆ.
ಪ್ರಸಕ್ತ ಟೂರ್ನಿಯಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಿವೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಲೀಗ್ ಹಂತದ ಮೊದಲ ಪಂದ್ಯದಲ್ಲಿ 37 ರನ್, 2ನೇ ಪಂದ್ಯದಲ್ಲಿ 46 ರನ್ಗಳ ಅಂತರದಿಂದ ಮುಂಬೈ ಗೆದ್ದು ಬೀಗಿತ್ತು. ನಂತರದ ಕ್ವಾಲಿಫೈಯರ್ ಪಂದ್ಯದಲ್ಲಿ 6 ವಿಕೆಟ್ಗಳ ಗೆಲುವು ಸಾಧಿಸಿದೆ.
ಟೂರ್ನಿಯಲ್ಲಿ ಮೂರು ಬಾರಿ ಚೆನ್ನೈ ಸೂಪರ್ ಕಿಂಗ್ಸ್ಗೆ ಮುಂಬೈ ಇಂಡಿಯನ್ಸ್ ಸೋಲುಣಿಸಿದೆ. ಈ ಮೂಲಕ ನಾಲ್ಕನೇ ಬಾರಿಗೆ ಐಪಿಎಲ್ ಕೀರಿಟ ಮುಡಿಗೇರಿಸಿಕೊಳ್ಳುವ ಕನಸು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಫೈನಲ್ ಪ್ರವೇಶಿಸಿದೆ. ಈ ನಡುವೆ ಮುಂಬೈ ಇಂಡಿಯನ್ಸ್ ವಿರುದ್ಧ ಕೂಲ್ ಕ್ಯಾಪ್ಟನ್ ಧೋನಿ ಗೇಮ್ ಪ್ಲಾನ್ ವರ್ಕೌಟ್ ಆಗಲ್ಲ. ಹೀಗಾಗಿಯೇ ಮುಂಬೈಗೆ ಚೆನ್ನೈ ಸೂಪರ್ ಕಿಂಗ್ಸ್ ಶರಣಾಗುತ್ತಿದ ಎಂಬ ಮಾತುಗಳು ಕೇಳಿಬರುತ್ತಿವೆ.