
ಬೆಂಗಳೂರು,ಮೇ 8- ಸಂಪಂಗಿರಾಮನಗರದಲ್ಲಿರುವ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮೇ 10ರಂದು ಸಂಜೆ 6 ಗಂಟೆಗೆ ನಾಡಪ್ರಭು ಕೆಂಪೇಗೌಡ ದಿನಾಚರಣೆ ಹಾಗೂ ಸಂಘದ ಅಧಿಕಾರಿಗಳು ಮತ್ತು ನೌಕರರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಉಪಕಾನೂನು ಸಲಹೆಗಾರ ಮುನಿರಾಜು, ಕಾರ್ಯಪಾಲಕ ಅಭಿಯಂತರ ಬಸವರಾಜ್ ಆರ್.ಕಬಾಡೆ, ಆಯುಕ್ತರ ಆಪ್ತ ಕಾರ್ಯದರ್ಶಿ ರಾಜೇಶ್ವರಿ, ಪೂಜ್ಯ ಮಹಾಪೌರರ ಅಪ್ತ ಕಾರ್ಯದರ್ಶಿ ಮಹದೇವ್, ಸಹಾಯಕ ಕಂದಾಯ ಅಧಿಕಾರಿಗಳಾದ ಎಸ್.ಶ್ರೀನಿವಾಸ್, ಸಿ.ಲಿಂಗಯ್ಯ, ವೀಣಾ, ಮೌಲ್ಯಮಾಪಕ ರವಿ ಮಾರಿಯೊ, ಲೆಕ್ಕ ಅಧೀಕ್ಷಕ ಕೆಂಪೇಗೌಡ, ಹಿರಿಯ ಆರೋಗ್ಯ ಪರವೀಕ್ಷರು ಪೂನಂ ದೇಶನ್ನವರ್, ಕಂದಾಯ ಪರಿವೀಕ್ಷಕರಾದ ಸಾಯಿಶಂಕರ್, ಡಾ.ವೈ.ಎಂ.ಪುಷ್ಪವತಿ ಅವರನ್ನು ಸನ್ಮಾನಿಸಲಾಗುತ್ತಿದೆ.
ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಮೇಯರ್, ಲಂಡನ್ ಬರ್ಹೊ ಆಫ್ ಲ್ಯಾಂಬೆತ್ ಅಧ್ಯಕ್ಷರಾದ ಡಾ.ನೀರಜ್ ಪಾಟೀಲ್, ಬಿಬಿಂಎಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಆಗಮಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ರಾಮು, ಕಸಾಪ ನಿಕಟಪೂರ್ವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ, ನೂತನ ಪಿಂಚಣಿ ಯೋಜನೆ ನೌಕರರ ಸಂಘದ ರಾಜ್ಯಾಧ್ಯಕ್ಷ ರಮೇಶ್.ಜಿ ಸಂಗಾ, ಸದ್ಭಾವನಾ ಟ್ರಸ್ಟ್ನ ಅಧ್ಯಕ್ಷ ಪ್ರಕಾಶ್ಮೂರ್ತಿ, ಸಮಾಜ ಸೇವಕ ಕಿರಣ್ಕುಮಾರ್ ಶೆಟಕಾರ್ ಆಗಮಿಸಲಿದ್ದಾರೆ.